2 ಸೂಪರ್ ಓವರ್, 2 ಗೆಲುವು: ನಾಲ್ಕನೇ ಟಿ20ಯಲ್ಲಿ ಇತಿಹಾಸ ಬರೆದ ಭಾರತ

ಸೂಪರ್ ಓವರ್‌ನಲ್ಲಿ ಗೆಲ್ಲುವುದನ್ನು ಟೀಮ್ ಇಂಡಿಯಾ ಹವ್ಯಾಸ ಮಾಡಿಕೊಂಡಂತಿದೆ. ಸತತ ಎರಡನೇ ಪಂದ್ಯವೂ ಕೂಡ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದೆ. ಟೀಮ್ ಇಂಡಿಯಾ ಸೂಪರ್ ಓವರ್‌ನಲ್ಲಿ ಸುಲಭವಾಗಿ ಗೆಲುವು ಕಂಡಿದೆ. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಸೂಪರ್ ಓವರ್‌ನಲ್ಲಿ ಗೆಲುವು ಕಂಡ ಮೊದಲ ತಂಡ ಎಂಬ ಇತಿಹಾಸವನ್ನು ಬರೆದಿದೆ.
ನ್ಯೂಜಿಲ್ಯಾಂಡ್ ಕೂಡ ಈ ಟೈ ಪಂದ್ಯದ ಮೂಲಕ ದಾಖಲೆಯೊಂದನ್ನು ಬರೆದುಕೊಂಡಿದೆ. ಟೆಸ್ಟ್ ಏಕದಿನ ಮತ್ತು ಟಿ20 ಮೂರು ಮಾದರಿಗಳಲ್ಲಿ ಅತಿಹೆಚ್ಚು ಟೈ ಪಂದ್ಯಗಳಲ್ಲಿ ಕಾಣಿಸಿಕೊಂಡ ತಂಡವಾಗಿದೆ ನ್ಯೂಜಿಲ್ಯಾಂಡ್. ಕೀವಿಸ್ ತಂಡ 15 ಪಂದ್ಯಗಳಲ್ಲಿ ಫಲಿತಾಂಶವನ್ನು ಟೈ ಮಾಡಿಕೊಂಡಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡ ವೆಸ್ಟ್ ಇಂಡೀಸ್. ವಿಂಡೀಸ್ ಪಡೆ 14 ಟೈ ಪಂದ್ಯಗಳಲ್ಲಿ ಭಾಗಿಯಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತ ತಂಡ ತಲಾ 13 ಪಂದ್ಯಗಳಲ್ಲಿ ಟೈ ಮಾಡಿಕೊಂಡು ಮೂರನೇ ಸ್ಥಾನದಲ್ಲಿವೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ತಲಾ 11 ಪಂದ್ಯಗಳಲ್ಲಿ ಟೈ ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ನ್ಯೂಜಿಲ್ಯಾಂಡ್ ತಂಡ 18 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆದ್ದುಕೊಂಡಿತ್ತು. ಅಂತಿಮ ಎರಡು ಎಸೆತಗಳನ್ನು ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸಿಕ್ಸರ್‌ಗೆ ಅಟ್ಟಿ ಗೆಲುವನ್ನು ತಮ್ಮದಾಗಿಸಿದರು.
ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಟೀಮ್ ಇಂಡಿಯಾಗೆ 14 ರನ್‌ಗಳ ಗುರಿಯನ್ನು ನೀಡಿತ್ತು. ಇದನ್ನು ಟೀಮ್ ಇಂಡಿಯಾ ಸುಲಭವಾಗಿ ಚೇಸ್ ಮಾಡಿ ಗೆಲುವನ್ನಾಚರಿಸಿತು. ಕೆಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ತಂಡ ನೀಡಿದ್ದ ಗುರಿಯನ್ನು ಸುಲಭವಾಗಿ ಚೇಸ್ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications