ಹೆರ್ನಾಂಡೆಜ್ ಗಾರ್ಸಿಯಾ ಸೋಲಿಸಿ ಮುನ್ನಡೆ ಸಾಧಿಸಿದ ಮೇರಿ ಕೋಮ್

ಟೋಕಿಯೋ: 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಭಾರತದ ಭರವಸೆಯ ಬಾಕ್ಸರ್ ಎಂಸಿ ಮೇರಿ ಕೋಮ್ (51 ಕೆಜಿ) ಅವರು ಟೋಕಿಯೋ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್‌ನ ಆರಂಭಿಕ ಸುತ್ತಿನಲ್ಲಿ ಡೊಮೆನಿಕನ್ ರಿಪಬ್ಲಿಕ್‌ನ ಮಿಗುಯೆಲಿನ ಹೆರ್ನಾಂಡೆಜ್ ಗಾರ್ಸಿಯಾ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
2012ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚು ಗೆದ್ದಿದ್ದ 38ರ ಹರೆಯದ ಮೇರಿ ಕೋಮ್ ಅವರು ಮಿಗುಯೆಲಿನ ಹೆರ್ನಾಂಡೆಜ್ ಗಾರ್ಸಿಯಾ ಎದುರು 4-1ರ ಜಯ ದಾಖಲಿಸಿದ್ದಾರೆ. ಅಂದ್ಹಾಗೆ ಕೋಮ್ ಪ್ರತಿಸ್ಪರ್ಧಿ ಹೆರ್ನಾಂಡೆಜ್ ಗಾರ್ಸಿಯಾ ಅವರು ಮೇರಿಗಿಂತ 15 ವರ್ಷ ಚಿಕ್ಕವರು ಮತ್ತು ಪಾನ್ ಅಮೆರಿಕನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದವರು.
ಕೋಮ್ ಎದುರು ಹೆರ್ನಾಂಡೆಜ್ ಗಾರ್ಸಿಯಾ ಸುಲಭ ಸೋಲನುಭವಿಸಿಲ್ಲ. ಬದಲಿಗೆ ಮೇರಿಗೆ ಉತ್ತಮ ಪೈಪೋಟಿ ನೀಡಿದ್ದ ಕಾಣಿಸಿತು. ನಾಲ್ಕು ಮಕ್ಕಳ ತಾಯಿಯಾಗಿರುವ ಮೇರಿ ಮುಂದಿನ ಸುತ್ತಿನಲ್ಲಿ 3ನೇ ವಿಶ್ವ ಶ್ರೇಯಾಂಕಿತೆ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೆಣಸಾಡಲಿದ್ದಾರೆ.
ಇಂಗ್ರಿಟ್ ವೇಲೆನ್ಸಿಯಾ ಅವರು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದವರು. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications