ಅಡಿಲೇಡ್ ಟೆಸ್ಟ್: ದಿನದಾಂತ್ಯಕ್ಕೆ ಆಸ್ಟ್ರೇಲಿಯಾ 6 / 354
ಅಡಿಲೇಡ್, ಡಿ.9: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಅತಿಥೇಯ ಆಸ್ಟ್ರೇಲಿಯಾ ತಂಡ ಶುಭಾರಂಭ ಮಾಡಿದೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಅರ್ಧ ಶತಕ ಬಾರಿಸಿ ತಂಡದ ಮೊತ್ತ ಹೆಚ್ಚಿಸುತ್ತಿದ್ದಾರೆ. ಫಿಲ್ ಹ್ಯೂಸ್ ದುರಂತ ಸಾವಿನ ನೋವಿನ ಕಹಿ ನೆನಪಿನೊಡನೆ ಭಾರತ ಹಾಗೂ ಆಸ್ಟ್ರೇಲಿಯಾದ ಕದನ ಆರಂಭಗೊಂಡಿದೆ.
ಸ್ಕೋರ್ ಕಾರ್ಡ್ ನೋಡಿ
ಆಸ್ಟ್ರೇಲಿಯಾ ಮೊದಲ ದಿನದಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 354ರನ್ ಗಳಿಸಿದೆ. ದಿನದ ಅಂತ್ಯಕ್ಕೆ ಸ್ಟೀವ್ ಸ್ಮಿತ್ 72 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಭರ್ಜರಿ ಶತಕ 145 ರನ್(163 ಎ, 19 ಬೌಂ) ಗಳಿಸಿದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೊನೆಗೂ ಕರಣ್ ಶರ್ಮ ಸ್ಪಿನ್ ಮೋಡಿಗೆ ಸಿಲುಕಿ ಇಶಾಂತ್ ಶರ್ಮಗೆ ಕ್ಯಾಚಿತ್ತು ಔಟಾಗಿದ್ದಾರೆ. ನಾಯಕ ಮೈಕಲ್ ಕ್ಲಾರ್ಕ್ 60 ರನ್ ಗಳಿಸಿ ಗಾಯಗೊಂಡು ನಿವೃತ್ತರಾಗಿ ಪೆವಿಲಿಯನ್ ಗೆ ತೆರಳಿದ್ದಾರೆ. ಸ್ಮಿತ್ ಹಾಗೂ ಮಾರ್ಷ ಕ್ರೀಸ್ ನಲ್ಲಿದ್ದಾರೆ. ಈ ವೇಳೆಗೆ 58ನೇ ಓವರ್ 258/3 ಸ್ಕೋರ್ ಮಾಡಿರುವ ಆಸೀಸ್ 4.45 ರನ್ ಸರಾಸರಿಯಂತೆ ಉತ್ತಮ ಮೊತ್ತ ಕಲೆ ಹಾಕುತ್ತಿದೆ.

ಭೋಜನ ವಿರಾಮದ ವೇಳೆಗೆ : ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 113 ರನ್ ಗಳಿಸಿ 2 ವಿಕೆಟ್ ಗಳಿಸಿತ್ತು. ವಾರ್ನರ್ 77 ರನ್ ಗಳಿಸಿ ಆಡುತ್ತಿದ್ದರು. 12 ಬೌಂಡರಿ ಚೆಚ್ಚಿರುವ ವಾರ್ನರ್ ಜೊತೆಗೆ ನಾಯಕ ಮೈಕಲ್ ಕ್ಲಾರ್ಕ್ ಕ್ರೀಸ್ ನಲ್ಲಿದ್ದರು.
ಹ್ಯೂಸ್ ಗೌರವಾರ್ಥ ಆಸ್ಟ್ರೇಲಿಯಾ ತಂಡದಲ್ಲಿ 13ನೇ ಆಟಗಾರನಾಗಿ ಅವರ ಹೆಸರನ್ನು ಸೇರಿಸಲಾಗಿದೆ. ಫಿಲ್ ಹ್ಯೂಸ್ ಅವರ ಟೆಸ್ಟ್ ಕ್ಯಾಪ್ ನಂಬರ್ 408 ಗೆ ಸ್ಥಾನ ಕಲ್ಪಿಸಿ ಉಭಯ ತಂಡದ ಆಟಗಾರರು ಗೌರವ ಸೂಚಿಸಿದರು. ಮೈದಾನದಲ್ಲಿ 63 ಸೆಕೆಂಡುಗಳ ಕಾಲ ಚಪ್ಪಾಳೆಯ ಸುರಿಮಳೆಯಾಯಿತು.

ಟೀಂ ಇಂಡಿಯದಲ್ಲಿ ಸ್ಪಿನ್ನರ್ ಕರಣ್ ಶರ್ಮ ಮೊದಲ ಟೆಸ್ಟ್ ಆಡುವ ಅವಕಾಶ ಪಡೆದುಕೊಂಡರೆ, ಕರ್ನಾಟಕದ ಕೆಎಲ್ ರಾಹುಲ್ ಮುಂದಿನ ಟೆಸ್ಟ್ ತನಕ ಕಾಯಬೇಕಿದೆ. ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜರನ್ನು ಅಂತಿಮ XIನಲ್ಲಿ ಸ್ಥಾನ ಪಡೆದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications