For Quick Alerts
ALLOW NOTIFICATIONS  
For Daily Alerts
 

ಮುಂಬೈ ಮಣಿಸಿದ ಪಂಜಾಬ್: ಪ್ಲೇ ಆಫ್ ಕನಸು ಜೀವಂತ

ಅನಿವಾರ್ಯ ಗೆಲುವು ತಂಡಕ್ಕೀಗ ದಕ್ಕಿದ್ದರೂ, ಇನ್ನು ತಾನು ಆಡಲಿರುವ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಪಂಜಾಬ್ ಗೆಲ್ಲಲೇಬೇಕಿದೆ.

ಮುಂಬೈ, ಮೇ 12: ಸದೃಢ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಗುರುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 7 ರನ್ ಗಳ ರೋಚಕ ಜಯ ಗಳಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್, ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಆನಂತರ, ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಮಾತ್ರ ಗಳಿಸಿತು.[ಸ್ಕೋರ್ ವಿವರ]

2017 IPL: Punjab wins a must win match over Mumbai

ಪ್ಲೇ ಆಫ್ ಹಂತಕ್ಕೆ ಸಾಗುವ ಹಾದಿಯಲ್ಲಿ ತಾನು ಸ್ಪರ್ಧೆಯಲ್ಲಿರಬೇಕಾದರೆ, ಪಂಜಾಬ್ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಿತ್ತು. ಆ ಅನಿವಾರ್ಯ ಗೆಲುವು ತಂಡಕ್ಕೀಗ ದಕ್ಕಿದ್ದರೂ, ಇನ್ನು ತಾನು ಆಡಲಿರುವ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಪಂಜಾಬ್ ಗೆಲ್ಲಲೇಬೇಕಿದೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಮುಂಬೈ ತಂಡ, ಪ್ರವಾಸಿಗರನ್ನು ಮೊದಲು ಕಣಕ್ಕಿಳಿಸಿತು. ಅದರನ್ವಯ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಪರವಾಗಿ ಆರಂಭಿಕರೂ ಸೇರಿದಂತೆ ತಂಡದ ಎಲ್ಲಾ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡಿದರು. ಅದರಲ್ಲೂ ವೃದ್ಧಿಮಾನ್ ಸಾಹಾ ಅವರು, ಅಜೇಯ 93 ರನ್ ಗಳಿಸಿ ತಂಡವು ಉತ್ತಮ ಮೊತ್ತ ಸಾಧಿಸಲು ನೆರವಾದರು.

ಪಂಜಾಬ್ ನೀಡಿದ್ದ 231 ರನ್ ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಪಡೆಗೆ ಈ ಪಂದ್ಯದಲ್ಲಿನ ಸೋಲು ವೀರೋಚಿತ ಸೋಲು ಎಂದೇ ಹೇಳಬಹುದು. ಇನಿಂಗ್ಸ್ ಆರಂಭಗೊಳ್ಳುತ್ತಲೇ ಬಿರುಸಿನ ಆಟಕ್ಕೆ ಮುಂದಾದ ಲೆಂಡ್ಲ್ ಸೈಮನ್ಸ್, ಪಾರ್ಥೀವ್ ಪಟೇಲ್ ಜೋಡಿ, 8.4 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 99 ರನ್ ಜತೆಯಾಟ ನೀಡಿತು.

ಆನಂತರದಲ್ಲಿ, ಮಧ್ಯಮ ಕ್ರಮಾಂಕದ ರಾಣಾ, ರೋಹಿತ್ ಶರ್ಮಾ ಬೇಗನೇ ಔಟಾದರೂ, ಮಧ್ಯಮ ಕ್ರಮಾಂಕದ ಕೀರನ್ ಪೊಲಾರ್ಡ್ ಅವರ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ ತಂಡವನ್ನು ಗೆಲುವಿನ ಗೆರೆಯತ್ತ ತಂದವು.

ಕೊನೆಯ ಹಂತದ ಬ್ಯಾಟ್ಸ್ ಮನ್ ಗಳೂ ಪಂದ್ಯವನ್ನು ಮುಂಬೈ ಕಡೆಗೆ ವಾಲಿಸಲು ಶತ ಪ್ರಯತ್ನ ನಡೆಸಿದರೂ, ಅದು ಅವರಿಗೆ ಯಶಸ್ಸು ತರಲಿಲ್ಲ.

(ಚಿತ್ರ ಕೃಪೆ: IPLT20.COM)

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+