Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಮ್‌ಬ್ಯಾಕ್‌ ಮಾಡಲಿದ್ದಾರೆ 2009ರ ಇಂಡಿಯನ್ ಪ್ರೀಮಿಯರ್ ಲೀಗ್ ಹೀರೋ

2009 IPL hero, Kamran Khan eyeing a comeback

ಬೆಂಗಳೂರು: ನಗದು ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ಮೊದಲ ಸೂಪರ್ ಓವರ್ ಎಸೆದ ಬೌಲರ್ ಯಾರು ಗೊತ್ತಾ? ಕಮ್ರಾನ್ ಖಾನ್. ಐಪಿಎಲ್‌ನಲ್ಲಿ ಚೊಚ್ಚಲ ಸೂಪರ್ ಬೌಲಿಂಗ್ ಎಸೆದಿದ್ದಷ್ಟೇ ಅಲ್ಲ, ಸೆಟ್ ಆಗಿದ್ದ ಬ್ಯಾಟ್ಸ್‌ಮನ್, ಈಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯ ವಿಕೆಟ್ ಕೂಡ ಉರುಳಿಸಿದ್ದರು.

ಅಪಾಯಕಾರಿ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿಯ ವಿಕೆಟ್ ಮುರಿಯುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವೂ ತಂದಿದ್ದರು ಕಮ್ರಾನ್ ಖಾನ್. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಐಪಿಎಲ್ ಪಂದ್ಯವನ್ನೊಮ್ಮೆ ನೆನಪಿಗೆ ತಂದುಕೊಳ್ಳಿ.

ಏಪ್ರಿಲ್ 23ರಂದು ನಡೆದಿದ್ದ ಆ ಕದನದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಕಮ್ರಾನ್, ರಾಜಸ್ಥಾನ್ ತಂಡದಲ್ಲಿ ಹೀರೋ ಆಗಿ ಮಿನುಗಿದ್ದರು.

ಬೌಲಿಂಗ್ ಅಭ್ಯಾಸದಲ್ಲಿ ಖಾನ್

ಬೌಲಿಂಗ್ ಅಭ್ಯಾಸದಲ್ಲಿ ಖಾನ್

2009ರಲ್ಲಿ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಗೆಲುವು ತಂದಿದ್ದರಲ್ಲ? ಇದೇ ಕಮ್ರಾನ್ ಖಾನ್ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡುವ ಯೋಚನೆಯಲ್ಲಿದ್ದಾರೆ. ಉತ್ತರಪ್ರದೇಶ ಮಾವು ಜಿಲ್ಲೆಯ ನದ್ವಾ ಸರಾಯ್ ಗ್ರಾಮದಲ್ಲಿರುವ ಖಾನ್ ಸದ್ಯ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡುವ ಯೋಚನೆಯಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ವೃತ್ತಿ ಬದುಕಿನ ಬೆಸ್ಟ್ ಡೇ ಅದು

ವೃತ್ತಿ ಬದುಕಿನ ಬೆಸ್ಟ್ ಡೇ ಅದು

ಸುದ್ದಿಗಾರರೊಂದಿಗೆ ಮಾತನಾಡಿದ ಕಮ್ರಾನ್, 'ನನ್ನ ವೃತ್ತಿ ಬದುಕಿನ ಬೆಸ್ಟ್ ಡೇ ಅದು. ಆ ಕ್ಷಣಗಳನ್ನು ನೆನಪಿಸಿಕೊಳ್ಳುವುದನ್ನು ನಾನು ಈಗಲೂ ನಿಲ್ಲಿಸಿಲ್ಲ. ಐಪಿಎಲ್‌ನಲ್ಲಿ ಆ ಕ್ಷಣಗಳನ್ನು ಮತ್ತೆ ತರಲು ಬಯಸಿದ್ದೇನೆ. ನಾನು ಆನಂದಿಸಬೇಕಿರುವ ನನ್ನ ಕೊನೇ ಕನಸು ಅದೆಂದು ನಾನು ಭಾವಿಸಿದ್ದೇನೆ,' ಎಂದರು.

ಜಿದ್ದಾಜಿದ್ದಿ ಪಂದ್ಯ

ಜಿದ್ದಾಜಿದ್ದಿ ಪಂದ್ಯ

ಆವತ್ತು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದಿದ್ದ ಐಪಿಎಲ್ 10ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮೈದಾನಕ್ಕಿಳಿದಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್, ಯೂಸುಫ್ ಪಠಾಣ್ 42 ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 150 ರನ್ ಮಾಡಿತ್ತು.

18 ರನ್‌ಗೆ 3 ವಿಕೆಟ್

18 ರನ್‌ಗೆ 3 ವಿಕೆಟ್

ಗುರಿ ಬೆನ್ನಟ್ಟಿದ್ದ ಕೋಲ್ಕತ್ತಾ, ಸೌರವ್ ಗಂಗೂಲಿ 46, ಕ್ರಿಸ್ ಗೇಲ್ 41 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 150 ರನ್‌ ಪೇರಿಸಿ ಫಲಿತಾಂಶವನ್ನು ಟೈ ಮಾಡಿಕೊಂಡಿತ್ತು. ಆಗ ನಡೆದಿದ್ದ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ಪರ ಬೌಲಿಂಗ್ ಮಾಡಿದ್ದ ಕಮ್ರಾನ್, ಆರ್ಆರ್‌ಗೆ ಗೆಲುವು ತಂದಿದ್ದರು. ಪಂದ್ಯದಲ್ಲಿ ಖಾನ್ 18 ರನ್‌ಗೆ 3 ವಿಕೆಟ್ ಮುರಿದಿದ್ದರು.

Story first published: Tuesday, July 14, 2020, 16:03 [IST]
Other articles published on Jul 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+