ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತಕ್ಕೆ ಅಭಿನಂದನೆಯ ಮಹಾಪೂರ

ಡರ್ಬನ್, ಫೆಬ್ರವರಿ 2: ಡರ್ಬನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಎಲ್ಲೆಡೆಯಿಂದಲೂ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ. ಟೆಸ್ಟ್ ನಲ್ಲಿ ಹೋದ ಮಾನವನ್ನು ಒಡಿಐ ನಲ್ಲಾದರೂ ಉಳಿಸಿಕೊಳ್ಳುವ ಭಾರತದ ಯತ್ನಕ್ಕೆ ಆರಂಭದಲ್ಲೇ ಶುಭ ದೊರೆತಂತಾಗಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ 45.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 270 ರನ್ ಗಳಿಸಿತು. ಆರಂಭಿಕ ಕುಸಿತ ಕಂಡಿದ್ದ ತಂಡ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಸಿಡಿಸಿದ 112(119) ರನ್ ಜೊತೆಗೆ ಅಜಿಂಕ್ಯ ರಹಾನೆಯವರ 79(86) ರನ್ನಿನಿಂದಾಗಿ ಯಶಸ್ಸು ಗಳಿಸುವಲ್ಲಿ ಸಫಲವಾಯಿತು.
ಟೀಂ ಇಂಡಿಯಾದ ಈ ಗೆಲುವನ್ನು ಮಾಜಿ ಕ್ರಿಕೆಟಿಗರು, ಕ್ರಿಕೆತ್ ಅಭಿಮಾನಿಗಳು ಹೆಮ್ಮೆಯಿಂದ ಶ್ಲಾಘಿಸಿದ್ದಾರೆ. ಕೋಹ್ಲಿ ತಂಡಕ್ಕೆ ಅಭುನಂದನೆಯ ಮಹಾಪೂರವೇ ಹರಿದುಬಂದಿದೆ.
ನಾನು ಕ್ರಿಕೆಟ್ ಅನ್ನು ಪ್ರೀತಿಸುವುದು ಇದಕ್ಕೇ!
ಟೀಂ ಇಂಡಿಯಾಕ್ಕೆ ಅಭಿನಂದನೆಗಳು. ಪ್ರತಿ ಪಂದ್ಯಕ್ಕೂ ಸುಧಾರಿತ ಪ್ರದರ್ಶನ ತೋರುವ ಕಾರಣಕ್ಕೇ ನನಗೆ ಕ್ರಿಕೆಟ್ ಇಷ್ಟವಾಗುವುದು. ಅದರಲ್ಲೂ ವಿರಾಟ್ ಕೋಹ್ಲಿ ಪ್ರದರ್ಶನವಂತೂ ಅಮೋಘ. ಇದು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಖುಷಿ ಕೊಟ್ಟ ಪಂದ್ಯ ಎಂದಿದ್ದಾರೆ ಬಾಲುವುಡ್ ನಟ ಅನಿಲ್ ಕಪೂರ್.
ವಿರಾಟ್ ಕೋಹ್ಲಿಗೆ ಸುಪ್ರೀಂ ನೋಟೀಸ್?!
ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿಗಳ ಭಾವನೆಗಳಿಗೆ ನೋವುಂಟು ಮಾಡಬಾರದೆಂಬ ಕಾರಣಕ್ಕೆ ವಿರಾಟ್ ಕೋಹ್ಲಿ ಅವರು ವರ್ಷಕ್ಕೆ ಇಂತಿಷ್ಟೇ ಶತಕ ಹೊಡೆಯಬೇಕೆಂದು ಸುಪ್ರೀಂ ಕೋರ್ಟ್ ನಿರ್ದಿಷ್ಟ ಸಂಖ್ಯೆಯನ್ನು ನೀಡಿದೆ ಎಂದು ಫರಾಗೊ ಅಬ್ದುಲ್ಲಾ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಧೋನಿ ಇರುವುದೇ ಗೆಲುವು ತಂದುಕೊಡುವುದಕ್ಕೆ!
ಎಂಎಸ್ ಧೋನಿಯವರು ಬೌಂಡರಿ ಬಾರಿಸುವ ಮೂಲಕ ಭಾರತ ತಂಡಕ್ಕೆ ಜಯ ತಂಡುಕೊಟ್ಟರು! ಟೀಂ ಇಂಡಿಯಾಕ್ಕೆ ಜಯ ತಂಡುಕೊಡುವುದಕ್ಕೆಂದೇ ಧೋನಿ ಹುಟ್ಟಿದ್ದಾರೆ ಎಂದು ಸರ್ ರವೀಂದ್ರ ಜಡೆಜಾ ಹೆಸರಿನ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಟ್ರಾಲಿವುಡ್
ಕೋಹ್ಲಿಯ ಜಾಣ್ಮೆಯ ಆಟ, ರಹಾನೆಯ ಆಕ್ರಮಣಕಾರಿ ಆಟ, ಧೋನಿಯವರ ಫಿನಿಶಿಂಗ್ ಶಾಟ್ ಇದು ಭಾರತ ಮತ್ತು ದಕ್ಷಿಣ ಆಫ್ರಿಕ ಸರಣಿಗೆ ಶುಭಾರಂಭ ಎಂದು ಟ್ರಾಲಿವುಡ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಎಂಥ ಅದ್ಭುತ ಪಂದ್ಯ!
ಎಂಥ ಅದ್ಭುತ ಪಂದ್ಯ ಇದು? ಭಾರತೀಯ ತಂಡಕ್ಕೆ ಅಭಿನಂದನೆಗಳು. ನಾವು ಕೇವಲ ಒಂದು ಪಂದ್ಯ ಗೆಲ್ಲಲಿಲ್ಲ. ಈ ಪಂದ್ಯ ಗೆಲ್ಲುವ ಮೂಲಕ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ವಿಶ್ವ ನಂ.1 ಆದೆವು ಎಂದಿದ್ದಾರೆ ಡಾಲೆರ್ ಮೆಹಂದಿ.
ಅಭಿನಂದನೆಗಳು
ಇಂದು ಭಾರತದ ಗೆಲುವಿಗೆ ಕಾರಣವಾಗಿದ್ದು ಎರಡು ಪಾರ್ತ್ನರ್ ಶಿಪ್ ಗಳು. ಒಂಮದು ಕುಲ್ದೀಪ್ ಮತ್ತು ಚಾಹಲ್ ಅವರು. ಇನ್ನೊಂದು ಕೋಹ್ಲಿ ರಹಾನೆ ಅವರದು. ನಿಜಕ್ಕೂ ಅತ್ಯುತ್ತಮ ಗೆಲುವು. ಇದೇ ಪ್ರದರ್ಶನ ಮುಂದುವರಿಯಲಿ ಎಂದಿದ್ದಾರೆ ಸಚಿನ್ ತೆಂಡುಲ್ಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications