Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಇತಿಹಾಸ ಬರೆದ ಅಮಿತ್ ಪಂಘಲ್

World Boxing Championships: Amit Panghal becomes first Indian to enter final

ಎಕಟೆರಿನ್‌ಬರ್ಗ್, ಸೆಪ್ಟೆಂಬರ್ 20: ಏಷ್ಯನ್ ಚಾಂಪಿಯನ್ ಅಮಿತ್ ಪಂಘಲ್ ರಷ್ಯಾದ ಎಕಟೆರಿನ್‌ಬರ್ಗ್‌ನಲ್ಲಿ ನಡೆಯುತ್ತಿರುವ ಪುರುಷರ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪುರುಷರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ನಲ್ಲಿ ಫೈನಲ್‌ ಪ್ರವೇಶಿಸುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅಮಿತ್ ಪಾತ್ರರಾಗಿದ್ದಾರೆ.

ಶುಕ್ರವಾರ (ಸೆಪ್ಟೆಂಬರ್ 20) ನಡೆದ ಸೆಮಿಫೈನಲ್‌ನಲ್ಲಿ ಪುರುಷರ 52 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕಝಕೀಸ್ತಾನ್‌ನ ಸಾಕೆನ್ ಬಿಬೋಸ್ಸಿನೋವ್ ಅವರನ್ನು 3-2ರಿಂದ ಸೋಲಿಸಿದ ಅಮಿತ್ ಪಂಘಲ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

63 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಮನೀಷ್ ಕೌಶಿಕ್ ಕಂಚು ಲಭಿಸಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ವಿಜೇತ ಕೌಶಿಕ್, ಪುರುಷರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಕ್ಯೂಬಾದ ಆಂಡಿ ಗೊಮೆಜ್ ಕ್ರೂಜ್ ಎದುರು 0-5ರ ಸೋಲನುಭವಿಸಿ ಕಂಚಿಗೆ ತೃಪ್ತಿಪಟ್ಟಿದ್ದಾರೆ.

Story first published: Friday, September 20, 2019, 18:27 [IST]
Other articles published on Sep 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+