ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸ ಬೆಳೆಸಲಿದೆ ಟೀಮ್ ಇಂಡಿಯಾ: ಯಾವಾಗ?
ಟೀಮ್ ಇಂಡಿಯಾ ಸದ್ಯ ವಿಶ್ರಾಂತಿಯಲ್ಲಿದೆ. ಇತ್ತೀಚಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತು. ಈ ವೇಳೆ ಯಂಗ್ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರವಾಗಿದೆ. ಇನ್ನು ಟೀಮ್ ಇಂಡಿಯಾ ಮತ್ತೊಮ್ಮೆ ಆಂಗ್ಲರ ನಾಡಿಗೆ ಭೇಟಿ ನೀಡಲಿದೆ. ಮುಂದಿನ ಪ್ರವಾಸದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ಸೀಮಿತ ಓವರ್‌ಗಳ ಪಂದ್ಯವನ್ನು ಆಡಲಿದೆ. ಈ ವೇಳೆ ಭಾರತ 5 ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತು. ಶನಿವಾರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಸೀಮಿತ ಓವರ್‌ಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇತ್ತೀಚಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತು. ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಗಿಲ್ ಪಡೆ ಬರ್ಮಿಂಗ್‌ಹ್ಯಾಮ್ ಹಾಗೂ ಓವಲ್‌ನಲ್ಲಿ ಗೆಲುವು ದಾಖಲಿಸಿತು. ಲೀಡ್ಸ್ ಹಾಗೂ ಲಾರ್ಡ್ಸ್ ಪಂದ್ಯಗಳನ್ನು ಇಂಗ್ಲೆಂಡ್ ತಂಡ ಗೆದ್ದು ಬೀಗಿತ್ತು. ಇನ್ನು ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಟೀಮ್ ಇಂಡಿಯಾದ ಪ್ರದರ್ಶನವನ್ನು ಕಂಡು ಎಲ್ಲರೂ ಖುಷಿ ಪಟ್ಟಿದ್ದರು. ಈಗ ಮತ್ತೊಮ್ಮೆ ಭಾರತ ಇಂಗ್ಲೆಂಡ್‌ನಲ್ಲಿ ಪಂದ್ಯ ಆಡಲಿದೆ.

ಅಂದಹಾಗೆ ಟೀಮ್ ಇಂಡಿಯಾ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಆದರೆ ಈ ಪ್ರವಾಸ ಈ ವರ್ಷದಲ್ಲಿ ಮಾಡುತ್ತಿಲ್ಲ. ಮುಂದಿನ ವರ್ಷದಲ್ಲಿ ಈ ಪ್ರವಾಸಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. 2026ರಲ್ಲಿ ಟೀಮ್ ಇಂಡಿಯಾ ಈ ಪ್ರವಾಸ ನಿರ್ಧರಿಸಲಾಗಿದೆ. ಮೊದಲು ಟಿ20 ಪಂದ್ಯ ಜುಲೈ 1 ರಂದು ಚೆಸ್ಟರ್ ಲೀ ಸ್ಟ್ರೀಟ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಜು.4 ಎರಡನೇ ಟಿ20 ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ, ಜು.7 ಮೂರನೇ ಟಿ20 ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ, ಜು.9 ನಾಲ್ಕನೇ ಪಂದ್ಯ ಬ್ರಿಸ್ಟಲ್‌ನಲ್ಲಿ, ಜು.11 ಐದನೇ ಟಿ20 ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಟಿ20 ಪಂದ್ಯ ಭಾರತೀಯ ಕಾಲಮಾನ ರಾತ್ರಿ 11ಕ್ಕೆ ಆರಂಭವಾಗಲಿದೆ.
ಏಕದಿನ ಸರಣಿ ಯಾವಾಗ?
ಮೂರು ಏಕದಿನ ಪಂದ್ಯಗಳು ಜು.14 ರಿಂದ ಆರಂಭವಾಗಲಿವೆ. ಮೊದಲ ಪಂದ್ಯಕ್ಕೆ ಬರ್ಮಿಂಗ್‌ಹ್ಯಾಮ್ ಅಂಗಳ ಸಾಕ್ಷಿಯಾಗಲಿದೆ. ಎರಡನೇ ಏಕದಿನ ಪಂದ್ಯ ಜು.16 ರಂದು ಕಾರ್ಡಿಫ್‌ನಲ್ಲಿ, ಮೂರನೇ ಏಕದಿನ ಪಂದ್ಯ ಜು.19 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯಗಳು ಭಾರತೀಯ ಸಂಜೆ 5.30ಕ್ಕೆ ಆರಂಭವಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications