ಟಿ20 ವಿಶ್ವಕಪ್‌ಗೆ ಭಾರತದ 2 ಅಂಪೈರ್‌ಗಳು ಆಯ್ಕೆ; ರೆಫರಿ ಪ್ಯಾನೆಲ್‌ನಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್
ಇದೇ ಜೂನ್ 2ರಿಂದ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯ ಅಂಪೈರ್‌ಗಳ ಪಟ್ಟಿಯಲ್ಲಿ ಭಾರತದ ನಿತಿನ್ ಮೆನನ್ ಮತ್ತು ಜಯರಾಮನ್ ಮದನಗೋಪಾಲ್ ಆಯ್ಕೆಯಾಗಿದ್ದರೆ, ಕನ್ನಡಿಗ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫರಿ ಪ್ಯಾನೆಲ್‌ನ ಭಾಗವಾಗಲಿದ್ದಾರೆ.
ಜಯರಾಮನ್ ಮದನಗೋಪಾಲ್ ಅವರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಮೂಲಕ ಐಸಿಸಿ ಪಂದ್ಯಾವಳಿಗೆ ಪದಾರ್ಪಣೆ ಮಾಡಲಿದ್ದಾರೆ.

ನಿತಿನ್ ಮೆನನ್ ಮತ್ತು ಜಾವಗಲ್ ಶ್ರೀನಾಥ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವಿ ಅಧಿಕಾರಿಗಳಾಗಿದ್ದಾರೆ. ಸದ್ಯ ಮದನಗೋಪಾಲ್, ಶ್ರೀನಾಥ್ ಐಪಿಎಲ್ 2024ರ ಅವೃತ್ತಿಯಲ್ಲಿ ಕಾರ್ಯನಿರತರಾಗಿದ್ದಾರೆ.
ಯುಎಸ್‌ಎ ಮತ್ತು ಕೆನಡಾ ನಡುವಿನ ಟಿ20 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದ ಅಂಪೈರ್‌ಗಳಾಗಿ ಶಾಹಿದ್ ಸೈಕತ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಕಾರ್ಯನಿರ್ವಹಿಸಲಿದ್ದಾರೆ.
ಶಾಹಿದ್ ಸೈಕತ್ ಅವರು ಟಿ20 ವಿಶ್ವಕಪ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೊದಲ ಬಾಂಗ್ಲಾದೇಶದ ಅಂಪೈರ್ ಆಗುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ.

ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಶಾಹಿದ್ ಸೈಕತ್ 5 ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಎರಡು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಳು ಮತ್ತು 2018ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗಾಗಿ ಅಂಪೈರ್ ಪ್ಯಾನೆಲ್‌ನಲ್ಲಿದ್ದರು.
ಐಸಿಸಿ ವರ್ಷದ ಅಂಪೈರ್‌ಗಾಗಿ ಪ್ರಸ್ತುತ ಡೇವಿಡ್ ಶೆಫರ್ಡ್ ಟ್ರೋಫಿಯನ್ನು ರಿಚರ್ಡ್ ಇಲ್ಲಿಂಗ್‌ವರ್ತ್ ಹೊಂದಿದ್ದಾರೆ. ಯುಎಸ್ಎ ಮತ್ತು ಕೆನಡಾ ನಡುವಿನ ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ರಿಚಿ ರಿಚರ್ಡ್ಸನ್ ಮ್ಯಾಚ್ ರೆಫರಿಯಾಗಿರುತ್ತಾರೆ. ಸ್ಯಾಮ್ ನೊಗಾಜ್ಸ್ಕಿ ಟಿವಿ ಅಂಪೈರ್ ಮತ್ತು ಲ್ಯಾಂಗ್ಟನ್ ರುಸೆರೆ ನಾಲ್ಕನೇ ಅಂಪೈರ್ ಎಂದು ಹೆಸರಿಸಲಾಗಿದೆ.
ಜಯರಾಮನ್ ಮದನಗೋಪಾಲ್ ಅವರೊಂದಿಗೆ ರಶೀದ್ ರಿಯಾಜ್, ಅಲ್ಲಾಹುಡಿಯನ್ ಪಾಲೇಕರ್, ನೊಗಾಜ್ಸ್ಕಿ ಮತ್ತು ಆಸಿಫ್ ಯಾಕೂಬ್ ಅವರು ಸೀನಿಯರ್ ಪುರುಷರ ಐಸಿಸಿ ಪಂದ್ಯಾವಳಿಗೆ ಪದಾರ್ಪಣೆ ಮಾಡಲಿದ್ದಾರೆ.
2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಪಂದ್ಯದ ಅಂಪೈರ್‌ಗಳು
ಕ್ರಿಸ್ ಬ್ರೌನ್, ಕುಮಾರ್ ಧರ್ಮಸೇನಾ, ಕ್ರಿಸ್ ಗಫಾನಿ, ಮೈಕೆಲ್ ಗಾಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲ್ಲಿಂಗ್‌ವರ್ತ್, ಅಲ್ಲಾಹುಡಿಯನ್ ಪಾಲೇಕರ್, ರಿಚರ್ಡ್ ಕೆಟಲ್‌ಬರೋ, ಜಯರಾಮನ್ ಮದನಗೋಪಾಲ್, ನಿತಿನ್ ಮೆನನ್, ಸ್ಯಾಮ್ ನೊಗಜ್ಸ್ಕಿ, ಅಹ್ಸಾನ್ ರಜಾ, ರಶೀದ್ ರಿಯಾಜ್, ಪಾಲ್ ರೀಫೆಲ್, ಲ್ಯಾಂಗ್ಟನ್ ರುಸೆರೆ, ಶಾಹಿದ್ ಸೈಕತ್, ರಾಡ್ನಿ ಟಕರ್, ಅಲೆಕ್ಸ್ ವಾರ್ಫ್, ಜೋಯಲ್ ವಿಲ್ಸನ್, ಆಸಿಫ್ ಯಾಕೂಬ್.
ಪಂದ್ಯದ ರೆಫರಿಗಳು: ಡೇವಿಡ್ ಬೂನ್, ಜೆಫ್ ಕ್ರೋವ್, ರಂಜನ್ ಮದುಗಲ್ಲೆ, ಆಂಡ್ರ್ಯೂ ಪೈಕ್ರಾಫ್ಟ್, ರಿಚಿ ರಿಚರ್ಡ್ಸನ್, ಜಾವಗಲ್ ಶ್ರೀನಾಥ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications