ಮಹಿಳಾ ಟಿ20: ಭಾರತಕ್ಕೆ 4 ವಿಕೆಟ್ ಸೋಲುಣಿಸಿ ಸರಣಿಗೆದ್ದ ನ್ಯೂಜಿಲ್ಯಾಂಡ್

ಆಕ್ಲೆಂಡ್, ಫೆಬ್ರವರಿ 8: ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಶುಕ್ರವಾರ (ಫೆಬ್ರವರಿ 8) ನಡೆದ ಭಾರತದ ಮಹಿಳೆಯರು ಮತ್ತು ನ್ಯೂಜಿಲ್ಯಾಂಡ್ ಮಹಿಳೆಯರ ನಡುವಿನ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವನಿತೆಯರು 4 ವಿಕೆಟ್ ಜಯ ಸಾಧಿಸಿದ್ದಾರೆ. ಮೂರು ಪಂದ್ಯಗಳ ಸರಣಿ 2-0ಯಿಂದ ನ್ಯೂಜಿಲ್ಯಾಂಡ್ ವಶವಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಜೆಮಿಮಾ ರೋಡ್ರಿಗಸ್ 72, ಸ್ಮೃತಿ ಮಂಧಾನ 36 ರನ್ ಸಹಾಯದೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಗಳನ್ನು ಕಳೆದು 135 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಆತಿಥೇಯ ಕಿವೀಸ್, ಸುಝೀ ಬೇಟ್ಸ್ 62 ರನ್ ಕೊಡುಗೆಯಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ರೋಚಕ ಗೆಲುವು ಪಡೆದುಕೊಂಡಿತು.
ನ್ಯೂಜಿಲ್ಯಾಂಡ್ ಪರ ಬೌಲಿಂಗ್ ವಿಭಾಗದಲ್ಲಿ ರೋಸ್ಮರಿ ಮೈರ್ 2 ವಿಕೆಟ್ ಪಡೆದರೆ, ಭಾರತ ಪರ ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಪಡೆದು ಮಿಂಚಿದರು. ನ್ಯೂಜಿಲ್ಯಾಂಡ್‌ನ ಸುಝೀ ಬೇಟ್ಸ್ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ತನ್ನದಾಗಿಸಿಕೊಂಡರು.
Story first published: Friday, February 8, 2019, 15:47 [IST]
Other articles published on Feb 8, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications