For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2017: ಆರಂಭಿಕ ಕುಸಿತ ಕಂಡ ಪುಣೆ 20 ಓವರ್ ನಲ್ಲಿ 163 /6

ಇಂದೋರ್, ಏಪ್ರಿಲ್ 8: ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್ ಜಿಯಾಂಟ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪುಣೆ ತಂಡ, ಮಧ್ಯಮ ಕ್ರಮಾಂಕದ ಬೆನ್ ಸ್ಟೋಕ್ಸ್ ಅವರ ಅರ್ಧಶತಕ (50 ರನ್, 32 ಎಸೆತ, 2 ಬೌಂಡರಿ, 3 ಸಿಕ್ಸರ್) 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿದೆ.

ಎದುರಾಳಿ ತಂಡದ ವೇಗಿಗಳ ದಾಳಿಗೆ ನಲುಗಿನ ಪುಣೆ ತಂಡಕ್ಕೆ ಇನಿಂಗ್ಸ್ ನ ಕೊನೆಯ ಹಂತದಲ್ಲಿ ನೆರವಾದ ಮನೋಜ್ ತಿವಾರಿ (ಅಜೇಯ 40 ರನ್, 23 ಎಸೆತ, 3 ಬೌಂಡರಿ, 2 ಸಿಕ್ಸರ್), ಬೆನ್ ಸ್ಟೋಕ್ಸ್ (50 ರನ್, 32 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಕೊನೆ ಓವರ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಆಡಿದ ಡೇನಿಯಲ್ ಕ್ರಿಶ್ಚಿಯನ್ (17 ರನ್, 8 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡದ ಮೊತ್ತ 150 ರನ್ ಗಡಿ ದಾಟಲು ನೆರವಾದರು.

ಪ್ರಮುಖರ ವೈಫಲ್ಯ: ತಂಡದ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಅಜಿಂಕ್ಯ ರಹಾನೆ (19), ಮಯಾಂಕ್ ಅಗರ್ವಾಲ್ (0), ನಾಯಕ ಸ್ಟೀವನ್ ಸ್ಮಿತ್ (26), ಮಹೇಂದ್ರ ಸಿಂಗ್ ಧೋನಿ (5) ಆಸರೆಯಾಗಲಿಲ್ಲ. ಆದರೂ, ಮಧ್ಯಮ ಕ್ರಮಾಂಕದ ಬೆನ್ ಸ್ಟೋಕ್ಸ್ ಹಾಗೂ ಮನೋಜ್ ತಿವಾರಿ ಜೋಡಿ ಕೊಂಚ ಆರ್ಭಟಿಸಿದ ಕಾರಣದಿಂದಾಗಿ, ತಂಡದ ಮೊತ್ತ 18 ಓವರ್ ಗಳಲ್ಲಿ 135 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿತು.

ಆದರೆ, 18ನೇ ಓವರ್ ನಲ್ಲಿ ಸ್ಟೋಕ್ಸ್ ಬೆನ್ ಸ್ಟೋಕ್ಸ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ವೇಗಿಗಳಾದ ಸಂದೀಪ್ ಶರ್ಮಾ, ನಟರಾಜನ್, ಸ್ಟಾಯ್ನಿಸ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರೆ, ಸ್ಪಿನ್ನರ್ ಸ್ವಪ್ನಿಲ್ ಸಿಂಗ್ 1 ವಿಕೆಟ್ ಗಳಿಸಿದರು.

ಪುಣೆ ತಂಡಕ್ಕೆ ಈ ಬಾರಿ ನಾಯಕ ಸ್ಮಿತ್ ಆಸರೆಯಾಗಲಿಲ್ಲ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿ, ತಮ್ಮ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಈ ಬಾರಿ 26 ರನ್ ಗಳಿಸಿ ಔಟಾದರು. ಈಗ ಧೋನಿ, ಬೆನ್ ಸ್ಟೋಕ್ಸ್ ಕ್ರೀಸ್ ನಲ್ಲಿದ್ದಾರೆ.

ಪಂದ್ಯದ 8.1ನೇ ಓವರ್ ನಲ್ಲಿ ಸ್ಮಿತ್ ಅವರು, ಸಿಕ್ಸರ್ ಗೆ ಪ್ರಯತ್ನಿಸಿ, ಔಟ್ ಸೈಡ್ ಆಫ್ ನಲ್ಲಿ ನಿಂತಿದ್ದ ಸ್ಟಾಯ್ನಿಸ್ ಅವರು ಹಿಡಿತ ಅದ್ಭುತ ಕ್ಯಾಚ್ ಗೆ ಬಲಿಯಾದರು. ಅಲ್ಲಿಗೆ, ಪುಣೆ, 43 ರನ್ ಮೊತ್ತಕ್ಕೆ 3 ವಿಕೆಟ್ ಕಳೆದುಕೊಂಡಿತು.

ಅದಕ್ಕೂ ಮುನ್ನ ಎಂಟು ಓವರ್ ಮುಗಿಯುವಷ್ಟರಲ್ಲಿ ಪುಣೆ ಪಡೆ, 2 ವಿಕೆಟ್ ಗೆ 48 ರನ್ ಗಳಿಸಿತ್ತು.

ಆರಂಭಿಕ ಮಾಯಾಂಕ್ ಅಗರ್ವಾಲ್ ಶೂನ್ಯ ಮೊತ್ತಕ್ಕೆ ಮೊದಲ ಓವರ್ ನಲ್ಲೇ ಔಟಾದರೆ, ಮತ್ತೊಬ್ಬ ಆರಂಭಿಕ ಅಜಿಂಕ್ಯ ರಹಾನೆ ಕೇವಲ 19 ರನ್ ಗಳಿಸಿ 7ನೇ ಓವರ್ ನಲ್ಲಿ ಔಟಾದರು.

ಪಂದ್ಯಕ್ಕೂ ಮುನ್ನ ನಡೆದ ಟಾಸ್ ನಲ್ಲಿ ಪಂಜಾಬ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಪುಣೆ ಪಾಲಿಗೆ ಇದು ಎರಡನೇ ಪಂದ್ಯವಾಗಿದ್ದರೆ, ಪಂಜಾಬ್ ಪಾಲಿಗೆ ಇದು ಮೊದಲ ಹಣಾಹಣಿ. ಪುಣೆ ತಂಡ ಈ ಹಿಂದೆ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿತ್ತು.

2017: Match between Rising Pune Supergiants Vs Kings XI Punjab

ತಂಡಗಳು ಇಂತಿವೆ:
ಪುಣೆ: ಅಜಿಂಕ್ಯ ರಹಾನೆ, ಮಯಾಂಕ್ ಅಗರ್ವಾಲ್, ಸ್ಟೀವನ್ ಸ್ಮಿತ್, ಎಂ.ಎಸ್. ಧೋನಿ, ಬೆನ್ ಸ್ಟೋಕ್ಸ್, ಮನೋಜ್ ತಿವಾರಿ, ರಜತ್ ಭಾಟಿಯಾ, ರಾಹುಲ್ ಚಾಹರ್, ಡೇನಿಯಲ್ ಕ್ರಿಶ್ಚಿಯನ್, ಇಮ್ರಾನಾ ತಾಹಿರ್, ಎಬಿ ದಿಂಡಾ.

ಪಂಜಾಬ್: ಹಾಶೀಂ ಆಮ್ಲಾ, ವೊಹ್ರಾ, ವೃದ್ಧಿಮಾನ್ ಸಾಹಾ, ಗ್ಲೆನ್ ಮ್ಯಾಕ್ಸ್ ವೆಲ್, ಡೇವಿಡ್ ಮಿಲ್ಲರ್, ಸ್ಟಾಯಿನ್ಸ್, ಅಕ್ಷರ್ ಪಟೇಲ್, ಸ್ವಪ್ನಿಲ್ ಸಿಂಗ್, ಮೋಹಿತ್ ಶರ್ಮಾ, ಸಂದೀಪ್ ಶರ್ಮಾ, ನಟರಾಜನ್.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+