ಫಾರ್ಮ್‌ನಲ್ಲಿಲ್ಲದ ಆಮ್ಲಾಗೆ ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡದಲ್ಲಿ ಸ್ಥಾನ!

ಕೇಪ್ ಟೌನ್, ಏಪ್ರಿಲ್ 18: ಮುಂದಿನ ತಿಂಗಳು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಫಾರ್ಮ್‌ನಲ್ಲಿ ಇಲ್ಲದ ಆರಂಭಿಕ ಆಟಗಾರ ಆಶಿಮ್ ಆಮ್ಲಾ ತಂಡದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಪ್ರಕಟಿತ ತಂಡದಲ್ಲಿ ಆಲ್ ರೌಂಡರ್ ಕ್ರಿಸ್ ಮೋರಿಸ್‌ಗೆ ಸ್ಥಾನ ಲಭಿಸಿಲ್ಲ.
'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'
ತಂಡದಲ್ಲಿ ಆಲ್ಮಾಗೆ ಸ್ಥಾನ ನೀಡಿರುವುದು ಚರ್ಚೆಗೆ ಆಸ್ಪದ ನೀಡಿದೆ. ಆಮ್ಲಾ ಹಿಂದೆ ಟಾಪ್ ಆರ್ಡರ್ ಬ್ಯಾಟ್ಸ್ಮನ್‌ಗಳಲ್ಲಿ ಗುರುತಿಸಿಕೊಂಡಿದ್ದು ನಿಜ. ಆದರೆ ಸದ್ಯದ ಸ್ಥಿತಿಯಲ್ಲಿ ಹಾಶಿಮ್ ಯಾವುದೇ ಕ್ರಿಕೆಟ್ ಮಾದರಿಯಲ್ಲೂ ಫಾರ್ಮ್‌ನಲ್ಲಿ ಇಲ್ಲ. ಆದರೂ ಕ್ರಿಕೆಟ್ ಆಫ್ರಿಕಾ ಆಮ್ಲಾಗೆ ಮಣೆ ಹಾಕಿದೆ.
ಈ ಹಿಂದೆ ಆಡಿರುವ 16 ಅಂತಾರಾಷ್ಟ್ರೀಯ ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದೇ ಶತಕ ಬಾರಿಸಿದ್ದ ಆಮ್ಲಾ 35.26ರ ಸರಾಸರಿ ಹೊಂದಿದ್ದರು. ಫಾರ್ಮ್ ಕಂಡುಕೊಳ್ಳುವ ಸಲುವಾಗಿ ಆಮ್ಲಾಗೆ ದೇಸಿ ಕ್ರಿಕೆಟ್‌ನಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಅಲ್ಲೂ ಒಟ್ಟು 32 ಇನ್ನಿಂಗ್ಸ್‌ಗಳಲ್ಲಿ ಕೇವಲ 6 ಇನ್ನಿಂಗ್ಸ್‌ಗಳಲ್ಲಷ್ಟೇ ಆಮ್ಲಾ ಉತ್ತಮ ಪ್ರದರ್ಶನ ನೀಡಿದ್ದರು.
15 ಜನರನ್ನೊಳಗೊಂಡ ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡ: ಫಾ ಡು ಪ್ಲೆಸಿಸ್ (ನಾಯಕ), ಕ್ವಿಂಟನ್ ಡಿ ಕಾಕ್, ಹಶಿಮ್ ಆಮ್ಲಾ, ಡೇವಿಡ್ ಮಿಲ್ಲರ್, ಜೆ.ಪಿ. ಡುಮಿನಿ, ಐಡೆನ್ ಮಾರ್ಕ್ರಮ್, ರಾಸ್ಸೀ ವಾನ್ ಡೆರ್ ಡಸೆನ್, ಡ್ವೇನ್ ಪ್ರಿಟೋರಿಯಸ್, ಆಂಡಿಲೆ ಫೆಹಲ್ಕ್ವೇವೊ, ಕಾಗಿಸೊ ರಬಾಡಾ, ಡೇಲ್ ಸ್ಟೇಯ್ನ್, ಲುಂಗಿ ಎನ್‌ಗಿಡಿ, ಆ್ಯನ್‌ರಿಚ್ ನಾರ್ಜ್, ಇಮ್ರಾನ್ ತಾಹಿರ್, ತಬ್ರಾಯಿಜ್ ಶಂಸಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications