ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಬೆಂಗಾಲ್

13-year wait ends as Bengal storm into first Ranji Trophy final since 2006-07

ಕೋಲ್ಕತ್ತಾ, ಮಾರ್ಚ್‌ 3: ಅನುಸ್ತೂಪ್ ಶತಕದಾಟ, ಇಶಾನ್ ಪೊರೆಲ್, ಮುಕೇಶ್ ಕುಮಾರ್ ಮಾರಕ ಬೌಲಿಂಗ್‌ನಿಂದಾಗಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಮಂಗಳವಾರ (ಮಾರ್ಚ್ 3) ಮುಕ್ತಾಯಗೊಂಡ ರಣಜಿ ಟ್ರೋಫಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಬೆಂಗಾಲ್ ತಂಡ 174 ರನ್ ಜಯ ಗಳಿಸಿದೆ. ಇದರೊಂದಿಗೆ ಬೆಂಗಾಲ್, ದೀರ್ಘ ಕಾಲದ ಬಳಿಕ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಮೈಲಿಗಲ್ಲು ಸ್ಥಾಪಿಸಿದರೆ.

ಟೆಸ್ಟ್ ರ‍್ಯಾಂಕಿಂಗ್‌: ಭಾರತದ ಸ್ಥಾನ ಭದ್ರ, 2ನೇ ಸ್ಥಾನದಲ್ಲಿ ಭಾರೀ ಬದಲಾವಣೆಟೆಸ್ಟ್ ರ‍್ಯಾಂಕಿಂಗ್‌: ಭಾರತದ ಸ್ಥಾನ ಭದ್ರ, 2ನೇ ಸ್ಥಾನದಲ್ಲಿ ಭಾರೀ ಬದಲಾವಣೆ

ಕರ್ನಾಟಕ ತಂಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿದ್ದು ಸೋಲಿಗೆ ಕಾರಣವಾಯಿತು. ಕೆಎಲ್ ರಾಹುಲ್, ಮನೀಷ್ ಪಾಂಡೆ, ಕೆ ಗೌತಮ್, ಅಭಿಮನ್ಯು ಮಿಥುನ್‌ನಂತ ಪ್ರಮುಖ ಆಟಗಾರರಿದ್ದರೂ ರಾಜ್ಯ ತಂಡ ಚತುರ ಆಟ ತೋರಲಿಲ್ಲ.

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!

ಬೆಂಗಾಲ್ ವಿರುದ್ಧ ಸೋಲಿನೊಂದಿಗೆ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಸ್ಪರ್ಧೆ ಕೊನೆಗೊಂಡಿದೆ. ಇದು ಸೆಮಿಫೈನಲ್‌ನಲ್ಲಿ ಕರ್ನಾಟಕಕ್ಕೆ ಲಭಿಸುತ್ತಿರುವ ಸತತ 3ನೇ ಸೋಲು.

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್‌

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಾಲ್ ತಂಡ, ಮೊದಲ ಇನ್ನಿಂಗ್ಸ್‌ನಲ್ಲಿ 312-10 (92) ಸ್ಕೋರ್‌, ದ್ವಿತೀಯ ಇನ್ನಿಂಗ್ಸ್‌ನಲ್ಲಿ 161-10 (54.4) ಸ್ಕೋರ್‌ ಮಾಡಿತ್ತು. ಗುರಿ ಬೆನ್ನತ್ತಿದ ಕರ್ನಾಟಕ, ಮೊದಲ ಇನ್ನಿಂಗ್ಸ್‌ನಲ್ಲಿ 122-10 (36.2), ದ್ವಿತೀಯ ಇನ್ನಿಂಗ್ಸ್‌ನಲ್ಲಿ 177-10 (55.3) ರನ್ ಗಳಿಸಿ ಶರಣಾಗಿದೆ.

ಬೆಂಗಾಲ್ ಗೆಲುವಿಗೆ ಪ್ರಮುಖ ಕಾರಣ

ಬೆಂಗಾಲ್ ಗೆಲುವಿಗೆ ಪ್ರಮುಖ ಕಾರಣ

ಬೆಂಗಾಲ್ ಗೆಲುವಿಗೆ ಮುಖ್ಯ ಕಾರಣವೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು. ಅನುಸ್ತೂಪ್ ಮಜುಂದಾರ್ ಅಜೇಯ 149 ರನ್ ಗಳಿಸಿದ್ದರೆ, ಆಕಾಶ್ ದೀಪ್ 44 ರನ್ ಕೊಡುಗೆಯಿತ್ತರು. ಅಷ್ಟೇ ಅಲ್ಲ ಕರ್ನಾಟಕದ ಮೊದಲ ಇನ್ನಿಂಗ್ಸ್‌ನಲ್ಲಿ ಇಶಾನ್ ಪೊರೆಲ್ 39 ರನ್‌ಗೆ 5, ಆಕಾಶ್ ದೀಪ್‌ 30 ರನ್‌ಗೆ 3 ವಿಕೆಟ್‌ ಮುರಿದು ಕಾಡಿದರು.

ಕರ್ನಾಟಕ ನೀರಸ ಬ್ಯಾಟಿಂಗ್‌

ಕರ್ನಾಟಕ ನೀರಸ ಬ್ಯಾಟಿಂಗ್‌

ಕರ್ನಾಟಕ ತಂಡ ಪ್ರಮುಖ ಪಂದ್ಯದಲ್ಲೇ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದೂ ಸೋಲಿಗೆ ಕಾರಣವೆ. ಕೆಎಲ್ ರಾಹುಲ್ 26+0, ನಾಯಕ ಕರುಣ್ ನಾಯರ್ 3+6, ಮನೀಶ್ ಪಂಡೆ 12+12 ರನ್ ಗಳಿಸಿದ್ದು ತಂಡದ ದುರ್ಬಲ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿತು. ಅದರಲ್ಲೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎದುರಾಳಿ ಬೆಂಗಾಲ್‌ನ ಬೌಲರ್ ಮುಕೇಶ್ ಕುಮಾರ್ 61 ರನ್‌ಗೆ 6 ವಿಕೆಟ್ ಮುರಿದು ಸೋಲಿಗೆ ಕಾರಣರಾದರು.

13 ವರ್ಷಗಳ ಹಿಂದಿನ ದಾಖಲೆ

13 ವರ್ಷಗಳ ಹಿಂದಿನ ದಾಖಲೆ

ಒಟ್ಟು ಎರಡು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿರುವ ಬೆಂಗಾಲ್ ತಂಡ, ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಾದಾರ್ಪಣೆ ಮಾಡಿದ್ದ 1989-90ರ ಸೀಸನ್‌ನಲ್ಲೂ ಪ್ರಶಸ್ತಿ ಜಯಿಸಿತ್ತು. ಬೆಂಗಾಲ್ ತಂಡ ಕಡೇಯ ಸಾರಿ ಫೈನಲ್‌ಗೆ ಪ್ರವೇಶಿಸಿದ್ದು ಸುಮಾರು 13 ವರ್ಷಗಳಿಗೆ ಹಿಂದೆ. ಅಂದರೆ 2006-07ರಲ್ಲಿ ಫೈನಲ್ ಪ್ರವೇಶಿಸಿದ್ದ ಬೆಂಗಾಲ್, ಮುಂಬೈ ವಿರುದ್ಧದ ಸೋತಿತ್ತು.

Story first published: Tuesday, March 3, 2020, 17:45 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X