For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

Tokyo Olympics 2021: Satish Kumar exits after losing to Bakhodir Jalolov in quarterfinals

ಟೋಕಿಯೋ: ಭಾನುವಾರ (ಆಗಸ್ಟ್ 1) ನಡೆದ ಟೋಕಿಯೋ ಒಲಿಂಪಿಕ್ಸ್‌ ಪುರುಷರ ಹೆವಿವೇಟ್ (91+ ಕೆಜಿ) ಬಾಕ್ಸಿಂಗ್‌ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಬಾಕ್ಸರ್ ಸತೀಶ್ ಕುಮಾರ್ ಸೋಲನುಭವಿಸಿದ್ದಾರೆ. ಉಜ್ಬೇಕಿಸ್ತಾನದ ಬಖೋಡಿರ್ ಜಲೋವ್ ಎದುರು ದಿಟ್ಟ ಹೋರಾಟ ನಡೆಸಿ ಸೋತಿರುವ ಕುಮಾರ್ ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರ ನಡೆದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಮುನ್ನ ಸತೀಶ್‌ ಮುಖಕ್ಕೆ ತೀವ್ರ ಗಾಯವಾಗಿತ್ತು. ಗಾಯಕ್ಕೆ ಹೊಲಿಗೆಗಳನ್ನು ಹಾಕಲಾಗಿತ್ತು.

ಭಾನುವಾರದ ಪಂದ್ಯದಲ್ಲಿ ಸತೀಶ್ ಕುಮಾರ್ ಭಾಗವಹಿಸೋದೇ ಅನುಮಾನವಾಗಿತ್ತು. ಯಾಕೆಂದರೆ ಸತೀಶ್ ಕಣ್ಣಿನ ಸಮೀಪದಲ್ಲಿ ತೀವ್ರ ಗಾಯವಾಗಿ ಅಲ್ಲಿಗೆ ಹೊಲಿಗೆಗಳನ್ನು ಹಾಕಲಾಗಿತ್ತು. ಆದರೆ ದೇಶಕ್ಕೆ ಪದಕ ಗೆಲ್ಲುವ ಛಲದೊಂದಿಗೆ ಸತೀಶ್ ರಿಂಗ್‌ಗೆ ಇಳಿದಿದ್ದರಾದರೂ ಬಲಿಷ್ಠ ಬಖೋಡಿರ್ ಜಲೋವ್ ಎದುರು ಶರಣಾಗಿದ್ದಾರೆ.

ಹಣೆ, ಗಲ್ಲಕ್ಕೆ ಗಾಯ

ಹಣೆ, ಗಲ್ಲಕ್ಕೆ ಗಾಯ

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ ಭರ್ಜರಿ ಗುದ್ದಾಟ ನಡೆಸಿದ್ದರಿಂದ ಸತೀಶ್ ಹಣೆ ಮತ್ತು ಗಲ್ಲದ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಆದರೂ ಸೋಲೊಪ್ಪಿಕೊಳ್ಳದೆ ಸತೀಶ್ ಅವರು ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಮುನ್ನಡೆ ಗಿಟ್ಟಿಸಿಕೊಂಡಿದ್ದರು. ಸತೀಶ್ ದಿಟ್ಟ ಗುದ್ದಾಟವೇ ಅವರನ್ನು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಂತೆ ಮಾಡಿತ್ತು.
32ರ ಹರೆಯದ ಆರ್ಮಿ ಮ್ಯಾನ್ ಸತೀಶ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಬಖೋಡಿರ್ ಜಲೋವ್ ಮಧ್ಯೆ ಕೂಡ ಭರ್ಜರಿ ಗುದ್ದಾಟ ನಡೆದಿತ್ತು. 27ರ ಹರೆಯದ ಜಲೋವ್ ಮುಂದೆ ಸತೀಶ್ ತನ್ನ ಅನುಭವ ಮುಂದಿಟ್ಟು ಸೆಣಸಾಡಿದರು. ಆದರೆ ಹಿಂದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಸತೀಶ್ ಪದಕದತ್ತ ಸಾಗಲಾಗಲಿಲ್ಲ.

ಕೈತಪ್ಪಿದ ಕಂಚು

ಕೈತಪ್ಪಿದ ಕಂಚು

ಕ್ವಾರ್ಟರ್ ಫೈನಲ್ ಪಂದ್ಯದ ಗುದ್ದಾಟದ ವೇಳೆ ಸತೀಶ್ ಕುಮಾರ್ ಗಲ್ಲಕ್ಕೆ ಗಾಯವಾಗಿ ಮೇಲಿನ ಚರ್ಮ ತೆರೆದುಕೊಂಡಿತ್ತು. ಭಾರತೀಯ ಬಾಕ್ಸರ್‌ನ ದಿಟ್ಟತನ ಕಂಡು ಎದುರಾಳಿ ಬಖೋಡಿರ್ ಜಲೋವ್ ಕೂಡ ಒಮ್ಮೆ ತಬ್ಬಿಬ್ಬಾಗಿದ್ದರು. ಆದರೆ ಅಂತಿಮವಾಗಿ ಜಲೋವ್ ಕೈ ಮೇಲಾಯಿತು. ಅಂದ್ಹಾಗೆ ಸತೀಶ್ ಜೊತೆ ಸೆಣಸಾಡಿದ ಜಲೋವ್ ಒಬ್ಬ ಫುಟ್ಬಾಲರ್. ಆದರೆ ಈಗ ಬಾಕ್ಸಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಸತೀಶ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿರುವ ಜಲೋವ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ಚೊಚ್ಚಲ ಪದಕ ಖಾತರಿಪಡಿಸಿಕೊಂಡಿದ್ದಾರೆ. ಒಲಿಂಪಿಕ್ಸ್‌ಗೆ ಪ್ರವೇಶಿಸುವ ಮೂಲಕ ಸತೀಶ್ ಕೂಡ ಇತಿಹಾಸ ನಿರ್ಮಿಸಿದ್ದರು. ಯಾಕೆಂದರೆ ಒಲಿಂಪಿಕ್ಸ್‌ನಲ್ಲಿ ಹೆವಿವೇಟ್ ವಿಭಾಗದಲ್ಲಿ ಭಾರತದಿಂದ ಇದುವರೆಗೆ ಯಾರೂ ಆಯ್ಕೆಯಾಗಿರಲಿಲ್ಲ.

ಭಾರತಕ್ಕೆ 2 ಪದಕಗಳು

ಭಾರತಕ್ಕೆ 2 ಪದಕಗಳು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಭಾರತಕ್ಕೆ ಬೇರೆ ಪದಕಗಳು ಸಿಕ್ಕಿಲ್ಲ. 1 ಆಗಸ್ಟ್ 12 PM ವೇಳೆ ಭಾರತದ ಖಾತೆಯಲ್ಲಿ ಕೇವಲ ಒಂದು ಬೆಳ್ಳಿ ಪದಕ ಮಾತ್ರ ಇತ್ತು. ಆದರೆ ಮಹಿಳಾ ಬಾಕ್ಸಿಂಗ್ 69 ಕೆಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಲವ್ಲಿನಾ ಬೊರ್ಗೊಹೈನ್ ಈಗಾಗಲೇ ಭಾರತಕ್ಕೆ ಮತ್ತೊಂದು ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಅದು ಬಿಟ್ಟರೆ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿವಿ ಸಿಂಧುಗೆ ಕಂಚಿನ ಪದಕ, ಮಹಿಳಾ ಡಿಸ್ಕಸ್ ಥ್ರೋನಲ್ಲಿ ಪದಕ ಸಿಗುವ ನಿರೀಕ್ಷೆಯಿದೆ. ಉಳಿದಂತೆ ಶೂಟಿಂಗ್, ಆರ್ಚರಿ, ಟೆನಿಸ್, ಟೇಬಲ್ ಟೆನಿಸ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕದಾಸೆ ಇಲ್ಲವಾಗಿದೆ.

Story first published: Sunday, August 1, 2021, 11:59 [IST]
Other articles published on Aug 1, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+