2022ರ ವಿಶ್ವಕಪ್ ನನ್ನ 'ಹಂಸಗೀತೆ'ಯಾಗಲಿದೆ: ಮಿಥಾಲಿ ರಾಜ್

ನವದೆಹಲಿ: ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿಯಾಗಿರುವ ಮಿಥಾಲಿ ರಾಜ್ ವೃತ್ತಿ ಬದುಕಿಗೆ ಕಾಲಿರಿಸಿ 21 ವರ್ಷಗಳು ಕಳೆದಿವೆ. ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿರುವ ಮಿಥಾಲಿ ಮುಂದಿನ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಆಟ ನಿಲ್ಲಿಸುವ ಯೋಚನೆಯಲ್ಲಿದ್ದಾರೆ.
38ರ ಹರೆಯದ ಮಿಥಾಲಿ ರಾಜ್ ತಾನು ಅಂತಾರಾಷ್ಟ್ರೀಯ ಆಟ ನಿಲ್ಲಿಸುವ ಸಮಯವನ್ನು ಘೋಷಿಸಿದ್ದಾರೆ. 2022ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ತನ್ನ ಪಾಲಿನ ಕೊನೇ ಟೂರ್ನಿಯಾಗಲಿದೆ ಎಂದು ಮಿಥಾಲಿ ಹೇಳಿಕೊಂಡಿದ್ದಾರೆ.
'1971: ದ ಬಿಗಿನಿಂಗ್ ಆಫ್ ಇಂಡಿಯಾಸ್ ಕ್ರಿಕೆಟಿಂಗ್ ಗ್ರೇಟ್‌ನೆಸ್ (1971: The Beginning of India's Cricketing Greatness) ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಿಥಾಲಿ ರಾಜ್, 'ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದು 21 ವರ್ಷಗಳಾಗಿವೆ. 2022ರ ವಿಶ್ವಕಪ್ ನನ್ನ ಹಂಸಗೀತೆ (ಕೊನೇ ಟೂರ್ನಿ) ಅನ್ನೋದು ನನಗೆ ಗೊತ್ತಿದೆ' ಎಂದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 7000+ ರನ್ ಬಾರಿಸಿದ ವಿಶ್ವದ ಏಕಮಾತ್ರ ಮಹಿಳಾ ಕ್ರಿಕೆಟರ್ ದಾಖಲೆ ಮಿಥಾಲಿ ರಾಜ್ ಹೆಸರಿನಲ್ಲಿದೆ. ಅಷ್ಟೇ ಅಲ್ಲ, 100+ ಏಕದಿನ ಪಂದ್ಯಗಳಲ್ಲಿ ಭಾರತ ತಂಡ ಮುನ್ನಡೆಸಿದ ಹಿರಿಮೆ ಮಿಥಾಲಿಯದ್ದು. ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ 49 ಅರ್ಧ ಶತಕ, 7 ಶತಕಗಳ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications