ಬುಮ್ರಾ, ಪಟೇಲ್ ವಾಪಸ್: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಂ ಇಂಡಿಯಾ
ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ತೆರಳುವ ಮುನ್ನ ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಭಾರತ ತಂಡವನ್ನು ಆಯ್ಕೆ ಮಾಡಲು, ಬಿಸಿಸಿಐ ಆಯ್ಕೆದಾರರು ಸಕಲ ಸಿದ್ಧತೆ ನಡೆಸಿದ್ದಾರೆ, ಸೆಪ್ಟೆಂಬರ್ 15ರ ಗುರುವಾರದೊಳಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 20ರಿಂದ ಸರಣಿ ಆರಂಭವಾಗಲಿದೆ. ಆಯ್ಕೆದಾರರು 15 ಸದಸ್ಯರ ಬದಲಿಗೆ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ. ಮುಂಬರುವ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು 18 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
"ಗುರುವಾರದೊಳಗೆ ತಂಡವನ್ನು ಹೆಸರಿಸಲಾಗುವುದು. ನಾವು 18-19 ಸದಸ್ಯರ ತಂಡವನ್ನು ಹೆಸರಿಸುತ್ತೇವೆ ಮತ್ತು ಎಲ್ಲಾ ಟಿ20 ವಿಶ್ವಕಪ್ ಸ್ಕ್ವಾಡ್ ಸದಸ್ಯರು ಮತ್ತು ಸ್ಟ್ಯಾಂಡ್-ಬೈ ಆಟಗಾರರು ಇರಲಿದ್ದಾರೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಯ್ಕೆಗಾರರು ಯಾವುದೇ ಪ್ರಯೋಗವನ್ನು ಮಾಡುವುದಿಲ್ಲ 15ರ ಬದಲಿಗೆ 17ರಿಂದ 18 ಸದಸ್ಯರ ತಂಡವನ್ನು ಹೆಸರಿಸಲಾಗುವುದು ಇದೇ ತಂಡ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಭಾರತ ಟಿ20 ವಿಶ್ವಕಪ್ ತಂಡವನ್ನು ಸೆಪ್ಟೆಂಬರ್ 16 ರೊಳಗೆ ಐಸಿಸಿಗೆ ಸಲ್ಲಿಸಬೇಕು.

ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಬುಮ್ರಾ, ಪಟೇಲ್
ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ತಂಡದ ಆಯ್ಕೆಗೆ ಲಭ್ಯವಿರುತ್ತಾರೆ. ಭಾರತ ತಂಡಕ್ಕೆ ಇದು ಶುಭಸುದ್ದಿಯಾಗಿದೆ.
"ಇಬ್ಬರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಬೌಲಿಂಗ್ ಪ್ರಾರಂಭಿಸಿದ್ದಾರೆ, ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ, ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಬೆಂಬಲಿಸಲಾಗುತ್ತದೆ. ಜಸ್ಪ್ರಿತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡದ ಆಯ್ಕೆಗಳಿಗೆ ಲಭ್ಯವಿರುತ್ತಾರೆ. ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
Ind vs SA : ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆ: ಯಾರಿಗೆಲ್ಲಾ ಅವಕಾಶ?

ಸೆಪ್ಟೆಂಬರ್ 28ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ
ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಕ್ತಾಯವಾದ ನಂತರ, ರೋಹಿತ್ ಶರ್ಮಾ ನೇತೃತ್ವದ ತಂಡವು ಸೆಪ್ಟೆಂಬರ್ 28 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಟೆಂಬಾ ಬುವಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು 2015 ರಿಂದ ಭಾರತದಲ್ಲಿ ಟಿ20 ಸರಣಿಯನ್ನು ಎಂದಿಗೂ ಸೋತಿಲ್ಲ.
ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಇದು ಕೊನೆಯ ಟಿ20 ಸರಣಿಯಾಗಿರುವುದರಿಂದ ಈ ಸರಣಿಯು ಎರಡೂ ತಂಡಗಳಿಗೆ ತುಂಬಾ ಮಹತ್ವದ್ದಾಗಿದೆ.

ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರು
ಆರಂಭಿಕ ಆಟಗಾರ ರೋಹಿತ್ ಶರ್ಮಾ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ. ರೋಹಿತ್ ಜೊತೆಗೆ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.
ನಂತರ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್ ಸ್ಥಾನ ಪಡೆಯುವುದು ಖಚಿತವಾಗಿದೆ.
ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್‌ರನ್ನು ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್, ದೀಪಕ್ ಚಹಾರ್, ಅಕ್ಷರ್ ಪಟೇಲ್ ಕೂಡ ತಂಡದಲ್ಲಿ ಇರಲಿದ್ದಾರೆ

ಇವರೇ ನೋಡಿ ಸ್ಟಾಂಡ್‌ಬೈ ಆಟಗಾರರು
ಆಸ್ಟ್ರೇಲಿಯಾ ಟಿ20 ಸರಣಿಗೆ 14-15 ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗಿದೆ. ಬಿಸಿಸಿಐ ಆಯ್ಕೆದಾರರು ಉಳಿದ ಸ್ಥಾನಗಳನ್ನು ಭರ್ತಿ ಮಾಡಬೇಕು ಮತ್ತು ಸ್ಟ್ಯಾಂಡ್-ಬೈ ಆಟಗಾರರನ್ನು ಹೆಸರಿಸಬೇಕಿದೆ.
ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಯುವ ಬ್ಯಾಟರ್ ಇಶಾನ್ ಕಿಶಾನ್, ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಅನುಭವಿ ಬ್ಯಾಟರ್ ಶ್ರೇಯಸ್ ಅಯ್ಯರ್ ಏಷ್ಯಾಕಪ್‌ನಲ್ಲಿ ಆಟದಿದ್ದ ರವಿ ಬಿಷ್ಣೋಯ್ ಸ್ಟ್ಯಾಂಡ್-ಬೈ ಆಟಗಾರರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications