ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪ್ರವಾಸಕ್ಕೆ 23-25 ಮಂದಿಯ ಬಲಿಷ್ಠ ಭಾರತ ತಂಡದ ನಿರೀಕ್ಷೆ

23-25 member Indian squad expected for Australia tour

ನವದೆಹಲಿ: ಕೊರೊನಾವೈರಸ್‌ ಇರುವುದರಿಂದ ಆರೋಗ್ಯ ಸುರಕ್ಷಾ ಮುನ್ನೆಚ್ಚರಿಕೆಯತ್ತ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಗಮನ ಹರಿಸುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬಿಸಿಸಿಐ 23-25 ಮಂದಿಯ ತಂಡವನ್ನು ಕಾಂಗರೂ ನಾಡಿಗೆ ಕಳುಹಿಸುವ ನಿರೀಕ್ಷೆಯಿದೆ.

ಖಾಲಿ ಮೈದಾನವೇ ಚಂದ ಎಂದ ವಾರ್ನರ್: ಹಿಂದಿದೆ ಸ್ವಾರಸ್ಯಕರ ಕಾರಣ!ಖಾಲಿ ಮೈದಾನವೇ ಚಂದ ಎಂದ ವಾರ್ನರ್: ಹಿಂದಿದೆ ಸ್ವಾರಸ್ಯಕರ ಕಾರಣ!

'ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳಂತೆ ಭಾರತ ಕೂಡ 23-25 ಮಂದಿಯ ತಂಡವನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವುದು ತಾರ್ಕಿಕ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬೆಳವಣಿಗೆಯ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

'ಅವನ ಆಟ ನೋಡಿ ಜನ ಸಚಿನ್‌ನ ಮರೀತಾರೆ' ಎಂದಿದ್ದರಂತೆ ಪಾಕ್ ಕ್ರಿಕೆಟಿಗ!'ಅವನ ಆಟ ನೋಡಿ ಜನ ಸಚಿನ್‌ನ ಮರೀತಾರೆ' ಎಂದಿದ್ದರಂತೆ ಪಾಕ್ ಕ್ರಿಕೆಟಿಗ!

'ನೆಟ್ ಬೌಲರ್‌ ಆಗಿ ಹೊರಗಿನವರನ್ನು ಕರೆದುಕೊಂಡು ಹೋಗುವ ಅಗತ್ಯವಿಲ್ಲ. ಒಂದು ವೇಳೆ ಭಾರತ 'ಎ' ತಂಡದ ಆಟಗಾರರು ಹೋದರೆ, ಇದು ನಮಗೆ ನಾಲ್ಕು ದಿನಗಳ ಪ್ರಥಮರ್ಜೆ ಪಂದ್ಯ ಆಡುವಾಗ ನೆರವಿಗೆ ಬರಲಿದೆ,' ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯಕೊಹ್ಲಿ-ಅನುಷ್ಕಾರ ಮಗು ಗಂಡೋ, ಹೆಣ್ಣೋ?: ಪಂಡಿತ್ ಜಗನ್ನಾಥ್ ಭವಿಷ್ಯ

ಐಪಿಎಲ್ ಪ್ಲೇ ಆಫ್‌ಗೆ ಪ್ರವೇಶಿಸದ ಆಟಗಾರರ ಸಹಿತ, ರವಿ ಶಾಸ್ತ್ರಿ ಮುಂದಾಳತ್ವದ ಬೆಂಬಲ ಸಿಬ್ಬಂದಿ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವುದನ್ನು ನಿರೀಕ್ಷಿಸಲಾಗಿದೆ. ಐಪಿಎಲ್ ಟೂರ್ನಿ ನವೆಂಬರ್‌ 10ಕ್ಕೆ ಮುಗಿದರೆ, ಅಕ್ಟೋಬರ್ 11ರಿಂದ ಭಾರತ-ಆಸ್ಟ್ರೇಲಿಯಾ ಸರಣಿಗಳು ಆರಂಭವಾಗಲಿವೆ. ಸರಣಿಯು 3 ಟಿ20, 4 ಟೆಸ್ಟ್, 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Saturday, September 5, 2020, 21:05 [IST]
Other articles published on Sep 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X