ಟೆಸ್ಟ್: ವಾರ್ನರ್, ಕ್ಲಾರ್ಕ್, ಸ್ಮಿತ್ ಶತಕ ಆಸೀಸ್ ಬೃಹತ್ ಮೊತ್ತ
ಅಡಿಲೇಡ್, ಡಿ.10: ಅತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ. ವಾರ್ನರ್ ಅಮೋಘ ಶತಕದ ನಂತರ ನಾಯಕ ಮೈಕಲ್ ಕ್ಲಾರ್ಕ್ ಹಾಗೂ ಸ್ಟೀವ್ ಸ್ಮಿತ್ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾಗೆ ಉತ್ತಮ ಸವಾಲು ಹಾಕಿದೆ.
ಫಿಲ್ ಹ್ಯೂಸ್ ದುರಂತ ಸಾವಿನ ನೋವಿನ ಕಹಿ ನೆನಪಿನೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯಾದ ಕದನ ಆರಂಭಗೊಂಡಿದ್ದು, ಆಸ್ಟ್ರೇಲಿಯಾ ಮೊದಲ ದಿನದಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 354ರನ್ ಗಳಿಸಿದೆ. 63 ರನ್ ಗಳಿಸಿದ ಅಸೀಸ್ ಆಟಗಾರರು ಆಗಸದತ್ತ ಮುಖ ಮಾಡಿ ಹ್ಯೂಸ್ ಗೆ ಅರ್ಪಿಸಿದ್ದು ವಿಶೇಷ. ದಿನದ ಅಂತ್ಯಕ್ಕೆ ಸ್ಟೀವ್ ಸ್ಮಿತ್ 72 ರನ್ ಗಳಿಸಿ ಔಟಾಗದೆ ಉಳಿದಿದ್ದರು. [ಮೊದಲ ದಿನದ ಮುಖ್ಯಾಂಶಗಳು ಇಲ್ಲಿ ಓದಿ]

ಎರಡನೇ ದಿನದ ಆಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಅದರೆ, ಭೋಜನ ವಿರಾಮದ ನಂತರ ಆಟ ಮುಂದುವರೆದು ಕ್ಲಾರ್ಕ್ ಹಾಗೂ ಸ್ಮಿತ್ ಶತಕ ಗಳಿಸಿ ತಂಡದ ಸ್ಕೋರ್ ಹೆಚ್ಚಿಸಿದರು. ಇತ್ತೀಚಿನ ವರದಿಗಳು ಬಂದಾಗ ಆಸೀಸ್ ತಂಡ 111 ಓವರ್ ಗಳಲ್ಲಿ 473/6 ಸ್ಕೋರ್ ಮಾಡಿದೆ. ನಾಯಕ ಕ್ಲಾರ್ಕ್ 109ರನ್ (140 ಎ, 16ಬೌಂ), ಸ್ಮಿತ್ 142 ರನ್ (204 ಎ, 21 ಬೌಂ) ಗಳಿಸಿ ಆಡುತ್ತಿದ್ದರು.
ಎರಡನೇ ದಿನದಾಟದಲ್ಲಿ ಮೈಕೇಲ್ ಕ್ಲಾರ್ಕ್ ಮತ್ತು ಸ್ಟೀವನ್ ಸ್ಮಿತ್ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿದೆ. ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 517 ರನ್(120 ಓವರ್ ಗಳು) ಗಳಿಸಿದೆ. ಸ್ಟೀವನ್ ಸ್ಮಿತ್ ಮತ್ತು ಕ್ಲಾರ್ಕ್ ಇಬ್ಬರೂ 7ನೇ ವಿಕೆಟ್ ಗೆ 163 ರನ್ ಸೇರಿಸಿದ್ದಾರೆ. ನಾಯಕ್ ಕ್ಲಾರ್ಕ್ 128 ರನ್ ಗಳಿಸಿ ಕರಣ್ ಶರ್ಮ ಬೌಲಿಂಗ್ ನಲ್ಲಿ ಔಟಾದರೆ, ಸ್ಮಿತ್ 162 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
Story first published: Wednesday, January 3, 2018, 10:12 [IST]
Other articles published on Jan 3, 2018
Read in English: Day 2: Smith and Clarke hit tons
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications