For Quick Alerts
ALLOW NOTIFICATIONS  
For Daily Alerts

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದ ನಿಖತ್ ಝರೀನ್ ಮತ್ತು ಲೊವ್ಲಿನಾ ಬೊರ್ಗೊಹೈನ್

Nikhat Zareen And Lovlina Shine As Indian Women Boxers Clinch Gold At World Championships 2023

ಮಾರ್ಚ್ 26ರಂದು ಭಾನುವಾರ ನಡೆದ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ 2023ರ ಫೈನಲ್‌ನಲ್ಲಿ ಭಾರತದ ಬಾಕ್ಸಿಂಗ್ ತಾರೆ ನಿಖತ್ ಜರೀನ್ ವಿಯೆಟ್ನಾಂನ ನ್ಗುಯೆನ್ ಥಾಮ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

70 ಕೆಜಿ ವಿಭಾಗದಲ್ಲಿ ಭಾರತದ ಮತ್ತೊಬ್ಬ ಬಾಕ್ಸಿಂಗ್ ತಾರೆ, 2020 ರ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಫೈನಲ್‌ನಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದರು.

ನಿಖತ್ ಜರೀನ್ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮೇರಿ ಕೋಮ್ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ. 28-27, 28-27, 28-27, 29-26 ಮತ್ತು 28-27 ಸ್ಕೋರ್ ಮೂಲಕ ನಿಖತ್ ಗೆಲುವು ಸಾಧಿಸಿದರು. 50 ಕೆಜಿ ವಿಭಾಗದಲ್ಲಿ ನಿಖತ್‌ಗೆ ಇದು ಮೊದಲನೇ ಪದಕವಾಗಿದೆ.

ಕಳೆದ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರು 52 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಇಂದಿನ ಫೈನಲ್ ಪಂದ್ಯದಲ್ಲಿ ನಿಖತ್ ಮತ್ತು ನ್ಗುಯೆನ್ ಭಾರಿ ಪೈಪೋಟಿಯಿಂದಲೇ ಆರಂಭಿಸಿದರು. ಆದರೂ, ನಿಖತ್ ಪ್ರದರ್ಶನದ ಮೇಲೆ ಹಿಡಿತ ಸಾಧಿಸಿದರು, ನಿರಂತರ ಸ್ಟ್ರೈಕ್‌ ಮೂಲಕ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದರು.

ಎರಡನೇ ಸುತ್ತಿನಲ್ಲೂ ನಿಖತ್ ಅತ್ಯುತ್ತಮ ಆಟವನ್ನು ಮುಂದುವರೆಸಿದರು. ಅಂತಿಮ ಸುತ್ತಿನಲ್ಲಿ ಇಬ್ಬರೂ ಬಾಕ್ಸರ್‌ಗಳು ಮತ್ತೊಮ್ಮೆ ತೀವ್ರ ಪೈಪೋಟಿ ನಡೆಸಿದರು, ಕೊನೆಗೆ ನಿಖತ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.

Nikhat Zareen And Lovlina Shine As Indian Women Boxers Clinch Gold At World Championships 2023

ಮಿಂಚು ಹರಿಸಿದ ಲೊವ್ಲಿನಾ ಬೊರ್ಗೊಹೈನ್

2023 ರ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕವನ್ನು ಲೊವ್ಲಿನಾ ಬೊರ್ಗೊಹೈನ್ ಗೆದ್ದುಕೊಟ್ಟರು. 70 ಕೆಜಿ ವಿಭಾಗದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು ಸೋಲಿಸಿದರು.

ಲೊವ್ಲಿನಾ ತಮ್ಮ ಎತ್ತರದ ಲಾಭವನ್ನು ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಮೊದಲನೇ ಸುತ್ತಿನಲ್ಲಿ ಲವ್ಲಿನಾ ಗೆದ್ದರು. ಎರಡನೇ ಸುತ್ತಿನಲ್ಲಿ ಕೈಟ್ಲಿನ್ ಪಾರ್ಕರ್ ತಿರುಗಿ ಬಿದ್ದರಯ, ಎರಡನೇ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಅಂತಿಮ ಸುತ್ತಿನಲ್ಲಿ ಒತ್ತಡದಲ್ಲಿ ಇಬ್ಬರೂ ಬಾಕ್ಸರ್‌ಗಳು ಆಲ್ ಔಟ್ ಆದರು. ಕೊನೆಯ ಹಂತದಲ್ಲಿ ಮೇಲುಗೈ ಸಾಧಿಸಿದ ಲೊವ್ಲಿನಾ ಪಾರ್ಕರ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು.

ಈ ಮೂಲಕ ಭಾರತ ಇದುವರೆಗೂ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಶನಿವಾರ ನಡೆದ ಫೈನಲ್ ಪಂದ್ಯಗಳಲ್ಲಿ ನಿತು ಘಂಘಾಸ್ ಮತ್ತು ಸ್ವೀಟಿ ಬೋರಾ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.

Story first published: Sunday, March 26, 2023, 22:18 [IST]
Other articles published on Mar 26, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+