ದೀಪ್ತಿ ಶರ್ಮಾ ಮಾರಕ ಬೌಲಿಂಗ್‌ಗೆ ಶರಣೆಂದ ದಕ್ಷಿಣ ಆಫ್ರಿಕಾ ವನಿತೆಯರು

ಸೂರತ್, ಸೆಪ್ಟೆಂಬರ್ 24: ಗುಜರಾತ್‌ನ ಸೂರತ್‌ನಲ್ಲಿರುವ ಲಾಲಭಾಯ್ ಕಾಂಟ್ರ್ಯಾಕ್ಟರ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 24) ನಡೆದ ಭಾರತದ ವನಿತೆಯರು ಮತ್ತು ದಕ್ಷಿಣ ಆಫ್ರಿಕಾ ವನಿತೆಯರ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 11 ರನ್ ಜಯ ಗಳಿಸಿದೆ. ಸ್ಪಿನ್ನರ್ ದೀಪ್ತಿ ಶರ್ಮಾ ಮಾರಕ ಬೌಲಿಂಗ್‌ನಿಂದಾಗಿ ದೇಸಿ ತಂಡ ಗೆಲುವಿನ ನಗು ಬೀರಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡದಿಂದ ಸ್ಮೃತಿ ಮಂಧಾನ 21, ಜೆಮಿಮಾ ರೋಡ್ರಿಗಸ್ 19, ನಾಯಕಿ ಹರ್ಮನ್‌ಪ್ರೀತ್ ಕೌರ್ 43 (34 ಎಸೆತ), ದೀಪ್ತಿ ಶರ್ಮಾ 16, ವೇದಾ ಕೃಷ್ಣಮೂರ್ತಿ 10, ತಾನಿಯಾ ಭಾಟಿಯಾ 11, ಶಿಖಾ ಪಾಂಡೆ 3 ರನ್ ಕೊಡುಗೆಯಿತ್ತರು.
ಭಾರತದ ವನಿತೆಯರು 20 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 130 ರನ್ ಪೇರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಶಬ್ನಿಮ್ ಇಸ್ಮಾಯಿಲ್ 26ಕ್ಕೆ 3, ತುಮಿ ಸೆಖುಖುನೆ 1, ನೊಂಡುಮಿಸೊ ಶಾಂಗೇಸ್ 1, ನಡೈನ್ ಡೆ ಕ್ಲಾರ್ಕ್ 10ಕ್ಕೆ 2 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ವನಿತಾ ತಂಡ, ಲಿಜೆಲ್ ಲೀ 16, ಲಾರಾ ವೊಲ್ವಾರ್ಡ್ 14, ಮಿಗ್‌ನಾನ್ ಡು ಪ್ರೀಝ್ 59 (43 ಎಸೆತ) ರನ್‌ನೊಂದಿಗೆ 19.5 ಓವರ್ ಮುಕ್ತಾಯಕ್ಕೆ 10 ವಿಕೆಟ್ ಕಳೆದು 119 ರನ್ ಮಾಡಿತು. ಈ ವೇಳೆ ಶಿಖಾ ಪಾಂಡೆ 18ಕ್ಕೆ 2, ದೀಪ್ತಿ ಶರ್ಮಾ 8ಕ್ಕೆ 3, ಪೂನಂ ಯಾದವ್ 2, ಹರ್ಮನ್‌ಪ್ರೀತ್ ಕೌರ್ 1, ರಾಧಾ ಯಾದವ್ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ ಪಂದ್ಯಶ್ರೇಷ್ಠೆ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications