Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಭರ್ಜರಿ ಗೆಲುವಿನಿಂದಿಗೆ 2ನೇ ಸುತ್ತಿಗೆ ಪ್ರವೇಶಿಸಿದ ನಿಖತ್ ಝರೀನ್

Womens World Boxing Championships: Nikhat Zareen starts campaign with victory against Ismayilova

ನವದೆಹಲಿಯಲ್ಲಿ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿ ನಡೆಯುತ್ತಿದ್ದು ಮೊದಲ ಸುತ್ತಿನಲ್ಲಿ ಭಾರತದ ಅನುಭವಿ ಬಾಕ್ಸರ್ ನಿಖತ್ ಜರೀನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅನಾಖಾನಿಮ್ ಇಸ್ಮಯಿಲೋವಾ ವಿರುದ್ಧ ನಡೆದ ಸೆಣೆಸಾಟದಲ್ಲಿ ಜಯಗಳಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

ಪಂದ್ಯಾವಳಿ ನಿಖತ್ ಭರ್ಜರಿ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್ ನಿಖತ್ 50 ಕೆಜಿ ವಿಭಾಗದಲ್ಲಿ ಎದುರಾಳಿಯನ್ನು ಅರ್ಥೈಸಿಕೊಳ್ಳಲು ಕೆಲ ಕಾಲ ತೆಗೆದುಕೊಂಡರು. ಆದರೆ ಒಮ್ಮೆ ಅಜೆರ್‌ಬೈಜಾನ್ ಬಾಕ್ಸರ್‌ನ ಆಟವನ್ನು ಗ್ರಹಿಸಿಕೊಂಡ ಬಳಿಕ ನಿಖತ್ ಝರಿನ್ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ.

ಇನ್ನು ಈ ಪ್ರತಿಷ್ಠಿಯ ಟೂರ್ನಿಗೆ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದ ನಿಖತ್ ಝರಿನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅದು ದೊಡ್ಡ ಸಂಗತಿಯಾಗುವುದಿಲ್ಲ. ಯಾರು ಯಾವ ಶ್ರೇಯಾಂಕ ಬೇಕಾದರೂ ಪಡೆಯಬಹುದು. ಯಾರೊಂದಿಗೆ ಸೆಣೆಸಾಟ ಎಂಬುದು ಮುಖ್ಯವಾಗುತ್ತದೆ. ನನ್ನ ಹೋರಾಟ ಉತ್ತಮವಾಗಿತ್ತು. ಪಂದ್ಯಾವಳಿ ಮುಂದುವರಿಯುತ್ತಿದ್ದಂತೆಯೇ ನಾನು ಕಠಿಣ ಎದುರಾಳಿಗಳ್ನು ಪಡೆಯುತ್ತೇನೆ" ಎಂದಿದ್ದಾರೆ ನಿಖತ್ ಝರೀನ್.

ನಿಖತ್ ಝರೀನ್ ತನ್ನ ಅಗ್ರ 32ರ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು 2022 ರ ಆಫ್ರಿಕನ್ ಚಾಂಪಿಯನ್ ಅಗ್ರ ಶ್ರೇಯಾಂಕದ ರೌಮೈಸಾ ಬೌಲಮ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಮುಂದಿನ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ.

"ನನಗೆ ನನ್ನ ಎದುರಾಳಿ ಬಾಕ್ಸರ್ ಬಗ್ಗೆ ಗೊತ್ತಿತ್ತು. ಆದರೆ ಆಕೆಯ ವಿರುದ್ಧ ಆಡಿರಲಿಲ್ಲ. ಭಾರತದ ಮೊದಲ ಪಂದ್ಯ ನನ್ನ ಮೂಲಕ ಪ್ರಾರಂಭವಾಯಿತು ಎಂಬುದು ನನಗೆ ಖುಷಿ ನೀಡಿದೆ. ನಾನೇ ಅದನ್ನು ಕೊನೆಗೊಳಿಸುತ್ತೇನೆ" ಎಂದು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ ನಿಖತ್ ಝರೀನ್.

ಇನ್ನು ಮತ್ತೋರ್ವ ಭಾರತದ ಬಾಕ್ಸರ್ ಸಾಕ್ಷಿ ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಮಾರ್ಟಿನೆಜ್ ಮರಿಯಾ ಜೋಸ್ ವಿರುದ್ಧ ಸೆಣೆಸಾಟ ನಡೆಸಿ 5-0 ಅಂತರದ ಭರ್ಜರಿ ಜಯ ಸಾಧಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

Story first published: Friday, March 17, 2023, 5:40 [IST]
Other articles published on Mar 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+