ಐತಿಹಾಸಿಕ ಪಂದ್ಯಕ್ಕೂ ಮುನ್ನ ಎದುರಾಳಿ ಜ್ಯಾಕ್ ಪೌಲ್ ಕಪಾಳಕ್ಕೆ ಹೊಡೆದ ಮೈಕ್ ಟೈಸನ್; ವಿಡಿಯೋ ವೈರಲ್!
ಬಾಕ್ಸಿಂಗ್ ದಂತಕಥೆ 58 ವರ್ಷದ ಮೈಕ್ ಟೈಸನ್ ಮತ್ತು ಯೂಟ್ಯೂಬರ್-ಬಾಕ್ಸರ್ ಜ್ಯಾಕ್ ಪೌಲ್ ನಡುವಿನ ಪಂದ್ಯ ನವೆಂಬರ್ 16 ರಂದು ನಡೆಯಲಿದೆ. ನೆಟ್ ಫ್ಲಿಕ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ರೋಚಕ ಪಂದ್ಯಕ್ಕೆ ಡಲ್ಲಾಸ್ ಕೌಬಾಯ್ಸ್‌ನ AT&T ಸ್ಟೇಡಿಯಂ ಸಾಕ್ಷಿಯಾಗಲಿದೆ. ಈ ಐತಿಹಾಸಿಕ ಬಾಕ್ಸಿಂಗ್ ಪಂದ್ಯವನ್ನು ನೆಟ್‌ಫ್ಲಿಕ್ಸ್ ಪ್ರಸಾರ ಮಾಡಲಿದ್ದು, ಜ್ಯಾಕ್ ಪೌಲ್ ಮತ್ತು ಮೈಕ್ ಟೈಸನ್ ಕಾದಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆದ ತೂಕದ ಸಮಯದಲ್ಲಿ ಮಾಜಿ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ತಮ್ಮ ಪ್ರತಿಸ್ಪರ್ಧಿ ಜ್ಯಾಕ್ ಪೌಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಟೈಸನ್ ಮಾಡಿದ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಟೈಸನ್ ಕಪಾಳಮೋಕ್ಷ ಮಾಡುತ್ತಿದ್ದಂತೆ ಜ್ಯಾಕ್ ಪಾಲ್ ಪ್ರತಿರೋಧ ವ್ಯಕ್ತಡಿಸಿದರು. ಈ ವೇಳೆ ವೇದಿಕೆ ಮೇಲೆ
ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಭದ್ರತಾ ಸಿಬ್ಬಂದಿಗಳು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ರಿಂಗ್‌ಗೆ ಮರಳಿದ ಟೈಸನ್
ಮೈಕ್ ಟೈಸನ್ ಕೊನೆಯದಾಗಿ 2005ರಲ್ಲಿ ರಿಂಗ್ ಒಳಗೆ ಕಾಣಿಸಿಕೊಂಡಿದ್ದರು. ಇದಾದ ನಂತರ 2020 ರಲ್ಲಿ ರಾಯ್ ಜೋನ್ಸ್ ಜೂನಿಯರ್ ವಿರುದ್ಧ ಟೈಸನ್ ಸೆಣಸಾಡಿದ್ದರು. ಇದೀಗ 19 ವರ್ಷದ ಹಿಂದೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಟೈಸನ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 27ವರ್ಷದ ಅಮೆರಿಕನ್ ವೃತ್ತಿಪರ ಬಾಕ್ಸರ್, ನಟ ಮತ್ತು ಯೂಟ್ಯೂಬರ್ ಆಗಿರುವ ಪೌಲ್ ಅವರು ಟೈಸನ್ ಎದುರಿಸಲಿದ್ದಾರೆ.
ಟೈಸನ್ ಮತ್ತು ಪೌಲ್ ನಡುವಿನ ಕಾದಾಟ ತೀವ್ರ ಕುತೂಹಲ ಮೂಡಿಸಿದೆ. 58 ವರ್ಷ ವಯಸ್ಸಿನ ಟೈಸನ್ ಅವರ ಈ ನಿರ್ಧಾರಕ್ಕೆ ಹಲವರು ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಟೆಕ್ಸಾಸ್ ರಾಜ್ಯದ ಅಧಿಕಾರಿಗಳು ಪಂಚ್‌ಗಳ ಪ್ರಭಾವವನ್ನು ಕಡಿಮೆ ಮಾಡಲು, 8 ಸುತ್ತಿನ ಎರಡು ನಿಮಿಷಗಳ ಸುತ್ತುಗಳ ಪಂದ್ಯವನ್ನು ಭಾರವಾದ ಕೈಗವಸುಗಳೊಂದಿಗೆ ಆಡಲು ಅವಕಾಶ ನೀಡಿದ್ದಾರೆ. ಈ ಪಂದ್ಯಕ್ಕಾಗಿ ಟೈಸನ್ 20 ಮಿಲಿಯನ್ ಡಾಲರ್ ಅನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications