ಟೆಸ್ಟ್: ಏಳನೇ ಆಕರ್ಷಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ
ಅಡಿಲೇಡ್, ಡಿ.11: ಅತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕಲೆ ಹಾಕಿರುವ ಬೃಹತ್ ಮೊತ್ತದ ವಿರುದ್ಧ ಟೀಂ ಇಂಡಿಯಾ ತನ್ನ ಹೋರಾಟ ಮುಂದುವರೆಸಿದೆ. ಚೇತೇಶ್ವರ ಪೂಜಾರಾ, ರಹಾನೆ ನಿರ್ಗಮನದ ನಂತರ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಟೆಸ್ಟ್ ಕರಿಯರ್ ನ 7ನೇ ಶತಕ ಬಾರಿಸಿ ಔಟಾಗಿದ್ದಾರೆ.
ಮೂರನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾ 369/5 ಸ್ಕೋರ್ ಮಾಡಿದೆ. ರೋಹಿತ್ ಶರ್ಮ 33 ರನ್ ಹಾಗೂ ವೃದ್ಧಿಮಾನ್ ಸಹಾ 1 ರನ್ ಗಳಿಸಿ ಉಳಿದು ಕೊಂಡಿದ್ದಾರೆ. ಇದಕ್ಕೂ ಮುನ್ನ ಫಿಲ್ ಹ್ಯೂಸ್ ದುರಂತ ಸಾವಿನ ನೋವಿನ ಕಹಿ ನೆನಪಿನೊಂದಿಗೆ ಆರಂಭವಾದ ಭಾರತ ಹಾಗೂ ಆಸ್ಟ್ರೇಲಿಯಾದ ಕದನದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 517/7 ಸ್ಕೋರ್ ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮುರಳಿ ವಿಜಯ್ ಅವರ ಏಳನೇ ಅರ್ಧಶತಕದ ನೆರವಿನಿಂದ ದಿನದ ಮೊದಲ ಸೆಷನ್ ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಅದರೆ, 53 ರನ್ ಗಳಿಸಿದ್ದ ವಿಜಯ್ ಜಾನ್ಸನ್ ಬೌಲಿಂಗ್ ನಲ್ಲಿ ಕೀಪರ್ ಹಡೀನ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದಕ್ಕೂ ಮುನ್ನ ಶಿಖರ್ ಧವನ್ 25 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.
ನಂತರ ಬಂದ ಸೌರಾಷ್ಟ್ರದ ಚೇತೇಶ್ವರ್ ಪೂಜಾರಾ ಸುಭದ್ರ ಇನ್ನಿಂಗ್ಸ್ ಕಟ್ಟುವ ಕುರುಹು ತೋರಿದರು. 135ಎಸೆತ ಎದುರಿಸಿ 73 ರನ್ ಗಳಿಸಿದರು 10 ಆಕರ್ಷಕ ಬೌಂಡರಿ ಹೊಡೆದಿದ್ದ ಪೂಜಾರಾರನ್ನು ನಾಥನ್ ಲಿಯಾನ್ ತಮ್ಮ ಸ್ಪಿನ್ ಬಲೆಗೆ ಕೆಡವಿಕೊಂಡು ಕ್ಲೀನ್ ಬೋಲ್ಡ್ ಮಾಡಿದರು.

ಅಜಿಂಕ್ಯ ರಹಾನೆ 62 ರನ್ ಗಳಿಸಿ ನಾಥನ್ ಸ್ಪಿನ್ ಗೆ ಬಲಿಯಾದರು. ಕೋಹ್ಲಿ 115 ರನ್ (184 ಎ, 12 ಬೌಂಡರಿ) ಗಳಿಸಿ ಜಾನ್ಸನ್ ಬೌಲಿಂಗ್ ನಲ್ಲಿ ಹ್ಯಾರಿಸ್ ಗೆ ಕ್ಯಾಚಿತ್ತು ನಿರ್ಗಮಿಸಿದರು. [ಎರಡನೇ ದಿನದ ಮುಖ್ಯಾಂಶಗಳು ಇಲ್ಲಿ ಓದಿ]
ಆಸ್ಟ್ರೇಲಿಯಾದ ಪರ ವಾರ್ನರ್ (145 ರನ್'), ಮೈಕಲ್ ಕ್ಲಾರ್ಕ್ 128, ಸ್ಟೀವ್ ಸ್ಮಿತ್ ಔಟಾಗದೆ 162 ರನ್ ಗಳಿಸಿದರೆ, ಭಾರತ ಪರ ಕರಣ್ ಶರ್ಮ, ಮಹಮ್ಮದ್ ಶಮಿ, ವರುಣ್ ಅರೋನ್ ತಲಾ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮ 1 ವಿಕೆಟ್ ಗಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications