For Quick Alerts
ALLOW NOTIFICATIONS  
For Daily Alerts
 

ಫಲ ನೀಡದ ರೋಹಿತ್ ಶತಕ, ಭಾರತಕ್ಕೆ 5 ರನ್ ಸೋಲು

ಕಾನ್ಪುರ, ಅಕ್ಟೋಬರ್. 11:ಟಿ-20ಯಲ್ಲಿ ಸೋತು ಸುಣ್ಣವಾಗಿದ್ದ ಭಾರತ ತಂಡ ಮೊದಲ ಏಕದಿನದಲ್ಲಿ ವಿರೋಚಿತ ಸೋಲು ಕಂಡಿದೆ. ರೋಹಿತ್ ಶರ್ಮಾ ಭರ್ಜರಿ ಶತಕವೂ ಭಾರತಕ್ಕೆ ಜಯ ತಂದುಕೊಡಲಿಲ್ಲ.

30 ಓವರ್ ಗಳ ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಭಾರತ ಅಂತಿಮವಾಗಿ 5 ರನ್ ಸೋಲು ಕಂಡಿತು. ರೋಹಿತ್ ಶರ್ಮಾ ಅವರೇ ಭಾರತ ಗಳಿಸಿದ ರನ್ ಗಳಲ್ಲಿ ಅರ್ಧಕ್ಕಿಂತ (150 ರನ್) ಹೆಚ್ಚನ್ನು ದಾಖಲು ಮಾಡಿದರು.

[ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಕಂಪ್ಲೀಟ್ ಗೈಡ್]

cricket

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾದ ನಾಯಕ ಎ ಬಿ ಡಿವಿಲಿಯರ್ಸ್ ಅವರ 73 ಎಸೆತಗಳಲ್ಲಿ 104 ರನ್ ಗಳ ನೆರವಿನಲ್ಲಿ 303 ರನ್ ಕಲೆಹಾಕಿತ್ತು.

ಕೊನೆಯ ಓವರ್ ನಲ್ಲಿ ಭಾರಕ್ಕೆ 11 ರನ್ ಬೇಕಿತ್ತು. ನಾಯಕ ಎಂಎಸ್ ಧೋನಿ ಕ್ರೀಸ್ ನಲ್ಲಿದ್ದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ದಕ್ಷಿಣಾ ಆಪ್ರಿಕಾ ಪರ ಇಮ್ರಾನ್ ಥಹೀರ್ ಮಾರಕ ಬೌಲಿಂಗ್ ದಾಳಿ ನಡೆಸಿ ಭಾರತದ ಕಡೆ ವಾಲಿದ್ದ ವಿಜಯಲಕ್ಷ್ಮೀಯನ್ನು ಒಲಿಸಿಕೊಂಡರು.

ಆರಂಭದಲ್ಲಿ ಮಂದಗತಿಯ ಆಟವಾಡಿದ ಆಫ್ರಿಕಾ ಕೊನೆಯ ಓವರ್ ಗಳಲ್ಲಿ ರನ್ ಮಳೆ ಹರಿಸಿತು. ಆರು ಸಿಕ್ಸರ್ ಮತ್ತು ಐದು ಬೌಂಡರಿಗಳ ನೆರವಿನಿಂದ ಎಬಿಡಿ ಆರ್ಭಟಿಸಿದರು. ಡುಪ್ಲೆಸಿಸ್ ಸಹ ಅರ್ಧ ಶತಕದ ಕೊಡುಗೆ ನೀಡಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+