ಮೊಹಾಲಿಯಲ್ಲಿ ಆಫ್ರಿಕಾ ಮುಳುಗಿಸಿದ ಮೂವರು ರವಿಗಳು!
ಮೊಹಾಲಿ, ನವೆಂಬರ್, 07: ದಕ್ಷಿಣ ಆಫ್ರಿಕಾದ ಗೆಲುವಿನ ಓಟಕ್ಕೆ ಭಾರತದ ಸ್ಪಿನ್ನರ್ ಗಳು ಬ್ರೇಕ್ ಹಾಕಿದ್ದಾರೆ. ಮೊಹಾಲಿ ಟೆಸ್ಟ್ ನಲ್ಲಿ ಭಾರತ 108 ರನ್ ಗಳ ಅರ್ಹ ಜಯ ಸಂಪಾದಿಸಿದೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರ ಅಶ್ವಿನ್ ಸ್ಪಿನ್ ದಾಳಿ ಎದುರು ಆಫ್ರಿಕಾ ಮುಳುಗಿದೆ,
ದಕ್ಷಿಣ ಆಫ್ರಿಕಾ ಭಾರತದ ಮೂವರು ರವಿಗಳ ಪ್ರಭೆ ಎದುರು ನಿಂತುಕೊಳ್ಳಲು ಸಾಧ್ಯವಾಗಲಿಲ್ಲ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಪ್ರದರ್ಶನ ಮತ್ತು ರವಿ ಶಾಸ್ತ್ರಿ ಮಾರ್ಗದರ್ಶನದ ಎದುರು ಆಫ್ರಿಕಾ ಮುಳುಗಿದೆ.[ದಕ್ಷಿಣಾ ಆಫ್ರಿಕಾ ವೇಗಿ ದಾಖಲೆ ಪುಡಿಮಾಡಿದ ಅಶ್ವಿನ್]
| ದಕ್ಷಿಣ ಆಫ್ರಿಕಾ vs ಭಾರತ ಚಿತ್ರ ಸಂಪುಟ
ಕಡಿಮೆ ಮೊತ್ತದ ಪಂದ್ಯ ಮೂರೇ ದಿನಕ್ಕೆ ಮುಗಿಯುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆಲ್ ರೌಂಡರ್ ಹೆಸರಿಗೆ ತಕ್ಕಂತೆ ಆಡಿದ ಜಡೇಜಾ ಒಟ್ಟು ಎರಡು ಇನಿಂಗ್ಸ್ ನಿಂದ 8 ವಿಕೆಟ್ ಕಿತ್ತರು. ಮೊದಲ ಇನಿಂಗ್ಸ್ ನಲ್ಲಿ 38 ರನ್ ಗಳಿಸಿ ಮಿಂಚಿದ್ದರು. ಮತ್ತೊಂದೆಡೆ ಅಶ್ವಿನ್ ಸಹ 8 ವಿಕೆಟ್ ಕಿತ್ತರು. ಜಡೇಜಾ ಪಂದ್ಯ ಪುರುಷೋತ್ತಮರಾಗಿ ಹೊರಹೊಮ್ಮಿದರು. ಮುಂದಿನ ಟೆಸ್ಟ್ ಬೆಂಗಳೂರಿನಲ್ಲಿ ನಡೆಯಲಿದ್ದು ಭಾರತ ತಂಡ ಇದೆ ಬಗೆಯ ಪ್ರದರ್ಶನ ಕಾಯ್ದುಕೊಳ್ಳಬೇಕಿದೆ.

ಕೊಹ್ಲಿಗೆ ಮೊದಲ ಜಯದ ಸವಿ
ಟೆಸ್ಟ್ ನಾಯಕರಾಗಿ ವಿರಾಟ್ ಕೊಹ್ಲಿಗೆ ಸ್ವದೇಶದಲ್ಲಿ ಮೊದಲ ಗೆಲುವಿನ ಸಿಹಿ ಸಿಕ್ಕಿತು. ಟಿ 20 ಮತ್ತು ಏಕದಿನದಲ್ಲಿ ಸೋಲು ಅನುಭವಿಸಿದ್ದ ಭಾರತಕ್ಕೆ ಈ ಜಯ ಹೊಸ ಚೈತನ್ಯ ತುಂಬಿದೆ.

ಸ್ಪಿನ್ನರ್ ಗಳ ಮ್ಯಾಜಿಕ್
ಅಮಿತ್ ಮಿಶ್ರಾ, ಅಶ್ವಿನ್ ಮತ್ತು ಜಡೇಜಾ ಆಫ್ರಿಕಾದ 19 ವಿಕೆಟ್ ಗಳನ್ನು ಕಬಳಿಸಿದರು. ಮೊಹಾಲಿ ಪಿಚ್ ಆರಂಭದ ದಿನದಿಂದಲೂ ಸ್ಪಿನ್ನರ್ ಗಳಿಗೆ ನೆರವು ನೀಡುತ್ತಲೇ ಬಂದಿತ್ತು.

ಅಶ್ವಿನ್ ದಾಖಲೆ
29 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 150 ಟೆಸ್ಟ್ ವಿಕೆಟ್ ಕಿತ್ತು ಭಾರತದ ಪರ ಅತಿ ವೇಗವಾಗಿ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡರು.

ರವೀಂದ್ರ ಜಡೇಜಾ ಕಮ್ ಬ್ಯಾಕ್
ವರ್ಷದ ನಂತರ ಟೆಸ್ಟ್ ತಂಡಕ್ಕೆ ಮರಳಿದ ಜಡೇಜಾ ಗೆಲುವಿನ ಸಿಹಿ ಉಣಿಸಿದರು. ಆಲ್ ರೌಂಡ್ ಪ್ರದರ್ಶನ ನೀಡಿದ ಜಡೇಜಾ ಗೆಲುವಿನ ರೂವಾರಿ ಎನಿಸಿಕೊಂಡರು.

ಬೆಂಗಳೂರಲ್ಲಿ ಮುಂದಿನ ಪಂದ್ಯ
ನವೆಂಬರ್ 14 ರಿಂದ ಬೆಂಗಳೂರಿನಲ್ಲಿ ದ್ವೀತಿಯ ಟೆಸ್ಟ್ ಆರಂಭವಾಗಲಿದೆ. ವೇಗಿ ಇಶಾಂತ್ ಶರ್ಮಾ ತಂಡಕ್ಕೆ ಮರಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications