'ಬಜ್‌ಬಾಲ್' ಎಂದು ಕರೆಯುವ ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಎದುರಾಳಿ ತಂಡಕ್ಕೆ ಭಯ ಹುಟ್ಟಿಸುವ ತಂತ್ರವು ಕ್ರಿಕೆಟ್ ಜಗತ್ತನ್ನು ಅವಕ್ಕಾಗಿಸಿದೆ.
ಇಂಗ್ಲೆಂಡ್‌ನ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಮ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಅಲವಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನತ್ತ ಪ್ರೇಕ್ಷಕರ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ.
ನಿರ್ಭೀತ ಬ್ಯಾಟಿಂಗ್ ಶೈಲಿಯು ಇಂಗ್ಲೆಂಡ್ ತಂಡಕ್ಕೆ ಹೆಚ್ಚಿನ ಪ್ರಶಂಸೆಗಳನ್ನು ತಂದುಕೊಟ್ಟಿದೆ ಮತ್ತು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಕಪಿಲ್ ದೇವ್ ಅವರು ಬಜ್‌ಬಾಲ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನ ಪ್ರದರ್ಶನವನ್ನು ಆನಂದಿಸಿದೆ ಎಂದು ಹೇಳಿದರು.
ಹರಿಯಾಣ ಮೂಲದ ಭಾರತೀಯ ಮಾಜಿ ನಾಯಕ ಕಪಿಲ್ ದೇವ್ ಅವರು ಹಾಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾರಿಗೆ ಸ್ವಲ್ಪ ಹೆಚ್ಚು ಆಕ್ರಮಣಕಾರಿಯಾಗಿರಲು ಒತ್ತಾಯಿಸಿದ್ದಾರೆ ಮತ್ತು ಡ್ರಾ ಮಾಡಿಕೊಳ್ಳಲು ಆಡುವ ಬದಲು, ಗೆಲ್ಲುವ ಉದ್ದೇಶಕ್ಕಾಗಿ ಆಡುವಂತೆ ತಂಡಕ್ಕೆ ತಿಳಿಸಿದರು.
"ಬಜ್‌ಬಾಲ್ ಅದ್ಭುತವಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿಯು ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಸರಣಿಗಳಲ್ಲಿ ಒಂದಾಗಿದೆ. ಕ್ರಿಕೆಟ್ ಅನ್ನು ಹಾಗೆ ಆಡಬೇಕು ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಉತ್ತಮ ಆಟಗಾರ. ಆದರೆ ಅವನು ಹೆಚ್ಚು ಆಕ್ರಮಣಕಾರಿಯಾಗಿರಬೇಕು," ಎಂದು ಕಪಿಲ್ ದೇವ್ ತಿಳಿಸಿದರು.

ಇಂಗ್ಲೆಂಡ್‌ನಂತಹ ತಂಡಗಳು ಈಗ ಹೇಗೆ ಆಡುತ್ತಿವೆ ಎಂಬುದನ್ನು ಯೋಚಿಸಬೇಕು. ಇದು ನಮಗೆ ಮಾತ್ರವಲ್ಲ, ಎಲ್ಲಾ ಕ್ರಿಕೆಟ್ ಆಡುವ ತಂಡಗಳು ಆ ನಿಟ್ಟಿನಲ್ಲಿ ಯೋಚಿಸಬೇಕು. ಪಂದ್ಯವನ್ನು ಗೆಲ್ಲುವುದು ಎಲ್ಲಾ ತಂಡಗಳಿಗೆ ಹೆಚ್ಚಿನ ಆದ್ಯತೆಯಾಗಿರಬೇಕು," ಎಂದು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಕಪಿಲ್ ದೇವ್ ಅಭಿಪ್ರಾಯಪಟ್ಟರು.
ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ದೂರವನ್ನು ಕ್ರಮಿಸುವ ಪ್ರಬಲ ತಂಡಗಳಲ್ಲಿ ಒಂದಾಗಿದೆ. 1983ರಲ್ಲಿ ಭಾರತದ ತಮ್ಮ ಮೊದಲ ವಿಶ್ವಕಪ್ ಗೆಲುವಿಗೆ ಕಾರಣರಾದ ಕಪಿಲ್ ದೇವ್ ಅವರು ಸೆಮಿಫೈನಲ್ ತಲುಪುವ ಪ್ರಾಮುಖ್ಯತೆ ಮತ್ತು ನಂತರದ ಪರಿಸ್ಥಿತಿಗಳು ಹೇಗೆ ಬರಲಿವೆ ಎಂಬುದನ್ನು ವಿವರಿಸಿದರು.
"ಭಾರತ ಮೊದಲು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಬೇಕು. ಅನಂತರ, ಏನು ಬೇಕಾದರೂ ಸಾಧ್ಯ. ಸೆಮಿಫೈನಲ್ ಹಂತದಿಂದ ನಿಮಗೆ ಅದೃಷ್ಟದ ಸ್ಟ್ರೋಕ್ ಅಗತ್ಯವಿದೆ ಮತ್ತು ನಿಮ್ಮ ದಾರಿಯಲ್ಲಿ ಬರುವ ಪರಿಸ್ಥಿತಿಗಲ ಅಗತ್ಯವಿದೆ. ಅದಕ್ಕೂ ಮುನ್ನ ಮುಖ್ಯವಾದ ವಿಷಯವೆಂದರೆ ಮೊದಲ ನಾಲ್ಕರಲ್ಲಿ ಸ್ಥಾನ ಪಡೆಯುವುದಾಗಿದೆ," ಎಂದು 64 ವರ್ಷದ ಕಪಿಲ್ಎ ದೇವ್ ತಿಳಿಸಿದರು.
ಭಾರತದ ಮುಂದಿನ ಏಕದಿನ ನಿಯೋಜನೆ ಏಷ್ಯಾ ಕಪ್ ಪಂದ್ಯಾವಳಿ ಆಗಿದೆ. ಇದನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯುವ 10 ತಂಡಗಳ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಪೂರ್ವತಯಾರಿಯಾಗಿದೆ.