ಸೋತ ಟಿ20 ಪಂದ್ಯದಲ್ಲೂ ಕ್ಯಾಪ್ಟನ್ ಧೋನಿ ವಿಶ್ವದಾಖಲೆ
ಧರ್ಮಶಾಲ, ಅ.2: ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ಸ್ ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ಕ್ರಿಕೆಟ್ ಪ್ರಿಯರಿಗೆ ಮೊದಲ ಟಿ20 ರಸದೌತಣ ಒದಗಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸೋಲಿನ ಕಾರಣ ಹುಡುಕುವುದರ ಜೊತೆಗೆ ಆಟಗಾರರ ದಾಖಲೆಯ ಲೆಕ್ಕಾಚಾರವೂ ಮುಂದುವರೆದಿದೆ.
ಮೊದಲ ಟಿ20 ಪಂದ್ಯವನ್ನು ಸೋಲಲು ಬೌಲರ್ ಗಳು, ಕೆಟ್ಟ ಅಂಪೈರಿಂಗ್ ಕಾರಣ ಎಂದು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಪಂದ್ಯ ಸೋತರೂ ಧೋನಿ ಅವರು ವೈಯಕ್ತಿಕ ದಾಖಲೆ ಬರೆದಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಇತಿಹಾಸದಲ್ಲೇ ಮೊದಲ ಬಾರಿಗೆ 5೦ ಪಂದ್ಯಗಳಿಗೆ ನಾಯಕರಾಗಿ ತಂಡವನ್ನು ಮುಂದುವರೆಸಿದ ದಾಖಲೆಯನ್ನು ಧೋನಿ ಹೊಂದಿದ್ದಾರೆ.[ರೈನಾ ನಂತರ ವಿಶಿಷ್ಟ ದಾಖಲೆ ಬರೆದ ರೋಹಿತ್]

34ವರ್ಷ ವಯಸ್ಸಿನ ಧೋನಿ ಅವರು 2007ರಲ್ಲಿ ಮೊಟ್ಟ ಮೊದಲ ಬಾರಿಗೆ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದರು. ಶೇ 50ರಷ್ಟು ಗೆಲುವಿನ ಯಶಸ್ಸು ಹೊಂದಿರುವ ಧೋನಿ ಅವರುಈ ಪಂದ್ಯಕ್ಕೂ ಮುನ್ನ 26 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 21ರಲ್ಲಿ ಸೋಲು ಕಂಡಿದ್ದಾರೆ. 1 ಟೈ ಹಾಗೂ 1 ಯಾವುದೇ ಫಲಿತಾಂಶ ಬಂದಿಲ್ಲ ದಾಖಲೆ ಹೊಂದಿದ್ದರು.
2014ರ ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದ ಧೋನಿ ಅವರು ಒಂದು ವರ್ಷ ಬಳಿಕ ಟಿ20 ಟೀಂ ಇಂಡಿಯಾ ನಾಯಕರಾಗಿ ಕಣಕ್ಕಿಳಿದಿದ್ದರು.[ಟಾಸ್ ಸೋತು, ಮ್ಯಾಚನ್ನೂ ಸೋತ ಭಾರತ]
ವೈಯಕ್ತಿಕವಾಗಿ 51 ಟಿ20 ಪಂದ್ಯವಾಡಿರುವ ಧೋನಿ ಅವರು ಒಂದೇ ಒಂದು ಪಂದ್ಯದಲ್ಲಿ ಮಾತ್ರ ನಾಯಕತ್ವ ವಹಿಸಿರಲಿಲ್ಲ. 2006ರ ಡಿಸೆಂಬರ್ 1 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ಸೆಹ್ವಾಗ್ ನಾಯಕತ್ವದಲ್ಲಿ ಧೋನಿ ಆಡಿದ್ದರು. ಆ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದಿತ್ತು.
ಟಿ20 ನಾಯಕರಾಗಿ ಮೊದಲ ಅವಧಿಯಲ್ಲೇ ಧೋನಿ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಟಿ20 ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ಐಸಿಸಿ ಆಯೋಜನೆಯ ವಿಶ್ವ ಟಿ 20(2007), ವಿಶ್ವಕಪ್ (2011) ಹಾಗೂ ಚಾಂಪಿಯನ್ಸ್ ಟ್ರೋಫಿ (2013) ಗೆದ್ದಿರುವ ಏಕೈಕ ನಾಯಕ ಎಂಎಸ್ ಧೋನಿ.

ಧರ್ಮಶಾಲದಲ್ಲಿ ತಮ್ಮ ನಾಯಕತ್ವದ 50ನೇ ಪಂದ್ಯದಲ್ಲಿ ಧೋನಿ ಅವರು ಅರ್ಧಶತಕ ಬಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಿ 20 ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಟಾಪ್ 5 ನಾಯಕರು (ಅಕ್ಟೋಬರ್ 4, 2015)
* ಎಂಎಸ್ ಧೋನಿ (ಭಾರತ) - 50
* ವಿಲಿಯಮ್ ಪೋಟರ್ ಫೀಲ್ಡ್ (ಐರ್ಲೆಂಡ್) -41
* ಡರೇನ್ ಸಮಿ( ವೆಸ್ಟ್ ಇಂಡೀಸ್)-39
* ಪಾಲ್ ಕಾಲಿಂಗ್ ವುಡ್ (ಇಂಗ್ಲೆಂಡ್) - 30
* ಪೀಟರ್ ಬರೆನ್ (ದಿ ನೆದರ್ಲೆಂಡ್ಸ್), ಮಹಮ್ಮದ್ ಹಫೀಜ್, ಶಹೀದ್ ಅಫ್ರಿದಿ (ಇಬ್ಬರೂ ಪಾಕಿಸ್ತಾನ) -29
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications