IPL 2025: ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿದ 13 ವರ್ಷದ ಬಾಲಕ
ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರ ಮಂಡಳಿ (ಬಿಸಿಸಿಐ) ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಭಾಗವಹಿಸಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ 1574 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈಗ 574 ಆಟಗಾರರು ಅಂತಿಮ ಪಟ್ಟಿಗೆ ಸೇರಿದ್ದಾರೆ.
ವಿಶ್ವದ ಅತಿ ದೊಡ್ಡ ಟಿ20 ಲೀಗ್ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಐಪಿಎಲ್‌ನಲ್ಲಿ ಯುವ ಆಟಗಾರರು ಮಾತ್ರವಲ್ಲದೆ ಅನುಭವಿ ಹಿರಿಯ ಆಟಗಾರರೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಎಂದಿನಂತೆ ಈ ಬಾರಿಯೂ ಮೆಗಾ ಹರಾಜಿನಲ್ಲಿ ಸಾಕಷ್ಟು ಕುತೂಹಲಗಳು ಅಭಿಮಾನಿಗಳನ್ನು ಕಾಡುತ್ತಿವೆ. ಏಕೆಂದರೆ ಮೆಗಾ ಹರಾಜಿನಲ್ಲಿ 13 ವರ್ಷದ ಆಟಗಾರರಿಂದ ಹಿಡಿದು 42 ವರ್ಷದ ದಿಗ್ಗಜರು ಕಾಣಿಸಿಕೊಳ್ಳಲಿದ್ದಾರೆ.

ಅತ್ಯಂತ ಹಿರಿಯ ಆಟಗಾರ
ಇಂಗ್ಲೆಂಡ್‌ನ ಮಾಜಿ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರು ತಮ್ಮ 42 ವರ್ಷ ವಯಸ್ಸಿನಲ್ಲಿ ಐಪಿಎಎಲ್ 2025ರ ಮೆಗಾ ಹರಾಜಿಗೆ ಬಂದಿದ್ದಾರೆ. ಈ ಮೂಲಕ ಮೆಗಾ ಹರಾಜಿನಲ್ಲಿ ಜೇಮ್ಸ್ ಆಂಡರ್ಸನ್ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ. ಅವರು ಬಹಳ ಸಮಯದ ನಂತರ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕಳೆದ ಒಂದು ದಶಕದಲ್ಲಿ ಅವರ ಗಮನ ಕೇವಲ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯಗಳನ್ನು ಆಡುವುದರ ಮೇಲಿತ್ತು. ಆಂಡರ್ಸನ್ ಈ ವರ್ಷದ ಆರಂಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು. ಈಗ ಅವರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಇವರೂ ಶಾರ್ಟ್ ಲಿಸ್ಟ್ ಆಗಿದ್ದಾರೆ.
ಮೂಲ ಬೆಲೆ ಎಷ್ಟು?
ಆಂಡರ್ಸನ್ ತಮ್ಮ ವೃತ್ತಿಜೀವನದ ಕೊನೆಯ ಟಿ20 ಪಂದ್ಯವನ್ನು 2014ರ ಆಗಸ್ಟ್ ತಿಂಗಳಲ್ಲಿ ಆಡಿದ್ದಾರೆ. ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ 44 ಪಂದ್ಯಗಳನ್ನು ಆಡಿದ್ದು, 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಂಡರ್ಸನ್ ತಮ್ಮ ಮೂಲ ಬೆಲೆಯನ್ನು 1.25 ಕೋಟಿ ರೂ.ಗಳಲ್ಲಿ ಇರಿಸಿಕೊಂಡಿದ್ದಾರೆ. ಇದು ಐಪಿಎಲ್ ಮೆಗಾ ಹರಾಜಿಗಾಗಿ ಬಿಸಿಸಿಐ ಪರಿಚಯಿಸಿದ ಹೊಸ ಮೂಲ ಬೆಲೆ ಸ್ಲಾಟ್ ಆಗಿದೆ. ಹಲವು ಫ್ರಾಂಚೈಸಿಗಳು ಕೂಡ ಆಂಡರ್ಸನ್ ಅವರನ್ನು ಬಿಡ್ ಮಾಡಲು ಸಜ್ಜಾಗಿವೆ.
ಕಿರಿಯ ಆಟಗಾರ ಯಾರು?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬಿಹಾರದ ಭರವಸೆಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಭವ್ ಸೂರ್ಯವಂಶಿಗೆ ಪ್ರಸ್ತುತ 13 ವರ್ಷ ವಯಸ್ಸು. 2011ರ ಮಾರ್ಚ್ 27 ರಂದು ಜನಿಸಿದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಆಲ್‌ರೌಂಡರ್ ಆಗಿ ಈಗಾಗಲೇ ಬಿಹಾರ ಪರ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಟಿ20 ಅನುಭವದ ಕೊರತೆಯಿಂದ ಅವರನ್ನು ಮುಂಬರುವ ಹರಾಜಿನಲ್ಲಿ ಬಿಡ್ ಮಾಡುವ ಸಾಧ್ಯತೆ ಕಡಿಮೆ ಇದೆ.
ಇತ್ತೀಚೆಗೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಎರಡು ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಅಂಡರ್-19 ಭಾರತ ತಂಡದ ಭಾಗವಾಗಿದ್ದರು. 54 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರ. ಆದರೆ, ಈಗ ರಣಜಿ ಟ್ರೋಫಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿರುವುದು ಸ್ಟಾರ್ ಆಟಗಾರರಿಗೂ ಅಚ್ಚರಿ ತರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications