Vaibhav Suryavanshi:ದೋಹಾ ದಗೆಯಲ್ಲಿ ಯುಎಇಗೆ ಬೆವರು ಇಳಿಸಿದ ವೈಭವ್ ಸೂರ್ಯವಂಶಿ: 11 ಬೌಂಡರಿ, 15 ಸಿಕ್ಸರ್ ಅಬ್ಬರ
ರೈಸಿಂಗ್ ಸ್ಟಾರ್ ಏಷ್ಯಾ ಕಪ್‌ನಲ್ಲಿ ಭಾರತದ ಯುವ ಬ್ಯಾಟರ್ ಆರ್ಭಟಕ್ಕೆ ಯುಎಇ ಬೆಚ್ಚಿದೆ. ಈಗಾಗಲೇ ವಿಶ್ವಮಟ್ಟದಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ಎಲ್ಲರ ಚಿತ್ತ ಕದ್ದಿದ್ದಾರೆ. ದೋಹಾದಲ್ಲಿ ಶುಕ್ರವಾರ ನಡೆದ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ "ಎ" ತಂಡ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಭರವಸೆಯ ಬ್ಯಾಟರ್ ವೈಭವ್ ಸೂರ್ಯವಂಶಿ ಆರ್ಭಟಿಸಿದರು. ಇವರ ಆರ್ಭಟ ಕಂಡು ಯುಎಇ ಕಂಗಲಾಗಿದೆ.
ಮೊದಲು ಬ್ಯಾಟ್ ಮಾಡಿದ ಭಾರತ "ಎ" ತಂಡದ ಪರ ಪ್ರಿಯಾಂಶ್ ಆರ್ಯ (10) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಔಟ್ ಆಗುತ್ತಿದ್ದಂತೆ ನಮನ್ ಧೀರ್ ಕ್ರೀಸ್‌ಗೆ ಬಂದರು. ಇವರ ಜೊತೆ ಇನಿಂಗ್ಸ್ ಕಟ್ಟುವ ಕಾರ್ಯವನ್ನು ವೈಭವ್ ಸೂರ್ಯವಂಶಿ ಮಾಡಿದರು. ಈ ಜೋಡಿಯ ರಭಸದ ಆಟಕ್ಕೆ ಬ್ರೇಕ್ ಹಾಕುವಲ್ಲಿ ಯುಎಇ ಬೌಲರ್‌ಗಳ ವಿಫಲರಾದರು. ತಮ್ಮ ನೈಜ್ಯ ಆಟವನ್ನು ಆಡಿದ ವೈಭವ್ ನೇರ ಪ್ರಸಾರದ ಪಂದ್ಯವನ್ನೇ ಮರುಪ್ರಸಾರದ ರೀತಿ ಮಾಡಿ ಬಿಟ್ಟರು.

ವೈಭವ್ ಸೂರ್ಯವಂಶಿ ಹಾಗೂ ನಮನ್ ಧೀರ್ ಜೋಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ನಮನ್ ಧೀರ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದ್ದಾಗ ಔಟ್ ಆದರು. ಇವರು ಔಟ್ ಆದರೂ ತಮ್ಮ ಮೇಲೆ ಯಾವುದೇ ಪ್ರಭಾವ ಬೀಳದು ಎಂಬಂತೆ ಬ್ಯಾಟ್ ಮಾಡಿದ ವೈಭವ್ ಯುಎಇ ಬೌಲರ್‌ಗಳ ಬೆವರು ಇಳಿಸಿದರು. ವೈಭವ್ ಈಗಾಗಲೇ ಐಪಿಎಲ್‌ನಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ ಇವರು 32 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ವೈಭವ್ ಶತಕ
14 ವರ್ಷದ ವೈಭವ್ ಆಟವನ್ನು ಕಂಡು ಅಭಿಮಾನಿಗಳು ಫುಲ್ ಖುಷ್. ಇವರು ಶುಕ್ರವಾರ 342ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ ರನ್ ಕಲೆ ಹಾಕಿದರು. ವೈಭವ್ 42 ಎಸೆತಗಳಲ್ಲಿ 11 ಬೌಂಡರಿ, 15 ಸಿಕ್ಸರ್ ಸಹಾಯದಿಂದ 144 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 297 ರನ್ ಸೇರಿಸಿತ್ತು. ಈ ವೇಳೆ ನಾಯಕ ಜಿತೇಶ್ ಶರ್ಮಾ ಸಹ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 83 ರನ್ ಸಿಡಿಸಿದರು.
ಯುಎಇಗೆ ಸೋಲು
ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಯುಎಇ "ಎ" ತಂಡ ಚೇಸ್ ಮಾಡುವಲ್ಲಿ ವಿಫಲವಾಯಿತು. ಯುಎಇ ಪರ ಸೈಯದ್ ಹೈದರ್ 20, ಮುಹಮ್ಮದ್ ಅರ್ಫಾನ್ 26, ಮಯಾಂಕ್ ಕುಮಾರ್ 18 ರನ್ ಗಳಿಸಿದರು. ಶೋಯಿಬ್ ಖಾನ್ 41 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಯುಎಇ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 149 ರನ್ ಸೇರಿಸಿತು. ಭಾರತದ ಪರ ಗುರ್ಜಪ್ನೀತ್ ಸಿಂಗ್ 3, ಹರ್ಷ್ ದುಬೆ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications