Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2027ರ ವಿಶ್ವಕಪ್ ಆಡುವ ಬಗ್ಗೆ ಕೊಹ್ಲಿ ಸ್ಪಷ್ಟ ಮಾತು; ಸಾಬೀತುಪಡಿಸುವ ಅನಿವಾರ್ಯತೆ ಬಂದರೆ ನಾನು ಇರಲ್ಲ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ರಾಯ್‌ಪುರದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್‌ ತಮ್ಮ ಮೇಲಿನ ಟೀಕೆಗಳಿಗೆ ತಮ್ಮ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ. ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಮುಂದಿನ ಕ್ರಿಕೆಟ್‌ ಭವಿಷ್ಯ ಹಾಗೂ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.

ಸದ್ಯ ವಿರಾಟ್‌ ಕೊಹ್ಲಿ ಭಾರತದ ಪರ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ಈ ಮೊದಲೇ ವಿರಾಟ್‌ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಇವರು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಹಾಲಿ ಚಾಂಪಿಯನ್ ಆರ್‌ಸಿಬಿ ಎರಡನೇ ಬಾರಿ ಟ್ರೋಫಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ವಿರಾಟ್ ಸಹ ಶ್ರಮಿಸುತ್ತಿದ್ದಾರೆ. ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ವಿರಾಟ್ ಮನ ಬಿಚ್ಚಿ ಮಾತನಾಡಿದ್ದಾರೆ.

2027 World Cup

ಕೊಹ್ಲಿ ಕಳೆದ ವರ್ಷ ಇದೇ ಸಮಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇವರಿಗೆ ನಿರೂಪಕಿ ನೀವು ಟೆಸ್ಟ್‌ ಪಂದ್ಯಗಳನ್ನು ಕೊನೆಯವರೆಗೂ ಆಡುತ್ತೀರಿ ಎಂದು ನಾವು ಭಾವಿಸಿದ್ದೆವು ಎಂದು ಕೇಳಿದರು. ಆಗ ವಿರಾಟ್‌, ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ನನ್ನ ಫಾರ್ಮ್‌ ಉತ್ತಮವಾಗಿರಲಿಲ್ಲ. ದೇಹ ಮತ್ತು ಮನಸ್ಸು ಏನು ಹೇಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದ ಸಮಯ ಬರುತ್ತದೆ ಎಂದು ಕೊಹ್ಲಿ ಒಪ್ಪಿಕೊಂಡರು.

ತಂಡಕ್ಕೆ ಅಗತ್ಯವಿದ್ದರೆ...

ವಿರಾಟ್ ವಿಶ್ವಕಪ್ ಯೋಜನೆಗಳು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಸ್ಥಾನದ ಬಗ್ಗೆ ಪ್ರಸ್ತುತ ದೃಷ್ಟಿಕೋನದ ಬಗ್ಗೆ ಕೇಳಲಾದ ಪ್ರಶ್ನೆಗೆ ವಿರಾಟ್‌ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಂಡಕ್ಕೆ ನಾನು ಮೌಲ್ಯಯುತವೆಂದು ಭಾವಿಸಿದರೆ, ತಂಡಕ್ಕೆ ನನ್ನಿಂದ ಏನಾದರೂ ಕೊಡುಗೆ ನೀಡಬಹುದಾಗಿದ್ದರೆ ನಾನು ಆಡಲು ಸಿದ್ಧ ಎಂದು ತಿಳಿಸಿದ್ದಾರೆ. ಇನ್ನು ತಂಡ ನನ್ನ ಕ್ಷಮತೆಯನ್ನು ಸಾಬೀತುಪಡಿಸಲು ಬಯಸಿದರೆ, ಖಂಡಿತವಾಗಿಯೂ ನಾನು ಆ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ಏಕೆಂದರೆ ನಾನು ನನ್ನ ತಯಾರಿಯಿಂದ ಸಂಪೂರ್ಣವಾಗಿ ಪ್ರಾಮಾಣಿಕನಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ಆಟದ ಬಗ್ಗೆ ಸಂಪೂರ್ಣವಾಗಿ ಪ್ರಾಮಾಣಿಕನಾಗಿದ್ದೇನೆ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ದೇವರು ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞ. ಇಷ್ಟು ಅವಕಾಶಗಳಿಗೆ ನಾನು ಅದೃಷ್ಟಶಾಲಿ ಎಂದು ವಿರಾಟ್ ತಿಳಿಸಿದ್ದಾರೆ. ನಾನು ಯಾವಾಗಲೂ ಮೈದಾನಕ್ಕೆ ಇಳಿದಾಗ ಸಂಪೂರ್ಣ ಏಕಾಗ್ರತೆ ಮತ್ತು ಸಮರ್ಪಣಾಭಾವದಿಂದ ಆಡುತ್ತೇನೆ ಎಂದಿದ್ದಾರೆ.

2027 World Cup

ಏಕದಿನ ಕ್ರಿಕೆಟ್‌ನಲ್ಲಿ ನೀವು ಏನಾದರೂ 40 ಓವರ್‌ಗಳ ವರೆಗೆ ಒಂದು ಬೌಂಡರಿಯಿಂದ ಇನ್ನೊಂದು ಬೌಂಡರಿ ಓಡಲು ನೀವು ಸೂಚಿಸಿದರೆ ಅದನ್ನು ಮಾಡಲು ನಾನು ಸಿದ್ಧ. ನೀವು ಹೀಗೆ ಮಾಡಲು ಸೂಚಿಸಿದರೆ ಎಂದು ನಾನು ದೂರು ನೀಡುವುದಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ನಾನು ಪ್ರತಿ ಚೆಂಡನ್ನು ನನ್ನ ವೃತ್ತಿ ಜೀವನದ ಕೊನೆಯ ಎಸೆತ ಎಂದು ಭಾವಿಸುತ್ತೇನೆ. ಅಲ್ಲದೆ ಅದೇ ರೀತಿ ನಾನು ಬ್ಯಾಟಿಂಗ್ ಮಾಡುವೆ. ನಾನು ಅದೇ ಉತ್ಸಾಹದಿಂದ ವಿಕೆಟ್‌ಗಳ ನಡುವೆ ಓಡುತ್ತೇನೆ ಮತ್ತು ತಂಡಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ ಎಂದು ವಿರಾಟ್ ಹೇಳಿದ್ದಾರೆ.

Story first published: Friday, May 15, 2026, 16:41 [IST]
Other articles published on May 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+