For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧ 79 ರನ್ ಗಳಿಂದ ಸೋಲು ಕಂಡ ಭಾರತ

By Mahesh

ಢಾಕಾ, ಜೂ.18: ಮಳೆಯ ಭೀತಿಯ ನಡುವೆ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೀರ್ ಪುರ್ ನಲ್ಲಿ ನಡೆದ ಪಂದ್ಯ ಸ್ಥಳೀಯ ಪ್ರೇಕ್ಷಕರನ್ನು ರಂಜಿಸಿದೆ. ಎಡಗೈ ವೇಗಿ ಮುಸ್ತಫಿಜುರ್ ದಾಳಿಗೆ ಭಾರತ ತತ್ತರಿಸಿತು.

ಟಾಸ್ ಗೆದ್ದ ಅತಿಥೇಯ ಬಾಂಗ್ಲಾದೇಶ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ 308 ರನ್ ಟಾರ್ಗೆಟ್ ನೀಡಿತು. ಭಾರತದ ಉತ್ತಮ ಆರಂಭದ ನಡುವೆ ಮಧ್ಯಮ ಕ್ರಮಾಂಕದ ಕುಸಿತದಿಂದ ರನ್ ಚೇಸ್ ಮಾಡಲು ತಿಣುಕಾಡಿ 228 ಸ್ಕೋರ್ ಮಾಡಿ 79 ರನ್ ಗಳಿಂದ ಸೋಲು ಕಂಡಿದೆ.

ಭಾರತದ ರನ್ ಚೇಸ್:
* 308 ರನ್ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮ ಉತ್ತಮ ಆರಂಭ ಒದಗಿಸಿದರು. ಇನ್ನೊಂದೆಡೆ ಶಿಖರ್ ಧವನ್ ರನ್ ಗಳಿಸಲು ತಿಣುಕಾಡಿದರು.
* ಧವನ್ ಕೊನೆಗೆ 38 ಎಸೆತಗಳಲ್ಲಿ 30 ರನ್ ಗಳಿಸಿ ತಸ್ಕಿನ್ ಅಹ್ಮದ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಮುಷ್ಫಿಕರ್ ರಹೀಂಗೆ ಕ್ಯಾಚಿತ್ತು ಔಟಾದರು.
* ತಂಡದ ಮೊತ್ತ 95 ರನ್ ಆಗಿದ್ದಾಗ ಮೊದಲ ವಿಕೆಟ್ ಕಳೆದುಕೊಂಡ ಭಾರತ ನಂತರ 20 ರನ್ ಸೇರಿಸುವಷ್ಟರಲ್ಲಿ ಇನ್ನೂ ಮೂರು ವಿಕೆಟ್ ನಷ್ಟ ಅನುಭವಿಸಿತು.
* ವಿರಾಟ್ ಕೊಹ್ಲಿ 1 ರನ್, ರೋಹಿತ್ ಶರ್ಮ 63, ಅಜಿಂಕ್ಯ ರಹಾನೆ 9 ರನ್ ಗಳಿಸಿ ಔಟಾದರು.
* ರೋಹಿತ್ ಶರ್ಮ 68 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ 63 ರನ್ ಗಳಿಸಿ ಉತ್ತಮವಾಗಿ ಆಡುವಾಗಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
* ನಾಯಕ ಧೋನಿ ಕೂಡಾ 5 ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು.

Bangladesh celebration

* ಇದಾದ ಬಳಿಕ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜ 60ರನ್ ಜೊತೆಯಾಟ ಕಂಡು ಬಂದಿತು.
* ಸುರೇಶ್ ರೈನಾ 40 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರೆ, ಜಡೇಜ 32 ರನ್ ಗಳಿಸಿದರು.
* ರೈನಾ ಔಟಾಗುತ್ತಿದ್ದಂತೆ ಬಾಂಗ್ಲಾ ಗೆಲುವಿನ ಕನಸು ನನಸಾಗತೊಡಗಿತು.
* ಮೊದಲ ಪಂದ್ಯವಾಡುತ್ತಿರುವ ಮುಸ್ತಫಿಜುರ್ 50 ರನ್ನಿತ್ತು 5 ಗಳಿಸಿ ಭಾರತ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
* ತಸ್ಕಿನ್ ಎರಡು ಹಾಗೂ ಮೊರ್ತಜಾ, ಶಕೀಬ್ ತಲಾ ಒಂದು ವಿಕೆಟ್ ಗಳಿಸಿದರು.
Rohit Sharma

ಬಾಂಗ್ಲಾ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಮಳೆ ಕಾಟ ನಡುವೆಯೂ ಉತ್ತಮವಾಗಿ ಆಡಿ 49.4 ಓವರ್ ಗಳಲ್ಲಿ 307 ರನ್ ಸ್ಕೋರ್ ಮಾಡಿತು.
* ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ 60 ರನ್ (62 ಎಸೆತ, 7x4, 1x6)
* ಸೌಮ್ಯ ಸರ್ಕಾರ್ 54 ರನ್ (40 ಎಸೆತ, 8x4, 1x6) ಉತ್ತಮ ಆರಂಭ ಒದಗಿಸಿದರು.
* ಶಕೀಬ್ ಅಲ್ ಹಸನ್ 3 ಬೌಂಡರಿಯಿದ್ದ 52 ರನ್ ಗಳಿಸಿದರು.
* ಸಬೀರ್ ರಹ್ಮಾನ್ 41 ರನ್, ನಾಸೀರ್ ಹುಸೇನ್ 34 ರನ್, ನಾಯಕ ಮೋರ್ತಜಾ 21 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
* ಟೀಂ ಇಂಡಿಯಾ, ವೈಡ್, ಲೆಗ್ ಬೈ, ನೋಬಾಲ್, ಬೈ ಮೂಲಕ 17 ರನ್ ನೀಡಿದ್ದು ಗಮನಾರ್ಹ.
* ಮೂವರು ವೇಗಿಗಳು ಇಬ್ಬರು ಸ್ಪಿನ್ನರ್ ಗಳ ಟೀಂ ಇಂಡಿಯಾ ದಾಳಿಯನ್ನು ಬಾಂಗ್ಲಾ ಸಮರ್ಥವಾಗಿ ಎದುರಿಸಿತು.
* ಟೀಂ ಇಂಡಿಯಾ ಪರ ಆರ್ ಅಶ್ವಿನ್ 51 ರನ್ನಿತ್ತು 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
* ಉಳಿದಂತೆ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ತಲಾ 2, ಮೋಹಿತ್ ಶರ್ಮ ಹಾಗೂ ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.
* 4.4 ಓವರ್ ಗಳಲ್ಲಿ 53 ರನ್ ಚೆಚ್ಚಿಸಿಕೊಂಡ ಮೋಹಿತ್ ಶರ್ಮ ದುಬಾರಿ ಬೌಲರ್ ಎನಿಸಿದರು.
* ವಿರಾಟ್ ಕೊಹ್ಲಿ ವಿಕೆಟ್ ಕೀಪಿಂಗ್, ಕ್ಯಾಪ್ಟನ್, ಬೌಲರ್ ಆಗಿ (2 ಓವರ್ ಗಳಲ್ಲಿ 12 ರನ್) ಕಾಣಿಸಿಕೊಂಡರು. ನಂತರ ರನ್ ಚೇಸಿನಲ್ಲಿ 1 ರನ್ ಗಳಿಸಿ ಔಟಾದರು.

ಗುರುವಾರ ಮಧ್ಯಾಹ್ನ ಷೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಪರ ವಿಕೆಟ್ ಕೀಪರ್ ಲಿಟ್ಟನ್ ದಾಸ್, ಎಡಗೈ ವೇಗಿ ಮುಷ್ಪಿಝರ್ ರಹ್ಮಾನ್ ತಮ್ಮ ಮೊದಲ ಪಂದ್ಯವನ್ನಾಡಿದರು.

1st ODI: Bangladesh win toss, opt to bat against India

ಭಾರತ ಮೂವರು ವೇಗಿಗಳನ್ನು ಕಣಕ್ಕಿಳಿಸಿತು. ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಹಾಗೂ ಮೋಹಿತ್ ಶರ್ಮ ಜೊತೆಗೆ ರವೀಂದ್ರ ಜಡೇಜ ಹಾಗೂ ಆರ್ ಅಶ್ವಿನ್ ಸ್ಪಿನ್ನರ್ ಗಳಾಗಿದ್ದಾರೆ. ಬಾಂಗ್ಲಾ ವಿರುದ್ಧ ಭಾರತ ಒಟ್ಟು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.

ತಂಡ ಇಂತಿದೆ
ಬಾಂಗ್ಲಾದೇಶ: ಎಂ ಮೊರ್ತಾಜಾ (ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮುಷ್ಫಿಕರ್ ರಹೀಂ, ಶಕೀಬ್ ಅಲ್ ಹಸನ್, ಸಬ್ಬೀರ್ ರಹ್ಮಾನ್, ನಸೀರ್ ಹುಸೇನ್, ಮುಸ್ಟಫಿಝರ್ ರಹ್ಮಾನ್, ರುಬೇಲ್ ಹುಸೇನ್, ತಸ್ಕೀನ್ ಅಹ್ಮದ್

ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್). ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್,ಮೋಹಿತ್ ಶರ್ಮ ಹಾಗೂ ಉಮೇಶ್ ಯಾದವ್. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+