ಒಲಿಂಪಿಕ್ಸ್ ಪದಕ ವಿಜೇತೆ ಬಾಕ್ಸರ್‌ರಿಂದ ಅಧಿಕಾರಿಗಳ ವಿರುದ್ಧ ದೂರು: IOA ತನಿಖೆ
ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ನಿವೃತ್ತ ಕರ್ನಲ್ ಅರುಣ್ ಮಲಿಕ್, ತನಗೆ ಅಗೌರವ ನೀಡಿದ್ದು ಮತ್ತು ತಾರತಮ್ಯದ ವರ್ತನೆ ತೋರಿದ್ದಾರೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಆರೋಪಿಸಿದ್ದಾರೆ. ಈ ಪ್ರಕರಣ ಈಗ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಈ ಬಗ್ಗೆ ಎರಡು ಪುಟಗಳ ದೂರನ್ನು ನೀಡಿದ್ದಾರೆ. ಈ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ತನಿಖೆ ಆರಂಭಿಸಿದೆ.
ಕಳೆದ ತಿಂಗಳು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಸಭೆ ನಡೆಯಿತು. ಈ ಸಭೆಯಲ್ಲಿ ಭಾರತದ ಸ್ಟಾರ್ ಬಾಕ್ಸಿಂಗ್ ತಾರೆ ಲೊವ್ಲಿನಾ ಬೊರ್ಗೊಹೈನ್ ಸಹ ಜೂಮ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಕರ್ನಲ್ ಮಲಿಕ್ ತಮ್ಮೊಂದಿಗೆ ಅತ್ಯಂತ ಅಗೌರವ ಮತ್ತು ಅವಹೇಳನಕಾರಿಯಾಗಿ ವರ್ತಿಸಿದ್ದಾರೆ ಮಹಿಳಾ ಬಾಕ್ಸರ್ ಆರೋಪಿಸಿದ್ದಾರೆ.

ಈ ದೂರು ಬಂದ ತಕ್ಷಣ ಸರ್ಕಾರ ಸಹ ಎಚ್ಚೆತ್ತುಕೊಂಡಿದ್ದು ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಟಾಪ್ಸ್ (TOPS) ಸಿಇಒ ನಚತ್ತರ್ ಸಿಂಗ್ ಜೋಹಲ್, ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಮತ್ತು ಮಹಿಳಾ ವಕೀಲರನ್ನು ಈ ಸಮಿತಿ ಒಳಗೊಂಡಿದೆ. ಈ ಸಮತಿ ಎರಡು ವಾರಗಳಲ್ಲಿ ಈ ಪ್ರಕರಣದ ವರದಿಯನ್ನು ನೀಡಬೇಕಿತ್ತು. ಆದರೆ ಈಗ ಒಂದು ತಿಂಗಳು ಕಳೆದರೂ ಸಹ ವರದಿ ಸಲ್ಲಿಸಿಲ್ಲ. ಇನ್ನು ಸಾಯ್ ಸಹ ಈ ಪ್ರಕರಣವನ್ನು ಪ್ರತೇಕವಾಗಿ ತನಿಖೆ ಮಾಡುತ್ತಿದೆ.
ಬಾಕ್ಸರ್ ಲೋವ್ಲಿನಾ ಬರೆದ ಪತ್ರದಲ್ಲಿ ಏನಿದೆ?
ಈ ಪತ್ರವನ್ನು ನಾನು ಒಬ್ಬ ಬಾಕ್ಸಿಂಗ್ ಆಟಗಾರ್ತಿಯಾಗಿ ಅಲ್ಲ. ಒಬ್ಬ ಮಹಿಳೆಯಾಗಿ ಬರೆಯುತ್ತಿದ್ದೇನೆ. ಜುಲೈ 8 ರಂದು ಟಾಪ್ಸ್ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಲ್ ಮಲಿಕ್ ಅವರು ನನ್ನ ಮೇಲೆ ಕೂಗಿದರು. ಅಲ್ಲದೆ ನಾನು ಹೇಳುತ್ತಿರುವುದನ್ನು ತಲೆ ತಗ್ಗಿಸಿ ಮಾಡಿ ಎಂದು ಹಳಿದರು. ಕರ್ನಲ್ ಮಲಿಕ್ ಅವರ ನಡುವಳಿಕೆ ಅವಮಾನಕರವಾಗಿತ್ತು. ತಾರತಮ್ಯ ಮತ್ತು ಮಹಿಳೆಯರ ಮೇಲಿನ ಅಧಿಕಾರ ಪ್ರದರ್ಶನ ಇವರ ವರ್ತನೆಯಲ್ಲಿ ಎದ್ದು ಕಂಡಿತ್ತು ಎಂದು ಬಾಕ್ಸರ್ ಆರೋಪಿಸಿದ್ದಾರೆ.
ಲೋವ್ಲಿನಾ ತಾನು ಬರೆದ ದೂರನ್ನು ಯಾರಿಗೆಲ್ಲಾ ಕಳುಹಿಸಿದ್ದಾರೆ?
ಲೊವ್ಲಿನಾ ಈ ದೂರನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಸಾಯಿ (SAI), ಟಾಪ್ಸ್ (TOPS) ವಿಭಾಗ, ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ (IOA) ಮತ್ತು ಬಾಕ್ಸಿಂಗ್ ಫೆಡರೇಶನ್‌ನ ಮಹಾನಿರ್ದೇಶಕರಿಗೆ ಕಳುಹಿಸಿದ್ದಾರೆ.
ವಿವಾದಕ್ಕೆ ಕಾರಣ ಏನು?
ಲೊವ್ಲಿನಾ ತನ್ನ ವೈಯಕ್ತಿಕ ತರಬೇತುದಾರ ಪ್ರಣಮಿಕಾ ಬೊರೊ ಅವರ ಜೊತೆ ಅಭ್ಯಾಸ ಮುಂದುವರೆಸಲು ಮತ್ತು ಯುರೋಪಿನಲ್ಲಿ ತರಬೇತಿ ಪಡೆಯಲು ಅನುಮತಿ ಕೋರಿದಾಗ ವಿವಾದ ಪ್ರಾರಂಭವಾಯಿತು.
ಕರ್ನಲ್ ಮಲಿಕ್ ಹೇಳುವುದೇನು?
ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ನಿವೃತ್ತ ಕರ್ನಲ್ ಅರುಣ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಜುಲೈ 8 ರಂದು ನಡೆದ ಸಭೆ ವೃತ್ತಿಪರ ರೀತಿಯಲ್ಲಿ ನಡೆದಿದೆ. ಇದರ ರೆಕಾರ್ಡಿಂಗ್ ಸಹ ಇದೆ ಎಂದು ಅವರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications