Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಡಿ. 9 ರಿಂದ

ಅಡಿಲೇಡ್, ಡಿ. 1 : ಫಿಲ್ ಹ್ಯೂಸ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟೆಸ್ಟ್ ಡಿಸೆಂಬರ್ 9 ರಿಂದ ಆರಂಭವಾಗಲಿದೆ. ಜತೆಗೆ ಮುಂದಿನ ಟೆಸ್ಟ್ ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.

ನಿಗದಿಯಂತೆ ಮೊದಲ ಟೆಸ್ಟ್ ಡಿಸೆಂಬರ್ 4 ರಂದು ಬ್ರಿಸ್ಬೇನ್ ನಲ್ಲಿ ಆರಂಭವಾಗಬೇಕಿತ್ತು. ಆದರೆ ಈಗ ಪಂದ್ಯವನ್ನು ಅಡಿಲೇಡ್ ಗೆ ಸ್ಥಳಾಂತರ ಮಾಡಲಾಗಿದೆ. ಅಡಿಲೇಡ್ ನಲ್ಲಿ ಎರಡನೇ ಟೆಸ್ಟ್ ಪಂದ್ಯ ಡಿ. 12 ಕ್ಕೆ ಆರಂಭವಾಗಬೇಕಿತ್ತು. ಆದರೆ ಈಗ ಮೊದಲ ಟೆಸ್ಟ್ ಗೆ ಅಡಿಲೇಡ್ ಆತಿಥ್ಯ ವಹಿಸಲಿದ್ದು ಎರಡನೇ ಟೆಸ್ಟ್ ಡಿಸೆಂಬರ್ 17 ರಿಂದ ಬ್ರಿಸ್ಬೇನ್ ನಲ್ಲಿ ನಡೆಯಲಿದೆ.[ಹ್ಯೂಸ್ ಕುತ್ತಿಗೆಯನ್ನೇ ಸೀಳಿದ್ದ ಮಾರಕ ಬೌನ್ಸರ್]

cricket

ಆದರೆ ಮೂರನೇ ಟೆಸ್ಟ್ ಪಂದ್ಯದ ದಿನಾಂಕದಲ್ಲಿ ಯಾವ ಬದಲಾವಣೆಯಿಲ್ಲ. ನಿಗದಿಯಂತೆ ಮೇಲ್ಬೋರ್ನ್ ನಲ್ಲಿ ಡಿಸೆಂಬರ್ 26 ರಂದು ಆರಂಭವಾಗಲಿದೆ. ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಸಿಡ್ನಿಯಲ್ಲಿ ಜನವರಿ 3 ರಂದು ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿ ಜೇಮ್ಸ್ ಸದರ್ ಲ್ಯಾಂಡ್ , ಘಟನೆ ನಡೆದು ಹೋಗಿದೆ. ಇಲ್ಲಿ ಯಾವ ಆಟಗಾರರನ್ನು ದೂರಲು ಸಾಧ್ಯವಿಲ್ಲ. ಇಂಥ ಕಷ್ಟದ ದಿನಗಳಲ್ಲಿ ನಮಗೆ ಎಲ್ಲರ ಸಹಕಾರ ಅಗತ್ಯ. ತಕ್ಷಣ ಪಂದ್ಯ ಆಡುವುದು ಆಟಗಾರರಿಗೆ ಕಠಿಣ ಎನಿಸಬಹುದು. ರಾಷ್ಟ್ರದ ಜನ ಕ್ರಿಕೆಟ್ ಭಾವನೆ ಅರಿತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.[ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ: ಹ್ಯೂಸ್ #12]

ಭಾರತದ ಆಟಗಾರರು ಅಡಿಲೇಡ್ ಗೆ ಹಿಂದಿರುಗಬೇಕಿದೆ. ಫಿಲ್ ಹ್ಯೂಸ್ ಅಂತಿಮ ವಿಧಿ ವಿಧಾನಗಳು ಆತನ ತವರು ಮ್ಯಾಕ್ಸ್‌ ವಿಲ್ಲೆಯಲ್ಲಿ ಡಿಸೆಂಬರ್ 3 ರಂದು ನಡೆಯಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರವಿ ಶಾಸ್ತ್ರೀ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.[ಹಳೆಯ ವೇಳಾಪಟ್ಟಿ]

ಪರಿಷ್ಕೃತ ಟೆಸ್ಟ್ ವೇಳಾಪಟ್ಟಿ
ಮೊದಲನೇ ಟೆಸ್ಟ್ - ಡಿಸೆಂಬರ್ 9 ರಿಂದ 13
ಎರಡನೇ ಟೆಸ್ಟ್- ಡಿಸೆಂಬರ್ 17 ರಿಂದ 21
ಮೂರನೇ ಟೆಸ್ಟ್- ಡಿಸೆಂಬರ್ 26 ರಿಂದ 30
ನಾಲ್ಕನೇ ಟೆಸ್ಟ್- ಜನವರಿ 6 ರಿಂದ 10

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+