ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸತೀಶ್ ಕುಮಾರ್

ಟೋಕಿಯೋ, ಜುಲೈ 29: ಟೋಕಿಯೋ ಒಲಿಂಪಿಕ್ಸ್‌ನ ಏಳನೇ ದಿನವಾದ ಗುರುವಾರದಂದು ಭಾರತೀಯ ಕ್ರೀಡಾಪಟುಗಳು ಮಿಂಚು ಹರಿಸುತ್ತಿದ್ದಾರೆ. ಇದುವರೆಗೂ ಒಟ್ಟು 3 ವಿಭಾಗಗಳಲ್ಲಿ ಒಂದೇ ದಿನ ಭಾರತೀಯ ಕ್ರೀಡಾಪಟುಗಳು ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಮೊದಲಿಗೆ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ ವಿ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡರೆ ತದನಂತರ ಭಾರತದ ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಮಾಡಿತು.
ಇದೀಗ ಭಾರತದ ಬಾಕ್ಸರ್ ಸತೀಶ್ ಕುಮಾರ್ ಕೂಡ ಬಾಕ್ಸಿಂಗ್ (91 ಕೆಜಿ) ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡುವುದರ ಮೂಲಕ ತಮ್ಮ ಮೊದಲನೇ ಒಲಿಂಪಿಕ್ಸ್‌ನಲ್ಲಿಯೇ ಸದ್ದು ಮಾಡುತ್ತಿದ್ದಾರೆ. ತಮ್ಮ ಎದುರಾಳಿ ಜಮೈಕಾ ದೇಶದ ರಿಚರ್ಡೋ ಬ್ರೌನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಸತೀಶ್ ಕುಮಾರ್ ಶುಭಾರಂಭ ಮಾಡಿದ್ದಾರೆ.
2018ರ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ಸತೀಶ್ ಕುಮಾರ್ ಮೇಲೆ ಕ್ರೀಡಾಭಿಮಾನಿಗಳಲ್ಲಿ ನಿರೀಕ್ಷೆಯಿದ್ದು ಮುಂಬರುವ ಪಂದ್ಯಗಳಲ್ಲಿ ಸತೀಶ್ ಕುಮಾರ್ ಯಾವ ರೀತಿ ಪ್ರದರ್ಶನವನ್ನು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications