2007ರ ಟಿ20 ವಿಶ್ವಕಪ್ ವಿಜೇತ, ಪೊಲೀಸ್ ಅಧಿಕಾರಿ ಜೋಗಿಂದರ್ ಶರ್ಮಾ ವಿರುದ್ಧ ಕೇಸ್ ದಾಖಲು!
ಇತ್ತೀಚಿನ ಆಘಾತಕಾರಿ ಘಟನೆಯೊಂದರಲ್ಲಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜೋಗಿಂದರ್ ಶರ್ಮಾ ಅವರ ವಿರುದ್ಧ ಹರಿಯಾಣದ ಹಿಸಾರ್ ನಿವಾಸಿ ಪವನ್ ಎಂಬುವವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗಾಗಿ ಹರಿಯಾಣ ಪೊಲೀಸರು ಜೋಗಿಂದರ್ ಶರ್ಮಾ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜನವರಿ 1ರಂದು ತನ್ನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪವನ್ ಅವರ ತಾಯಿ ದೂರು ನೀಡಿದ್ದಾರೆ.

ತನ್ನ ಮಗನ ಆತ್ಮಹತ್ಯೆಗೆ ಜೋಗಿಂದರ್ ಶರ್ಮಾ ಇತರ ಐವರು ಕಾರಣ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು. ಗಮನಾರ್ಹವಾಗಿ, ಜೋಗಿಂದರ್ ಶರ್ಮಾ ಕೂಡ ಪೊಲೀಸ್ ಅಧಿಕಾರಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ 2007ರ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಕೊನೆಯ ಓವರ್ ಎಸೆದು ಭಾರತ ತಂಡದ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದರು. ಆನಂತರ, ಕ್ರಿಕೆಟ್‌ನಿಂದ ಹಿಂದೆ ಸರಿದು ಹರಿಯಾಣದಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications