ನ್ಯೂಜಿಲೆಂಡಿನಿಂದ ಅಚ್ಚುಕಟ್ಟಾದ ಆಟ, ಭಾರತಕ್ಕೆ ಸೋಲಿನ ಪಾಠ

Posted By:

ರಾಜ್ ಕೋಟ್, ನವೆಂಬರ್ 05: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ 40 ರನ್ ಗಳಿಂದ ಭಾರತಕ್ಕೆ ಸೋಲುಂಟಾಗಿದೆ. ಈ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿ ಸದ್ಯಕ್ಕೆ 1-1ರಲ್ಲಿ ಸಮನಾಗಿದೆ.

ನ್ಯೂಜಿಲೆಂಡ್ ಪರ ವೇಗಿ ಟ್ರೆಂಟ್ ಬೌಲ್ಟ್, ಬ್ಯಾಟ್ಸ್ ಮನ್ ಕಾಲಿನ್ ಮನ್ರೋ ಮಿಂಚಿದರೆ, ಭಾರತದ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಉತ್ತಮ ಪ್ರದರ್ಶನ ನೀಡಿದರು.

ಸ್ಕೋರ್ ಕಾರ್ಡ್

ರನ್ ಚೇಸ್ : 197 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ 20 ಓವರ್ ಗೆ 156 ರನ್ ಮಾತ್ರಗಳಿಸಿತು. ಆರಂಭಿಕ ಅಟಗಾರರ ವೈಫಲ್ಯ, ಶ್ರೇಯಸ್ ಅಯ್ಯರ್ ಗೆ ಮುಂಬಡ್ತಿ ಪ್ರಯೋಜನಕ್ಕೆ ಬರಲಿಲ್ಲ. ಹಾರ್ದಿಕ್ ಪಾಂಡ್ಯ ಔಟಾದ ರೀತಿ ನೋಡಿದರೆ, ಆಲ್ ರೌಂಡರ್ ಪದಕ್ಕೆ ಅರ್ಥವೇ ಇರುವುದಿಲ್ಲ. ಇದೇ ಮಾತು ಅಕ್ಷರ್ ಪಟೇಲ್ ಗೂ ಅನ್ವಯ.

2nd T20I: Munro, Boult take New Zealand to a convincing win over India, level series 1-1

ಕೊಹ್ಲಿ 42 ಎಸೆತಗಳಲ್ಲಿ 65ರನ್, ಧೋನಿ 37 ಎಸೆತಗಳಲ್ಲಿ 49ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 34/4 ಪಡೆದು ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ಕಿವೀಸ್ ಇನ್ನಿಂಗ್ಸ್: ಮಾರ್ಟಿನ್ ಗಪ್ಟಿಲ್ 45ರನ್ ಹಾಗೂ ಕಾಲಿನ್ ಮನ್ರೋ 58 ಎಸೆತಗಳಲ್ಲಿ 7 ಬೌಂಡರಿ, 7ಸಿಕ್ಸರ್ ಇದ್ದ ಅಜೇಯ 109 ಶತಕ (ಇವರ ಎರಡನೇ ಟಿ20 ಶತಕ)ದ ನೆರವಿನಿಂದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತ್ತು. ತಿರುವನಂತಪುರದಲ್ಲಿ ನಿರ್ಣಾಯಕ ಟಿ20 ಪಂದ್ಯ ಮಂಗಳವಾರದಂದು ನಡೆಯಲಿದೆ.

Story first published: Sunday, November 5, 2017, 7:01 [IST]
Other articles published on Nov 5, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ