11 ಎಸೆತ, 6 ವಿಕೆಟ್, 0 ರನ್!: 147 ವರ್ಷಗಳ ಇತಿಹಾಸದಲ್ಲಿ ಭಾರತ ತಂಡದ ಐತಿಹಾಸಿಕ ಕುಸಿತ
ಬುಧವಾರ, ಜನವರಿ 3ರಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಯಾವಾಗಲೂ ಅನಿರೀಕ್ಷಿತ ಘಟನೆಗಳು ನಡೆಯುವಂತೆ ಮತ್ತೊಮ್ಮೆ ಇತಿಹಾಸ ಮರುಕಳಿಸಿದೆ.
ಪ್ರಖರವಾದ ಬಿಸಿಲಿನ ಮುಂಜಾನೆಯಲ್ಲಿ ಭಾರತೀಯ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬೆಂಕಿಯಂತಹ ಬೌಲಿಂಗ್ ಮಾಡುವುದರೊಂದಿಗೆ ದಕ್ಷಿಣ ಆಫ್ರಿಕಾ ಕೇವಲ 55 ರನ್‌ಗಳಿಗೆ ಕಡಿವಾಣಗೊಂಡಿತು.

ಮೊಹಮ್ಮದ್ ಸಿರಾಜ್ ಆರು ವಿಕೆಟ್‌ಗಳನ್ನು ಕಬಳಿಸಿದರು. ಏಕೆಂದರೆ ಭಾರತ ತಂಡವು ತನ್ನ ಯಾವುದೇ ಎದುರಾಳಿ ತಂಡಗಳಿಗಿಂತ ಅತ್ಯಂತ ಕಡಿಮೆ ಮೊತ್ತಕ್ಕೆ ಅಲೌಟ್ ಮಾಡಿತು. ಆದರೆ, ಅದು ಥ್ರಿಲ್ಲರ್ ಪಂದ್ಯದ ಮೊದಲ ಭಾಗವಾಗಿದ್ದು, ಅದು ಭಾರತದ ಇನ್ನಿಂಗ್ಸ್‌ನಲ್ಲೂ ಮುಂದುವರೆಯಿತು.
ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಬೃಹತ್ ಮುನ್ನಡೆ ಸಾಧಿಸುವ ನಿರೀಕ್ಷೆ ಇತ್ತು. ರೋಹಿತ್ ಶರ್ಮಾ ನಾಯಕತ್ವದ ತಂಡವು ಆರಾಮವಾಗಿ ಮುನ್ನಡೆ ಸಾಧಿಸಿದ್ದರೂ, ಭಾರತೀಯ ಇನ್ನಿಂಗ್ಸ್‌ನ 34ನೇ ಓವರ್‌ನಿಂದ ಧಿಡೀರ್ ಕುಸಿಯಲು ಪ್ರಾರಂಭಿಸಿತು. ಇದು ಶತಮಾನದ ಐತಿಹಾಸಿಕ ಕುಸಿತವಾಗಿದೆ.

ಭಾರತದ ಸ್ಕೋರ್‌ಬೋರ್ಡ್ 4 ವಿಕೆಟ್‌ಗೆ 153 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಮೊದಲು ಕೆಎಲ್ ರಾಹುಲ್ ಅವರ ವಿಕೆಟ್ ಅನ್ನು ಬೀಳಿಸಿದರು. ಅದೇ ಓವರ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಔಟ್ ಆಗಿ ಹೊರನಡೆದರು.
ಮುಂದಿನ ಓವರ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಪ್ರಸಿದ್ಧ್ ಕೃಷ್ಣ ಅವರ ವಿಕೆಟ್ ಅನ್ನು ಕಗಿಸೊ ರಬಾಡ ಪಡೆದರು. ಮುಖೇಶ್ ಕುಮಾರ್ ರನೌಟ್ ಆದರು. ಕೇವಲ 11 ಎಸೆತಗಳ ಅಂತರದಲ್ಲಿ ಭಾರತ ಯಾವುದೇ ರನ್ ಗಳಿಸದೇ ಕೊನೆಯ 6 ವಿಕೆಟ್ ಕಳೆದುಕೊಂಡಿತು.
ಇದು ಟೆಸ್ಟ್ ಇನ್ನಿಂಗ್ಸ್‌ನಲ್ಲಿ ನಿರ್ದಿಷ್ಟ ಸ್ಕೋರ್‌ನಲ್ಲಿ ಬಿದ್ದ ಅತಿ ಹೆಚ್ಚು ವಿಕೆಟ್‌ಗಳಾಗಿವೆ. 1877ರಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾದಾಗಿನಿಂದ ಯಾವುದೇ ತಂಡವು ಒಂದು ನಿರ್ದಿಷ್ಟ ಸ್ಕೋರ್‌ನಲ್ಲಿ 5 ವಿಕೆಟ್‌ಗಳಿಗಿಂತ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿಲ್ಲ. ಇದಕ್ಕೂ ಮೊದಲು ನಿರ್ದಿಷ್ಟ ಸ್ಕೋರ್‌ನಲ್ಲಿ 5 ವಿಕೆಟ್‌ಗಳು ಬಿದ್ದ ನಾಲ್ಕು ನಿದರ್ಶನಗಳಿವೆ.
ಪಂದ್ಯದ ಕುರಿತು ಮಾತನಾಡುತ್ತಾ, ಭಾರತವು ಎರಡನೇ ಮತ್ತು ಅಂತಿಮ ಟೆಸ್ಟ್‌ನ ಆರಂಭಿಕ ದಿನವಾದ ಬುಧವಾರ ದಕ್ಷಿಣ ಆಫ್ರಿಕಾವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ಅಂತಿಮ ಅವಧಿಯಲ್ಲಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್‌ಗಳಿಗೆ ಸರ್ವಪತನ ಕಂಡಿತು.
ವಿರಾಟ್ ಕೊಹ್ಲಿ 46 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಕ್ರಮವಾಗಿ 39 ಮತ್ತು 36 ರನ್ ಗಳಿಸಿದರು. ಭಾರತ ಕೇವಲ 34.5 ಓವರ್‌ಗಳನ್ನು ಎದುರಿಸಿತು. ಚಹಾದ ನಂತರದ ಅವಧಿಯನ್ನು 4 ವಿಕೆಟ್‌ಗೆ 111 ರನ್‌ಗಳಿಗೆ ಪುನರಾರಂಭಿಸಿದರು.
ಇದಕ್ಕೂ ಮೊದಲು, ವೇಗಿ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವಿಭಾಗವನ್ನು ಅತ್ಯುತ್ತಮ ಟೆಸ್ಟ್ ಅಂಕಿಅಂಶಗಳ ಮೂಲಕ 6 ವಿಕೆಟ್‌ಗಳ ಸಾಧನೆ ಮಾಡಿದರು.
ವಿದಾಯದ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಾಯಕ ಡೀನ್ ಎಲ್ಗರ್ ಅವರ ನಿರ್ಧಾರವು ಆತಿಥೇಯ ತಂಡಕ್ಕೆ ಕೆಟ್ಟದಾಗಿ ಪರಿಣಮಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications