ಜಿಂಬಾಬ್ವೆ ವಿರುದ್ಧ ತಿಣುಕಾಡಿ, ತಿಣುಕಾಡಿ ಗೆದ್ದ ಭಾರತ
ಹರಾರೆ, ಜುಲೈ 10: ಬಾಂಗ್ಲಾದೇಶದ ಸರಣಿ ಸೋಲಿನಿಂದ ಕಂಗೆಟ್ಟಿದ್ದ ತಂಡಕ್ಕೆ ಜಯದ ಟಾನಿಕ್ ಸಿಕ್ಕಿದೆ. ಕೊನೆಯವರೆಗೂ ಕುತೂಹಲ ಕಾಯ್ದುಕೊಂಡ ಪಂದ್ಯದಲ್ಲಿ ಭಾರತಕ್ಕೆ ದಕ್ಕಿದ್ದು 4 ರನ್ ಗಳ ಜಯ.
ಜಿಂಬಾಬ್ವೆ ನಾಯಕ ಎಲ್ಟಾನ್ ಚಿಂಗುಂಬುರಾ ಅವರ ಶತಕ ಜಿಂಬಾಬ್ವೆಗೆ ಗೆಲುವು ತಂದು ಕೊಡಲಿಲ್ಲ. ಕೊನೆ ಓವರ್ ಎಸೆದ ಭುವನೇಶ್ವರ್ ಭಾರತದ ಪಾಲಿಗೆ ಹೀರೋ ಆದರು. ಶತಕ ಸಾಧಕ ರಾಯಡು ಮತ್ತು ಅರ್ಧಶತಕ ದಾಖಲಿಸಿದ ಸ್ಟುವರ್ಟ್ ಬಿನ್ನಿ ಭಾರತಕ್ಕೆ ಜಯ ತಂದುಕೊಟ್ಟರು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಭಾರತ ಉತ್ತಮ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ನಾಯಕ ಅಜಿಂಕ್ಯ ರಹಾನೆ 34 ರನ್ ಗಳಿಸಿ ಔಟಾಗುವುದಕ್ಕೂ ಮುನ್ನ ಮಿರಳಿ ವಿಜಯ್ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.
ಮನೋಜ್ ತಿವಾರಿ 2, ರಾಬಿನ್ ಉತ್ತಪ್ಪ 0, ಕೇದಾರ್ ಜಾಧವ್ 5 ವೈಫಲ್ಯದ ನಡುವೆ ಸ್ಟುವರ್ಟ್ ಬಿನ್ನಿ 76 ಎಸೆತಗಳಲ್ಲಿ 77ರನ್ (6 ಬೌಂಡರಿ, 2 ಸಿಕ್ಸರ್),ಅಂಬಟಿ ರಾಯುಡು ಅಜೇಯ 125 ರನ್ (133 ಎಸೆತ, 12x4, 1x6) ಗಳಿಸಿ ಭಾರತದ ಮೊತ್ತ 255ಕ್ಕೆ ಏರಿಸಿದರು. ಜಿಂಬಾಬ್ವೆ ಪರ ತಿರಿಪಾನೋ ಹಾಗೂ ಚಿಭಾಭಾ ತಲಾ 2 ವಿಕೆಟ್ ಹಾಗೂ ವಿಟೋರಿ 1 ವಿಕೆಟ್ ಕಿತ್ತರು.

ಟಾಸ್ ವರದಿ:ಐಸಿಸಿ ವಿಧಿಸಿರುವ ಹೊಸ ನಿಯಮಗಳ ಅಡಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ. ಅಜಿಂಕ್ಯ ರಹಾನೆ ಅವರಿಗೂ ನಾಯಕನಾಗಿ ಇದು ಚೊಚ್ಚಲ ಪಂದ್ಯ. ಭಾರತ 23ನೇ ಏಕದಿನ ಕ್ರಿಕೆಟ್ ನಾಯಕನಾಗಿ ರಹಾನೆ ಕಣಕ್ಕಿಳಿದಿದ್ದಾರೆ.
ಹರ್ಭಜನ್ ಸಿಂಗ್ ಅವರು ನಾಲ್ಕುವರ್ಷಗಳ ನಂತರ ಆಡುತ್ತಿದ್ದಾರೆ. ಕರ್ನಾಟಕ ತಂಡದ ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ ಆಡುವ XI ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

2013ರಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ತಂಡ 5-0 ಅಂತರದ ಸರಣಿ ಜಯ ದಾಖಲಿಸಿತ್ತು. ಐಸಿಸಿ ವಿಶ್ವಕಪ್ 2015ರಲ್ಲಿ ಆಕ್ಲೆಂಡ್ ನಲ್ಲಿ ಕೊನೆಯಬಾರಿಗೆ ಮುಖಾಮುಖಿ, ಭಾರತಕ್ಕೆ 6ವಿಕೆಟ್ ಗಳಿಂದ ಜಯ. ಟೆನ್ ಸ್ಫೋರ್ಟ್ಸ್/ ಟೆನ್ ಕ್ರಿಕೆಟ್ ನಲ್ಲಿ ಎಲ್ಲಾ ಪಂದ್ಯಗಳು ಪ್ರಸಾರವಾಗಲಿದೆ.
ಭಾರತ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ರಾಬಿನ್ ಉತ್ತಪ್ಪ, ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್

ಜಿಂಬಾಬ್ವೆ: ಎಲ್ಟಾನ್ ಚಿಗುಂಬರಾ (ನಾಯಕ), ಸೀನ್ ವಿಲಿಯಮ್ಸ್, ಚಾಮು ಚಿಭಾಭಾ, ಗ್ರೀಮ್ ಕ್ರೇಮೆರ್, ಹ್ಯಾಮಿಲ್ಟನ್ ಮಸಕಡ್ಜ, ರಿಚ್ಮಂಡ್ ಮುತುಮ್ಬಾಮಿ (ವಿಕೆಟ್ ಕೀಪರ್), ತಿನಾಷೆ ಪಯಾಂಗರ, ವುಸಿ ಸಿಬಾಂಡಾ, ಸಿಕಂದರಾ ರಾಜ, ಡೋನಾಲ್ಡ್ ತಿರಿಪಾನೋ, ಬ್ರಿಯನ್ ವಿಟೋರಿ (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications