IPL Orange Cap: ಆರೆಂಜ್ ಕ್ಯಾಪ್‌ಗೆ 15 ವರ್ಷದ ವೈಭವ್ ಸೂರ್ಯವಂಶಿ ಅಧಿಪತಿ
ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಅವರ ಮೇಲೆ ನೆಟ್ಟಿದ್ದವು. ಈ ಪಂದ್ಯದಲ್ಲಿ ಟೈಟಾನ್ಸ್ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕರು ತಂಡಕ್ಕೆ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು. ಮೊದಲ ಓವರ್ ಬೌಲ್ ಮಾಡಿದ ಜಾಕೋಬ್ ಡಫಿ 13 ರನ್ ನೀಡಿದರು. ಆದರೆ ಭುವನೇಶ್ವರ್ ಕುಮಾರ್ ಎರಡನೇ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿದರು. ಮೂರನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಎಸೆತದಲ್ಲಿ ಶುಭಮನ್ ಗಿಲ್ 10 ರನ್ ಬಾರಿಸಿ ಔಟ್ ಆದರು. ಸಾಯಿ ಸುದರ್ಶನ್ ಅವರಿಗೆ ಭುವನೇಶ್ವರ್ ಕುಮಾರ್ ತೋಡಿದ ಖೆಡ್ಡಾಗೆ ಬಲಿಯಾದರು.

ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಈ ಬಾರಿಯ ಆರೆಂಜ್ ಕ್ಯಾಪ್‌ಗೆ ವೈಭವ್ ಸೂರ್ಯವಂಶಿ ಅಧಿಪತಿಯಾದರು. ವೈಭವ್ ಸೂರ್ಯವಂಶಿ ಈ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಇವರು ಆಡಿದ 16 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 776 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ. ಈ ವೇಳೆ 63 ಬೌಂಡರಿ, 72 ಸಿಕ್ಸರ್ ಸಿಡಿಸಿದ್ದಾರೆ.
ಫೈನಲ್‌ನಲ್ಲಿ ವೈಫಲ್ಯ
ವೈಭವ್ ಸೂರ್ಯವಂಶಿ ಅವರ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರಿಗೆ ಮಾತ್ರ ಇತ್ತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ವಿಫಲರಾದರು. ಪರಿಣಾಮ 19ನೇ ಆವೃತ್ತಿಯ ಆರೆಂಜ್ ಕ್ಯಾಪ್‌ನ್ನು ತಮ್ಮದಾಗಿಸಿಕೊಂಡರು.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಅವರು ಸಹ ಇದ್ದು, ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ 176 ರನ್‌ಗಳ ಅಂತರವಿದೆ. ಹೀಗಾಗಿ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟರ್ ಒಂದು ಇನಿಂಗ್ಸ್‌ನಲ್ಲಿ ಗಳಿಸುವುದು ಕಷ್ಟವಾಗಿದ್ದು, ಈ ಬಾರಿಯ ಆರೆಂಜ್ ಕ್ಯಾಪ್‌ನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಆಡಿದ 15 ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 600 ರನ್ ಸಿಡಿಸಿದ್ದಾರೆ. ಇನ್ನು ಇವರು ಫೈನಲ್‌ನಲ್ಲಿ ಬ್ಯಾಟ್ ಮಾಡುವುದು ಬಾಕಿ ಇದೆ.
ಗರಿಷ್ಠ ರನ್ ಬಾರಿಸಿದ ಟಾಪ್ 5 ಬ್ಯಾಟರ್ಸ್
ವೈಭವ್ ಸುರ್ಯವಂಶಿ, 16 ಪಂದ್ಯ, 776 ರನ್
ಶುಭಮನ್ ಗಿಲ್, 16 ಪಂದ್ಯ, 732 ರನ್
ಸಾಯಿ ಸುದರ್ಶನ್, 17 ಪಂದ್ಯ, 722 ರನ್
ಹೆನ್ರಿಕ್ ಕ್ಲಾಸೇನ್, 15 ಪಂದ್ಯ, 624 ರನ್
ಇಶಾನ್ ಕಿಶನ್, 15 ಪಂದ್ಯ, 602 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications