ಟೆಸ್ಟ್: ಆಸ್ಟ್ರೇಲಿಯಾ 'ಎ' ಎದುರು ಭಾರತ 'ಎ'ಗೆ ಅಂಕಿತ್ ಬಾವ್ನೆ ಆಸರೆ

ಬೆಂಗಳೂರು, ಸೆಪ್ಟೆಂಬರ್ 3: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಎ ತಂಡ ಬೆಂಗಳೂರಿನಲ್ಲಿ ಭಾರತ ಎ ತಂಡದೆದುರು ಮೊದಲ ಅನಧಿಕೃತ ಟೆಸ್ಟ್ ಪಂದ್ಯವಾಡುತ್ತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಅಂಕಿತ್ ಬಾವ್ನೆ 91 ರನ್ ಗಳ ಮೂಲಕ ಆಸರೆಯಾದರು. ಭಾರತ 83.1 ಓವರ್ ಗೆ 274 ರನ್ ಕಲೆ ಹಾಕಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎ ಮೊದಲ ಇನ್ನಿಂಗ್ಸ್ ನಲ್ಲಿ 75.3 ಓವರ್ ಗೆ 243 ರನ್ ಪೇರಿಸಿತ್ತು. ಈ ವೇಳೆ ಉಸ್ಮಾನ್ ಖಜಾ ಭರ್ಜರಿ 127 ರನ್ ಮೂಲಕ ತಂಡಕ್ಕೆ ಬೆಂಬಲವಾಗಿ ನಿಂತರು. ಮತ್ತೊಬ್ಬ ಆಟಗಾರ ಮಾರ್ನಸ್ ಲ್ಯಾಬಸ್ಚ್ಯಾಗ್ನೆ ಅವರೂ 60 ಸೇರಿಸಿದರು.
ಆಸ್ಟ್ರೇಲಿಯಾ ಇನ್ನಿಂಗ್ಸ್ ವೇಳೆ ಭಾರತದ ಮೊಹಮ್ಮದ್ ಸಿರಾಜ್ 59 ರನ್ ಗೆ ಬರೋಬ್ಬರಿ 8 ವಿಕೆಟ್ ಕೆಡವಿದರು ದಾಖಲೆ ಬರೆದರು. ಭಾರತದ ಇನ್ನಿಂಗ್ಸ್ ವೇಳೆ ಬಾವ್ನೆ ಜೊತೆ ಮಯಾಂಕ್ ಅಗರ್ವಾಲ್ 47, ಅಭಿಮನ್ಯು ಈಶ್ವರನ್ ಅಜೇಯ 36, ಕೆ ಗೌತಮ್ 31 ರನ್ ಪೇರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು.
ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಮೈಕೆಲ್ ನೆಸ್ಸರ್ 4, ಜಾನ್ ಹೋಲ್ಯಾಂಡ್ 3 ವಿಕೆಟ್ ಉರುಳಿಸಿ ಗಮನ ಸೆಳೆದರು. ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಆಸ್ಟ್ರೇಲಿಯಾ ಎರಡನೇ ದಿನದಾಂತ್ಯಕೆ 16 ಓವರ್ ಮುಕ್ತಾಯಕ್ಕೆ 1 ವಿಕೆಟ್ ಕಳೆದು 42 ರನ್ ಪೇರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications