ಎರಡನೇ ದಿನದ ಅಂತ್ಯಕ್ಕೆ ಭಾರತಕ್ಕೆ 142ರನ್ ಮುನ್ನಡೆ
ಮೊಹಾಲಿ, ನ.06: ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಪ್ರವಾಸಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಯಶಸ್ವಿಯಾಗಿದ್ದಾರೆ. ಭಾರತ 201 ರನ್ ಸ್ಕೋರಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ 184ಸ್ಕೋರಿಗೆ ಆಲೌಟ್ ಆಗಿದೆ. ಎರಡನೇ ದಿನದ ಅಂತ್ಯಕ್ಕೆ ಭಾರತಕ್ಕೆ 142ರನ್ ಮುನ್ನಡೆ ಸಿಕ್ಕಿದೆ
ಮೊದಲ ಇನ್ನಿಂಗ್ಸ್ ನಲ್ಲಿ 17ರನ್ ಮುನ್ನಡೆ ಪಡೆದ ಭಾರತ ಎರಡನೇ ದಿನದ ಅಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 125/2 ಸ್ಕೋರ್ ಮಾಡಿದೆ. ಶಿಖರ್ ಧವನ್ ಮತ್ತೊಮ್ಮೆ ವಿಫಲರಾಗಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 47ರನ್ ಗಳಿಸಿದ ಮುರಳಿ ವಿಜಯ್ ಇಮ್ರಾನ್ ತಾಹೀರ್ ಗೆ ಬಲಿಯಾದರು. ದಿನದ ಅಂತ್ಯಕ್ಕೆ ಭಾರತ 142ರನ್ ಮುನ್ನಡೆ ಪಡೆದುಕೊಂಡಿದ್ದು, ಚೇತೇಶ್ವರ್ ಪೂಜಾರಾ 63 ಹಾಗೂ ವಿರಾಟ್ ಕೊಹ್ಲಿ 11ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ.

ಭೋಜನ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ 127/5 (49 ಓವರ್ಸ್) ಸ್ಕೋರ್ ಮಾಡಿದ್ದು 74 ರನ್ ಗಳಿಂದ ಹಿಂದಿತ್ತು. ಅಂತಿಮವಾಗಿ 68 ಓವರ್ ಗಳಲ್ಲಿ 184ಸ್ಕೋರಿಗೆ ಆಲೌಟ್ ಆಗಿದೆ.
ದಕ್ಷಿಣ ಆಫ್ರಿಕಾ ಪರ ಎಬಿ ಡಿವಿಲಿಯರ್ಸ್ 63 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿದರು. ಭಾರತ ಪರ ಆರ್ ಅಶ್ವಿನ್ 51/5 ಹಾಗೂ ರವೀಂದ್ರ ಜಡೇಜ 55ಕ್ಕೆ 3, ಅಮಿತ್ ಮಿಶ್ರಾ 35ಕ್ಕೆ 2 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭಿಕ ಆಘಾತ ಅನುಭವಿಸಿದ್ದು, ಧವನ್ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದಾರೆ.
| ದಕ್ಷಿಣ ಆಫ್ರಿಕಾ vs ಭಾರತ ಚಿತ್ರ ಸಂಪುಟ
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 201 ಆಲೌಟ್ , ದಕ್ಷಿಣ ಆಫ್ರಿಕಾ 28/2, ಎಲ್ಗಾರ್ 13, ಆಮ್ಲಾ 9 ಗಳಿಸಿ ಔಟಾಗದೆ ಉಳಿದಿದ್ದರು. ಎಲ್ಗಾರ್ ಅವರು 37 ರನ್ ಗಳಿಸಿ ಔಟಾದರೆ, ನಾಯಕ ಹಶೀಂ ಅಮ್ಲಾ ಅವರು 43ರನ್ ಗಳಿಸಿ ಪೆವಿಲಿಯನ್ ಸೇರಿದರು. ಡುಪ್ಲೆಸಿಸ್ ವಿಕೆಟ್ ಜಡೇಜ ಪಾಲಾಗಿದೆ.

ಅಶ್ವಿನ್ 4 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾಕ್ಕೆ ಆಘಾತ ತಂದಿದ್ದಾರೆ. 50 ಓವರ್ ಗಳ ನಂತರ ಎಬಿ ಡಿ ವಿಲಿಯರ್ಸ್ 27 ಹಾಗೂ ಫಿಲ್ಯಾಂಡರ್ 3ರನ್ ಗಳಿಸಿದ್ದು, ತಂಡದ ಮೊತ್ತ 130/5 ಆಗಿತ್ತು.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೆಜ, ಆರ್ ಅಶ್ವಿನ್, ಅಮಿತ್ ಮಿಶ್ರಾ, ವರುಣ್ ಅರೋನ್, ಉಮೇಶ್ ಯಾದವ್.
ದಕ್ಷಿಣ ಆಫ್ರಿಕಾ : ಹಶೀಂ ಆಮ್ಲಾ (ನಾಯಕ), ಎಬಿ ಡಿ ವಿಲಿಯರ್ಸ್ (ಉಪ ನಾಯಕ), ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗಾರ್, ಸಿಮೋನ್ ಹಾರ್ಮರ್, ಇಮ್ರಾನ್ ತಾಹೀರ್, ವೆರ್ನೊನ್ ಫಿಲ್ಯಾಂಡರ್,ಕಾಗಿಸೋ ರಬಡಾ, ಡೇಲ್ ಸ್ಟೈನ್, ಡೇನ್ ವಿಲಾಸ್ (ವಿಕೆಟ್ ಕೀಪರ್). (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications