ಟೋಕಿಯೋ ಒಲಿಂಪಿಕ್ಸ್: ಭಾರತದ ಹೊಸ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಬಗ್ಗೆ ಕುತೂಹಲಕಾರಿ ಮಾಹಿತಿ!

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನೂತನ ಪದಕ ವಿಜೇತೆಯ ಹೆಸರು ಈಗಾಗಲೇ ಬಹಿರಂಗವಾಗಿದೆ. ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ದೇಶಕ್ಕೆ ಎರಡನೇ ಪದಕ ಖಾತರಿಪಡಿಸಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ದೇಶಕ್ಕೆ ಬೆಳ್ಳಿ ಪದಕ ಗೆದ್ದ ಬಳಿಕ ದೇಶಕ್ಕೆ ಎರಡನೇ ಪದಕ ಖಾತ್ರಿಯಾಗಿದೆ. ಜುಲೈ 30ರಂದು ಅಂದರೆ ಟೋಕಿಯೋ ಒಲಿಂಪಿಕ್ಸ್ ಶುರುವಾಗಿ ಒಂದು ವಾರದ ಬಳಿಕ ಭಾರತಕ್ಕೆ ಮತ್ತೊಂದು ಪದಕ ಖಾತರಿಯಾಗಿದೆ.
ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಈ ಗೆಲುವಿನೊಂದಿಗೆ ಭಾರತಕ್ಕೆ ಕಂಚಿನ ಪದಕವಂತೂ ಗ್ಯಾರಂಟಿಯಾಗಿದೆ. ಸೆಮಿಫೈನಲ್‌ನಲ್ಲಿ ಫಲಿತಾಂಶ ಕಂಚು ಅಥವಾ ಬೆಳ್ಳಿ ಪದಕವನ್ನು ನಿರ್ಧರಿಸಲಿದೆ.

ಯಾರೀ ಲವ್ಲಿನಾ ಬೊರ್ಗೊಹೈನ್?
ಒಲಿಂಪಿಕ್ಸ್ ಇತಿಹಾಸದಲ್ಲೇ ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಖಾತ್ರಿಯಾಗುತ್ತಿರುವುದು ಇದು ಬಲು ಅಪರೂಪ. 23ರ ಹರೆಯದ ಅಸ್ಸಾಂ ಹುಡುಗಿ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಗೆ ಪ್ರವೇಶಿಸುತ್ತಲೇ ದೇಶಕ್ಕೆ ಎರಡನೇ ಪದಕ ಖಾತ್ರಿಯಾಗಿದೆ. ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ನಲ್ಲಿ ಯಾರೇ ಸೋತರೂ ಕಂಚಿನ ಪದಕವಂತೂ ಸಿಗಲಿದೆ. ಹೀಗಾಗಿ ಲವ್ಲಿನಾಗೆ ಪದಕವಂತೂ ಖಾತ್ರಿಯಾಗಿದೆ. ಸೆಮಿಫೈನಲ್‌ನಲ್ಲಿ ಲವ್ಲಿನಾ ಗೆದ್ದರೆ ಚಿನ್ನ ಅಥವಾ ಬೆಳ್ಳಿ ಪದಕ ಖಾತ್ರಿಯಾಗಲಿದೆ. ಇದಕ್ಕೂ ಹಿಂದಿನ ದಿನ ಹೆಚ್ಚಿನ ನಿರೀಕ್ಷೆಯಿದ್ದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಅವರು 51 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಕೊಲಂಬಿಯಾದ ಇಂಗ್ರಿಟ್ ಲೊರೆನಾ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ ಕೋಮ್ 3-2ರ ಅಂತರದಲ್ಲಿ ಪರಾಭವಗೊಂಡು ನಿರಾಸೆ ಮೂಡಿಸಿದ್ದರು.

ಒಲಿಂಪಿಕ್ಸ್‌ನಲ್ಲಿ ಒಟ್ಟಿಗೆ 3 ಪದಕಗಳು
ಭಾರತೀಯ ಒಲಿಂಪಿಕ್ಸ್ ಇತಿಹಾಸದಲ್ಲೇ ಲವ್ಲಿನಾ ಬೊರ್ಗೊಹೈನ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಯಾಕೆಂದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತೀಯರ ಪರ ಪದಕ ಗೆದ್ದಿರುವುದು ಬಲು ಅಪರೂಪ. ಇಲ್ಲೀವರೆಗೆ ಬರೀ ಇಬ್ಬರಷ್ಟೇ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದಾರೆ. ಅವರೆಂದರೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂಜರ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಕೂಡ ಕಂಚಿನ ಪದಕ ಗೆದ್ದಿದ್ದರು. ಹೀಗಾಗಿ ಲವ್ಲಿನಾ ಕಂಚಿಗೆ ಹೊರತಾಗಿ ಬೇರೆ ಪದಕ ಗೆದ್ದರೂ ಅದೂ ಕೂಡ ಹೊಸ ದಾಖಲೆಯಾಗಿ ಗುರುತಿಸಿಕೊಳ್ಳಲಿದೆ.

ಲವ್ಲಿನಾ ಬೊರ್ಗೊಹೈನ್ ಬಗ್ಗೆ ಮಾಹಿತಿಗಳು
* ಹೆಸರು: ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್)
* ಹುಟ್ಟಿದ ದಿನಾಂಕ: ಅಕ್ಟೋಬರ್ 2, 1997
* ಹುಟ್ಟಿದ ಸ್ಥಳ: ಗೋಲಘಾಟ್, ಅಸ್ಸಾಂ
* ಕ್ರೀಡೆ/ಈವೆಂಟ್ (ಗಳು): ಬಾಕ್ಸಿಂಗ್ (ವೆಲ್ಟರ್ ವೇಟ್ - 69 ಕೆಜಿ)

ಪ್ರಮುಖ ಸಾಧನೆಗಳು
* 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಖಚಿತ ಪದಕ
* 2021 ದುಬೈ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು (ವೆಲ್ಟರ್‌ವೈಟ್ ವಿಭಾಗ)
* 2019 ರ ಉಲಾನ್-ಉಡೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು (ವೆಲ್ಟರ್‌ವೈಟ್ ವಿಭಾಗ)
* 2018 ನ್ಯೂ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು (ವೆಲ್ಟರ್‌ವೈಟ್ ವಿಭಾಗ)
* 2017 ಹೋ ಚಿ ಮಿನ್ಹ್ ಸಿಟಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು (ವೆಲ್ಟರ್‌ವೈಟ್ ವಿಭಾಗ)
* ಬಾಕ್ಸಿಂಗ್ ನಲ್ಲಿನ ಸಾಧನೆಗಾಗಿ ಅರ್ಜುನ ಪ್ರಶಸ್ತಿ - 2020
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications