ಅಡಿಲೇಡ್ ಟೆಸ್ಟ್: ಮತ್ತೆ ಶತಕ ಸಿಡಿಸಿದ ಡೇವಿಡ್ ವಾರ್ನರ್
ಅಡಿಲೇಡ್, ಡಿ.12: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ವಿರುದ್ಧ ಉತ್ತಮ ಮುನ್ನಡೆ ಪಡೆದುಕೊಳ್ಳುತ್ತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಡೇವಿಡ್ ವಾರ್ನರ್ ಎರಡನೇ ಇನ್ನಿಂಗ್ಸ್ ನಲ್ಲೂ ಭರ್ಜರಿ ಶತಕ ದಾಖಲಿಸಿದ್ದಾರೆ.
ಇದಕ್ಕೂ ಮುನ್ನ ಭಾರತ ತನ್ನ ಮೊದಲ ಇನ್ನಿಂಗ್ಸ್ 444 ಸ್ಕೋರಿಗೆ ಸಮಾಪ್ತಿಗೊಳಿಸಿ ಆಸೀಸ್ ಗೆ ಲೀಡ್ ಬಿಟ್ಟು ಕೊಟ್ಟಿತು.
ನಾಲ್ಕನೇ ದಿನದ ಅಂತ್ಯಕ್ಕೆ 69 ಓವರ್ ಗಳಲ್ಲಿ 4.2 ರನ್ ಸರಾಸರಿಯಂತೆ 290/5 ಸ್ಕೋರ್ ಮಾಡಿರುವ ಆಸ್ಟೇಲಿಯಾ ತಂಡ ಒಟ್ಟು 363ರನ್ ಮುನ್ನಡೆ ಪಡೆದುಕೊಂಡಿದೆ. ಸ್ಟೀವ್ ಸ್ಮಿತ್ 53 ಹಾಗೂ ಹಡ್ಡೀನ್ 14 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಮಾರ್ಷ್ 40 ರನ್ (26 ಎ, 4 ಬೌಂಡರಿ, 3 ಸಿಕ್ಸರ್) ಚೆಚ್ಚಿ ತಂಡದ ಮೊತ್ತ ಹೆಚ್ಚಿಸಿದರು.
ಅತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಕಲೆ ಹಾಕಿರುವ ಬೃಹತ್ ಮೊತ್ತಕ್ಕೆ ತಕ್ಕ ಉತ್ತರ ನೀಡಿದ್ದ ವಿರಾಟ್ ಕೊಹ್ಲಿ ಪಡೆ ನಾಲ್ಕನೇ ದಿನದ ಆರಂಭದಲ್ಲಿ ಕೊಂಚ ಅಳುಕಿನಿಂದ ಆಡಿತು. ಚೇತೇಶ್ವರ ಪೂಜಾರಾ ನಿರ್ಗಮನದ ನಂತರ ಕೊಹ್ಲಿ ಶತಕ ಹಾಗೂ ರಹಾನೆ ಅರ್ಧಶತಕ ಭಾರತದ ನೆರವಿಗೆ ಬಂದಿತು.

ಅದರೆ, ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮ 43 ರನ್ ಗಳಿಸಿ ಔಟಾದರು. ನಂತರ ಕರಣ್ ಶರ್ಮ, ಸಹಾ(25) ಕೊನೆಯಲ್ಲಿ ಶಮಿ 34 ರನ್ ಗಳಿಸಿ ತಂಡದ ಮೊತ್ತವನು 444 ರನ್ನಿಗೆ ಮುಟ್ಟಿಸಿದರು. ಆಸೀಸ್ ಪರ ನಾಥನ್ ಲಿಯಾನ್ 134ರನ್ನಿತ್ತು 5 ವಿಕೆಟ್ ಕಬಳಿಸಿದರು. ಜಾನ್ಸನ್, ಸಿಡ್ಲ್ ತಲಾ 2 ವಿಕೆಟ್ ಪಡೆದರು. [ಟೆಸ್ಟ್: ಏಳನೇ ಆಕರ್ಷಕ ಶತಕ ಸಿಡಿಸಿದ ವಿರಾಟ್]
ಆಸೀಸ್ ಎರಡನೇ ಇನ್ನಿಂಗ್ಸ್ : 12ನೇ ಓವರ್ ನಲ್ಲಿ ಮೊದಲ ವಿಕೆಟ್ ಕರಣ್ ಶರ್ಮ ಗೆ ಲಭಿಸಿತು ರೋಜರ್ಸ್ ಮತ್ತೊಮ್ಮೆ ವಿಫಲರಾಗಿ 21 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ, ಡೇವಿಡ್ ವಾರ್ನರ್ ಮತ್ತೊಮ್ಮೆ ಆಪದ್ಬಾಂಧವನಾಗಿ ಇನ್ನಿಂಗ್ಸ್ ಕಟ್ಟಿದರು.

ವಾರ್ನರ್ ಗೆ ವಾಟ್ಸನ್ ಸಾಥ್ ನೀಡಿ 33 ರನ್ ಗಳಿಸಿದರು. ಬೆನ್ನುನೋವಿನಿಂದ ಇನ್ನೂ ಚೇತರಿಸಿಕೊಳ್ಳದ ನಾಯಕ ಮೈಕಲ್ ಕ್ಲಾರ್ಕ್ 7 ರನ್ ಗಳಿಸಿ ಅರೋನ್ ಗೆ ವಿಕೆಟ್ ನೀಡಿದರು. ವಾರ್ನರ್ ಹಾಗೂ ಸ್ಮಿತ್ ಜೋಡಿ ಆಸ್ಟ್ರೇಲಿಯಾಕ್ಕೆ ಉತ್ತಮ ಮುನ್ನಡೆ ದೊರಕಿಸಿಕೊಟ್ಟಿದ್ದಾರೆ. ನಾಲ್ಕನೇ ದಿನದ ಚಹಾ ವಿರಾಮದ ವೇಳೆಗೆ 212ರನ್ ಲೀಡ್ ಆಸೀಸ್ ಬಳಿ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications