ಸೆಪ್ಟೆಂಬರ್ ನಲ್ಲಿನ ಕುತೂಹಲಕಾರಿ ಗುದ್ದಾಟದ ಸುಳಿವಿತ್ತ ವಿಜೇಂದರ್

ಕೋಲ್ಕತ್ತಾ, ಜುಲೈ 17: ಕಾಮನ್ವೆಲ್ತ್ ಸೂಪರ್ ಮಿಡ್ಲ್ ವೇಟ್ ಪ್ರಶಸ್ತಿಗಾಗಿ ಜುಲೈ ತಿಂಗಳಲ್ಲಿ ನಡೆಯಬೇಕಿದ್ದ ಬಹು ನಿರೀಕ್ಷಿತ ಪಂದ್ಯ ಸೆಪ್ಟೆಂಬರ್ ನಲ್ಲಿ ನಡೆಯಲಿದೆ ಎಂದು ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ತಿಳಿಸಿದ್ದಾರೆ. ಆದರೆ ಅನುಭವಿ ಬಾಕ್ಸರ್ ಎದುರು ಕಾದಾಡುವವರ್ಯಾರು ಅನ್ನೋದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಕೋಲ್ಕತ್ತಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜೇಂದರ್, 'ರದ್ದಾಗಿದ್ದ ಬಹು ನಿರೀಕ್ಷಿತ ಬಾಕ್ಸಿಂಗ್ ಪಂದ್ಯ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಎದುರಾಳಿಯನ್ನು ಕಾಮನ್ವೆಲ್ತ್ ಸಮಿತಿ ನಿರ್ಧರಿಸಲಿದೆ' ಎಂದು ಹೇಳಿದರು.
32ರ ಹರೆಯದ ವಿಜೇಂದರ್ ಇತ್ತೀಚೆಗೆ ವರ್ಲ್ಡ್ ಬಾಕ್ಸಿಂಗ್ ಆರ್ಗನೈಸೇಷನ್ (ಡಬ್ಲ್ಯೂಬಿಒ) ಪ್ರಕಟಿಸಿರುವ ಸೂಪರ್ ಮಿಡ್ಲ್ ವೇಟ್ ರ್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಾಮನ್ವೆಲ್ತ್ ಪ್ರಶಸ್ತಿ ಪಂದ್ಯಕ್ಕಾಗಿ ಜುಲೈ 13ರಂದು ವಿಜೇಂದರ್ ಅವರು ಲೀ ಮಕ್ರಾಮ್ ವಿರುದ್ಧ ಸೆಣಸಾಡುವುದರಲ್ಲಿದ್ದರು. ಆದರೆ ಬ್ರಿಟಿಷ್ ಬಾಕ್ಸರ್ ಲೀ ಗಾಯದಿಂದಾಗಿ ಪಂದ್ಯದಿಂದ ಹಿಂಸರಿದ ಕಾರಣ ಆ ಪಂದ್ಯ ರದ್ದಾಗಿತ್ತು.
'ಎಲ್ಲಾ ಬಾಕ್ಸರ್ ಗಳು ಒಲಿಂಪಿಕ್ಸ್ ಅಥವಾ ಏಷ್ಯಾನ್ ಗೇಮ್ಸ್ ನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಅಂಥವರು ಪ್ರೊ ಬಾಕ್ಸಿಂಗ್ ಗೆ ಬರಬಹುದು. ದೊಡ್ಡ ಕನಸು ಈಡೇರದ್ದಕ್ಕೆ ಸಣ್ಣ ತೃಪ್ತಿಯನ್ನು ನೆಚ್ಚಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಸಾಧಿಸುವ ಹಠವಿರುವವರು ಪ್ರೊ ಹಂತಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಮುನ್ನಡೆಯಲು ಸಾಧ್ಯ' ಎಂದು ವಿಜೇಂದರ್ ನುಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications