Oval Test: ಎರಡನೇ ದಿನ ಬಿತ್ತು 15 ವಿಕೆಟ್: ಭಾರತ 52 ರನ್ ಮುನ್ನಡೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಓವಲ್‌ನಲ್ಲಿ ನಡೆಯುತ್ತಿದೆ. ಶುಕ್ರವಾರ ಎರಡನೇ ದಿನದ ಟೆಸ್ಟ್ ಪಂದ್ಯ ನಡೆಯಿತು. ಈ ವೇಳೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 9 (ಕ್ರಿಸ್ ವೋಕ್ಸ್ ಅಖಾಡಕ್ಕೆ ಇಳಿಯಲಿಲ್ಲ) ಹಾಗೂ ಭಾರತ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡಿತು. ಉಭಯ ತಂಡಗಳು ಎರಡನೇ ದಿನದಾಟದಲ್ಲಿ ವಿಕೆಟ್ ಉಳಿಸಿಕೊಳ್ಳುವಲ್ಲಿ ಪರದಾಟ ನಡೆಸಿದವು. ಎರಡನೇ ದಿನದಾಟದಲ್ಲಿ ಒಟ್ಟು 15 ವಿಕೆಟ್‌ಗಳು ಬಿದ್ದವು.
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜಾಕ್ ಕ್ರಾಲಿ (64), ಹ್ಯಾರಿ ಬ್ರೂಕ್ (53) ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಭಾರತದ ಪರ ಪ್ರಸಿದ್ಧ್ ಕೃಷ್ಣಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ 23 ರನ್‌ಗಳ ಮುನ್ನಡೆ ಸಾಧಿಸಿತು. ಭಾರತ ಎರಡನೇ ಇನಿಂಗ್ಸ್ ಆಟವನ್ನು ಆರಂಭಿಸಿತು.

ಟೀಮ್ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಸಮಯೋಚಿತ ಆಟವನ್ನು ಆಡಿದರು. ಒಂದು ತುದಿಯಲ್ಲಿ ಕೆಎಲ್ ರಾಹುಲ್ ತಮ್ಮ ನೈಜ್ಯ ಧಾಟಿಯಲ್ಲಿ ಬ್ಯಾಟಿಂಗ್ ನಡೆಸಿದರೆ, ಇನ್ನೊಂದು ತುದಿಯಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಮಾಡಿದರು. ಇವರು ಇಂಗ್ಲೆಂಡ್ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಅಲ್ಲದೆ ಇಂಗ್ಲೆಂಡ್ ಬ್ಯಾಟರ್‌ಗಳ ರೀತಿಯಲ್ಲೇ ಬ್ಯಾಟರ್ ಮಾಡಿದರು. ಮೊದಲ ವಿಕೆಟ್‌ಗೆ ಭಾರತ 46 ರನ್‌ಗಳನ್ನು ಸೇರಿಸಿತು. ಈ ವೇಳೆ ಕೆಎಲ್ ರಾಹುಲ್ (7) ಜೋಶ್ ಟಂಗ್ ಎಸೆತದಲ್ಲಿ ಸ್ಲಿಪ್‌ನಲ್ಲಿ ರೂಟ್‌ಗೆ ಕ್ಯಾಚ್ ನೀಡಿದರು.
ಜೈಸ್ವಾಲ್ ಅರ್ಧಶತಕ
ಟೀಮ್ ಇಂಡಿಯಾದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಸೂಚನೆ ನೀಡಿದರು. ಆದರೆ ಇವರು ಗಸ್ ಅಟ್ಕಿನ್ಸನ್ ಎಸೆತವನ್ನು ತಪ್ಪಾಗಿ ಗ್ರಹಿಸಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ವೇಳೆಗೆ ಸಾಯಿ ಸುದರ್ಶನ್ ಹಾಗೂ ಜೈಸ್ವಾಲ್ ಜೊತೆಗೂಡಿ 45 ಎಸೆತಗಳಲ್ಲಿ 24 ರನ್ ಸಿಡಿಸಿದರು.

ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ನೈಜ್ಯ ಆಟವನ್ನು ಮುಂದುವರೆಸಿದರು. ದಿನದಾಟದಂತ್ಯಕ್ಕೆ ಯಶಸ್ವಿ ಜೈಸ್ವಾಲ್ ಅಜೇಯ 51 ರನ್ ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಮೂರನೇ ದಿನಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಆಕಾಶ್ ದೀಪ್ ಜೋಡಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಈ ಜೋಡಿ ಶನಿವಾರ ಮೊದಲಾವಧಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾಗಬೇಕಿದೆ. ಅಂದಾಗ ಭಾರತದ ದೊಡ್ಡ ಮಿತ್ತದ ಕನಸು ನನಸಾಗುತ್ತದೆ. ಇನ್ನು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಹ ಸಮಯೋಚಿತ ಅಟವನ್ನು ಆಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications