Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದ ಮಹಿಳಾ ತಂಡ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳಿಗೆ ಪ್ರಸಕ್ತ ವರ್ಷ ತುಂಬ ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ವರ್ಷವಾಗಿದೆ. ಪುರುಷರ ತಂಡ ಸತತ 17ನೇ ಆವೃತ್ತಿಗಳಲ್ಲಿ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದು, ಒಮ್ಮೆಯೂ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿಲ್ಲ. ಆದರೆ ಪುರುಷರ ತಂಡ ಮಾಡಲಾಗದ ಸಾಧನೆಯನ್ನು ಮಹಿಳೆಯರು ಮಾಡಿ ಬೀಗಿದ್ದಾರೆ. ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂಧನಾ ಮುಂದಾಳತ್ವದ ಆರ್‌ಸಿಬಿ ತಂಡ ಇತಿಹಾಸ ನಿರ್ಮಿಸಿದೆ.

ಲೀಗ್‌ ಹಂತದಲ್ಲಿ ಕೊಂಚ ಮಂಕಾಗಿ ಕಂಡು ಬಂದಿದ್ದ ಆರ್‌ಸಿಬಿ ತಂಡ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಈ ವೇಳೆ ಸ್ಟಾರ್ ಆಟಗಾರರು ಕೆಚ್ಚೆದೆಯ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಈ ವೇಳೆ ಮಹಿಳಾ ಆಟಗಾರ್ತಿಯರು ಅಬ್ಬರದ ಪ್ರದರ್ಶನ ನೀಡಿ, ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದ ಸ್ಮರಣೀಯ ಕ್ಷಣವನ್ನು ಸಾಕಾರಗೊಳಿಸಿದರು. ಸ್ಮೃತಿ ಮಂಧಾನ ಮುಂದಾಳತ್ವದ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಟೂರ್ನಿಯಲ್ಲೇ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿ, ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು.

2024 Year-End Smriti Mandhana s RCB Women Clinch Maiden WPL Title

ಹೇಗಿತ್ತು ಫೈನಲ್‌ ಪಂದ್ಯ?

ಲೀಗ್‌ ಹಂತದಲ್ಲಿ ಆರ್‌ಸಿಬಿ ತಂಡವನ್ನು ಕಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೆ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಮುಖಾಮುಖಿ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಭಾರತದ ಆಟಗಾರ್ತಿ ಶೆಫಾಲಿ ವರ್ಮಾ 27 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 44 ರನ್‌ ಸಿಡಿಸಿ ತಂಡಕ್ಕೆಆಧಾರವದರು. ನಾಯಕಿ ಮೆಗ್ ಲ್ಯಾನಿಂಗ್‌ 23 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ಮಹತ್ವದ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ 12 ರನ್‌ ನೀಡಿ 4 ವಿಕೆಟ್‌ ಪಡೆದರು. ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಪಡೆದು ಮಿಂಚಿದರು.

2024 Year-End Smriti Mandhana s RCB Women Clinch Maiden WPL Title

ಸ್ಟಾರ್‌ಗಳ ಜವಾಬ್ದಾರಿಯುತ ಆಟ

ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟ್‌ಗೆ ನಾಯಕಿ ಸ್ಮೃತಿ ಮಂಧನಾ ಹಾಗೂ ಸೋಫಿಯಾ ಡಿವೈನ್‌ 49 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸೋಫಿಯಾ ಡಿವೈನ್‌ 27 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್‌ ಸಿಡಿಸಿದರು. ನಾಯಕಿ ಸ್ಮೃತಿ 39 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 31 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಆಲ್‌ರೌಂಡರ್‌ ಎಲ್ಲಿಸಾ ಪೆರ್ರಿ ಹಾಗೂ ರಿಚಾ ಘೋಷ ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಮೂರುನೇ ವಿಕೆಟ್‌ಗೆ ಈ ಜೋಡಿ 33 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ನೆರವಾದರು.

ಆರ್‌ಸಿಬಿ ಇನ್ನೂ 3 ಎಸೆತ ಬಾಕಿ ಇರುವಂತೆ 8 ವಿಕೆಟ್‌ಗಳಿಂದ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದರು.

Story first published: Monday, December 16, 2024, 8:00 [IST]
Other articles published on Dec 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+