Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಬಾಕ್ಸರ್ ಮೇರಿ ಕೋಮ್‌ಗೆ ಸೋಲು

Tokyo Olympics 2021: Mary Kom knocked out after losing in Round of 16

ಟೋಕಿಯೋ: ಗುರುವಾರ (ಜುಲೈ 29) ನಡೆದ ಟೋಕಿಯೋ ಒಲಿಂಪಿಕ್ಸ್ ಮಹಿಳಾ 51 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಬಾಕ್ಸರ್, ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಸೋತಿದ್ದಾರೆ. ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಗೆಲ್ಲುವ ಮೇರಿ ಕನಸು ಇಲ್ಲಿಗೆ ಕೊನೆಯಾಗಿದೆ.

38ರ ಹರೆಯದ ಮೇರಿ ಕೋಮ್ ಅವರು ಕೊಲಂಬಿಯಾದ ಇಂಗ್ರಿಟ್ ಲೊರೆನಾ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ 3-2ರ ಅಂತರದಲ್ಲಿ ಪರಾಭವಗೊಂಡಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೇರಿ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದರು. ಆದರೆ ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ ಕೋಮ್ ತಲೆ ಬಾಗಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಇಂಗ್ರಿಟ್ ಲೊರೆನಾ ವೇಲೆನ್ಸಿಯಾ ವಿಕ್ಟೋರಿಯಾ ಕಂಚಿನ ಪದಕ ಗೆದ್ದಿದ್ದರು. ಸ್ಪರ್ಧೆಯ ಆರಂಭದಿಂದಲೂ ಇಂಗ್ರಿಟ್ ಲೊರೆನಾ ದಿಟ್ಟ ಗುದ್ದಾಟಕ್ಕೆ ಮುಂದಾಗಿದ್ದು ಕಾಣಿಸಿತು. ಮೇರಿ ಕೂಡ ತಕ್ಕ ಮಟ್ಟಿಗೆ ಎದುರೇಟು ನೀಡಿದರಾದರೂ ಅಂತಿಮವಾಗಿ ಇಂಗ್ರಿಟ್ ಮೇಲುಗೈ ಸಾಧಿಸಿದ್ದಾರೆ.

ಈ ಸ್ಪರ್ಧೆಯ ಫಲಿತಾಂಶದೊಂದಿಗೆ ಜಪಾನ್‌ ತಂಡ 15 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೀನಾ ತಂಡ 14 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಒಂದೇ ಬೆಳ್ಳಿ ಪದಕದೊಂದಿಗೆ ಭಾರತ 46ನೇ ಸ್ಥಾನದಲ್ಲಿದೆ.

Story first published: Friday, July 30, 2021, 9:54 [IST]
Other articles published on Jul 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+