ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ ಪರ್ವಕ್ಕೆ 12ರ ಸಂಭ್ರಮ: ಲಂಕಾ ವಿರುದ್ಧ ಪದಾರ್ಪಣೆ ಮಾಡಿದ್ದ ಕೊಹ್ಲಿ

12 Year of Virat Kohli: Kohli Makes India Debut Against Sri Lanka

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ ಹನ್ನೆರಡು ವರ್ಷಗಳು ಪೂರ್ತಿಯಾಗಿದೆ. ಅಂಡರ್ 19 ತಂಡದ ಪ್ರದರ್ಶನದ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡ ವಿರಾಟ್ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾದ ವಿರುದ್ಧ ಆಡಿದ್ದರು.

ಅದು 2008ನೇ ಇಸವಿಯ ಆಗಸ್ಟ್ 18. ಶ್ರೀಲಂಕಾ ವಿರುದ್ಧ ಏಕಸಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಕಣಕ್ಕಿಳಿಸಿದ್ದರು. ಈ ಪಂದ್ಯದಲ್ಲಿ ಅಜಂತಾ ಮೆಂಡಿಸ್ ಹಾಗೂ ಮುತ್ತಯ್ಯ ಮುರಳೀಧರನ್ ಬೌಲಿಂಗ್ ದಾಳಿಗೆ ಭಾರತ ಆಘಾತ ಅನುಭವಿಸಿತ್ತು. ಕೇವಲ 147 ರನ್‌ಗೆ ಭಾರತ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಗಳಿಸಿದ್ದು ಕೇವಲ 12 ರನ್. ನುವಾನ್ ಕುಲಸೇಕರ ಕೊಹ್ಲಿಯನ್ನು ಎಲ್‌ಬಿ ಬಲೆಗೆ ಕೆಡವಿದ್ದರು.

ಎಂಎಸ್ ಧೋನಿಗಾಗಿ ಹೃದಯ ಸ್ಪರ್ಶಿ ವೀಡಿಯೊ ಬಿಡುಗಡೆ ಮಾಡಿದ ಬಿಸಿಸಿಐಎಂಎಸ್ ಧೋನಿಗಾಗಿ ಹೃದಯ ಸ್ಪರ್ಶಿ ವೀಡಿಯೊ ಬಿಡುಗಡೆ ಮಾಡಿದ ಬಿಸಿಸಿಐ

ಶ್ರೀಲಂಕಾ ವಿರುದ್ಧ ಹೀನಾಯವಾಗಿ ಸೋತ ವಿರಾಟ್ ಕೊಹ್ಲಿಯ ಆ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸ್ಮರಣೀಯವಂತು ಆಗಿರಲಿಲ್ಲ. ಆದರೆ ಅದಾದ ಬಳಿಕ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಎಂಬ ಯುವ ಕ್ರಿಕೆಟಿಗ ಆವರಿಸಿಕೊಂಡ ರೀತಿ ಅಮೋಘ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ವಿರಾಟ್ ತನ್ನ ಅಧಿಪತ್ಯವನ್ನು ಸಾಧಿಸಲು ಆರಂಭಿಸಿದ್ದರು.

31 ವರ್ಷದ ವಿರಾಟ್ ಕೊಹ್ಲಿ ಈವರೆಗೆ ಬರೊಬ್ಬರಿ 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲಿ 27 ಶತಕಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾಗಿದ್ದರೆ, ಏಕದಿನ ಕ್ರಿಕೆಟ್‌ನಲ್ಲಿ 43 ಶತಕಗಳನ್ನು ಹೊಂದಿದ್ದಾರೆ. ಎಲ್ಲಾ ಮಾದರಿಗಳಲ್ಲಿ ಒಟ್ಟಾರೆಯಾಗಿ 104 ಅರ್ಧ ಶತಕಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ.

ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದೇನು?ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದೇನು?

ಹಾಗಿದ್ದರೂ ಕಳೆದ ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಕೇವಲ ಎರಡು ಶತಕವನ್ನು ಮಾತ್ರವೇ ಯಶಸ್ವಿಯಾಗಿದ್ದರು. ಲಾಕ್‌ಡೌನ್‌ಗಿಂತ ಮುನ್ನ ಕೊಹ್ಲಿ ದೊಡ್ಡ ಮೊತ್ತವನ್ನು ದಾಖಲಿಸಲು ವಿಫಲಾಗುತ್ತಿದ್ದರು. ಲಾಕ್‌ಡೌನ್ ಕಾರಣದಿಂದಾಗಿ ಸುದೀರ್ಘ ವಿಶ್ರಾಂತಿಯ ನಂತರ ವಿರಾಟ್ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಲು ಉತ್ಸುಕರಾಗಿದ್ದಾರೆ.

Story first published: Tuesday, August 18, 2020, 15:57 [IST]
Other articles published on Aug 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X