Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಭಾರತದ ಮಂಜು ರಾಣಿಗೆ ಬೆಳ್ಳಿ ಪದಕ

World Boxing Championships: Manju Rani settles for silver medal

ಉಲಾನ್-ಉಡೆ, ಅಕ್ಟೋಬರ್ 13: ರಷ್ಯಾದ ಉಲಾನ್-ಉಡೆಯಲ್ಲಿ ಭಾನುವಾರ (ಅಕ್ಟೋಬರ್ 13) ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮಂಜು ರಾಣಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ರಷ್ಯಾದ ಕಟೆರಿನಾ ಪಾಲ್ಟ್ಸೆವಾ ಎದುರು ರಾಣಿ ಹಿನ್ನಡೆ ಅನುಭವಿಸಿದರು.

ಲೈಟ್‌ವೇಟ್ (48 ಕೆಜಿ) ವಿಭಾಗದಲ್ಲಿ ಸ್ಪರ್ಧಿಸಿದ್ದ ಹರ್ಯಾಣದ ಬಾಕ್ಸರ್ ಮಂಜು ರಾಣಿ, ಕಟೆರಿನಾ ವಿರುದ್ಧದ 1-4ರ ಸೋಲು ಕಂಡರು. ಬರುವ ಶನಿವಾರ (ಅಕ್ಟೋಬರ್ 19) 20ರ ಹರೆಯಕ್ಕೆ ಕಾಲಿರಿಸುತ್ತಿರುವ ಮಂಜು, ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಒಬ್ಬರೇ ಭಾರತೀಯರಾಗಿ ಗುರುತಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್, 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಮುನಾ ಬೊರೊ ಮತ್ತು 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲೊವ್ಲಿನಾ ಬೊರ್ಗೊಹೈನ್ ಭಾರತ ಪರ ಕಂಚಿನ ಪದಕ ಗೆದ್ದಿದ್ದರು.

Story first published: Sunday, October 13, 2019, 15:49 [IST]
Other articles published on Oct 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+