For Quick Alerts
ALLOW NOTIFICATIONS  
For Daily Alerts

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಭಾರತಕ್ಕೆ 2ನೇ ಚಿನ್ನದ ಪದಕ ಗೆದ್ದುಕೊಟ್ಟ ಸ್ವೀಟಿ ಬೋರಾ

Womens World Boxing Championship: Saweety Boora win Indias second gold medal as win against Chinas Lina Wang

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳ ಅಬ್ಬರ ಮುಂದುವರಿದಿದೆ. ನೀತು ಗಂಗಾಸ್ ಬಳಿಕ ಮತ್ತೋರ್ವ ಬಾಕ್ಸರ್ ಸ್ವೀಟಿ ಬೋರಾ ಫೈನಲ್‌ನಲ್ಲಿ ಎದುರಾಳಿಯನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಎರಡನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

81 ಕೆಜಿ ವಿಭಾಗದಲ್ಲಿ ಸ್ವೀಟಿ ಬೋರಾ ಚೀನಾದ ಲಿನಾ ವಾಂಗ್ ವಿರುದ್ಧ ಸೆಣೆಸಾಟ ನಡೆಸಿದ್ದರು. ಸ್ಪ್ಲಿಟ್ ಡಿಸಿಶನ್‌ನಲ್ಲಿ ಭಾರತದ ಸ್ವೀಟಿ ಬೋರಾ ಚಿನ್ನದ ಪದಕವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. 3-2 ಅಂತರದಿಂದ ಈ ಪಂದ್ಯವನ್ನು ಭಾರತದ ಬಾಕ್ಸರ್ ವಶಕ್ಕೆ ಪಡೆದುಕೊಂಡರು.

ಮೊದಲ ಸುತ್ತಿನಲ್ಲಿ ಎಚ್ಚರಿಕೆಯ ಆರಂಭ ಪಡೆದ ಬಳಿಕ ಸ್ವೀಟಿ ಲಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ತನ್ನ ಚೀನೀ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದರು. ಪಂಚ್‌ಗಳನ್ನು ಬಾರಿಸಿ ಎದುರಾಳಿಗೆ ಕಂಗೆಡಿಸಿದರು. ಈ ಮೂಲಕ ಮೊತದ ಸುತ್ತನ್ನು 3-2 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಭಾರತೀಯ ಬಾಕ್ಸರ್ ಎರಡನೇ ಸುತ್ತಿನಲ್ಲಿ ಕೂಡ ಗೆಲುವು ಸಾಧಸಿದರು. ಸ್ವೀಟಿಯ ಚಾರ್ಜಿಂಗ್ ಸ್ಟ್ರೈಕ್‌ಗಳನ್ನು ಎದುರಿಸಲು ಎದುರಾಳಿ ವಾಂಗ್ ಅಕ್ಷರಶಃ ಪ್ರಯಾಸಪಟ್ಟರು. ಲುಂಗಿಂಗ್‌ಗಾಗಿ ಕೆಲವು ಎಚ್ಚರಿಕೆಗಳನ್ನು ಪಡೆದರೂ ಕೂಡ ಭಾರತೀಯರು ಬಾಕ್ಸರ ಎರಡನೇ 2ನೇ ಸುತ್ತನ್ನು ಅರಾಮದಾಯಕವಾಗಿ ವಶಕ್ಕೆ ಪಡೆದುಕೊಂಡರು.

ಮೂರನೇ ಸುತ್ತಿನಲ್ಲಿ ಎರಡು ಬಾಕ್ಸರ್‌ಗಳು ಕೂಡ ಸಾಕಷ್ಟು ಆಕ್ರಮಣಕಾರಿಯಾಗಿ ಕಂಡುಬಂದರು. ಈ ಸುತ್ತಿನಲ್ಲಿಯೂ ತನ್ನ ರಣತಂತ್ರಕ್ಕೆ ಅಂಟಿಕೊಂಡ ಭಾರತದ ಬಾಕ್ಸರ್ ಸವೀಟಿ ಬೋರಾ ಅವರನ್ನು ಅಂತಿಮವಾಗಿ 4-3 ಅಂತರದ ಸ್ಪ್ಲಿಟ್ ಡಿಸಿಶನ್ ಮೂಲಕ ಗೆಲುವು ಸಾಧಿಸಿದರು.

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯನ್‌ನ ಎಮ್ಮಾ-ಸ್ಯೂ ಗ್ರೀನ್‌ಟ್ರೀ ಅವರನ್ನು ಮಣಿಸಿ ಸವೀಟಿ 81 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಥಾನ ಪಡೆದರು. ಪೈಪೋಟಿಯ ಸೆಣೆಸಾಟದಲ್ಲಿ ಪೈಪೋಟಿಯಲ್ಲಿ ಸವೀಟಿ ಗ್ರೀನ್‌ಟ್ರೀ ಅವರನ್ನು 4-3 ಅಂತರದಿಂದ ಸೋಲಿಸಿದ್ದಾರೆ.

ಕುತೂಹಲಕಾರಿಯಾಗಿ ಸಂಗತಿಯೆಂದರೆ ಮೂರು ಬಾರಿಯ ಏಷ್ಯನ್ ಚಾಂಪಿಯನ್ ಸವೀಟಿ ಬೋರಾ ಸುಮಾರು ಒಂದು ದಶಕದ ಹಿಂದೆ 2014ರಲ್ಲಿ ಚಿನ್ನದ ಪದಕ ಗೆಲ್ಲುವ ಸನಿಹಕ್ಕೆ ಬಂದಿದ್ದರು. ಆದರೆ ಫೈನಲ್‌ನಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. 2018 ಮತ್ತು 2019 ಅವರು ಚಿನ್ನ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದು 2019ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಗೆದ್ದುಕೊಂಡಿದ್ದರು. ಈ ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮುಲಕ ಆರನೇ ಬಾರಿಗೆ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಿದಂತಾಗಿದೆ.

ಇದಕ್ಕೂ ಮುನ್ನ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 48 ಕೆಜಿ ವಿಭಾಗದಲ್ಲಿ ಭಾರತದ ನಿತು ಗಂಗಾಸ್ ಫೈನಲ್‌ನಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾಂಟ್ಸೆಟ್ಸೆಗ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು.

Story first published: Saturday, March 25, 2023, 22:12 [IST]
Other articles published on Mar 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+